twitter
For Quick Alerts
ALLOW NOTIFICATIONS
For Daily Alerts

'ನನ್ನ ತಮ್ಮ ಶಂಕರ'ನ ಮೇಲೆ ಒಂದು ನೋಟ

By Mahesh

Next »

« Previous

ಶಂಕರ=ಶಂ(ಒಳ್ಳೆಯ)+ಕರ(ಹಸ್ತ)ಅಂದರೆ ಒಳ್ಳೆಯ ಹಸ್ತವುಳ್ಳವನು. ಬಾಲ್ಯದಲ್ಲಿ ತಂದೆಯಿಂದ ಕರೆಸಿಕೊಳ್ಳುತ್ತಿದ್ದ ಹೆಸರು 'ಅವಿನಾಶ'. ಹೀಗೆಂದರೆ ವಿನಾಶವಿಲ್ಲದವನು ಎಂದರ್ಥ. ಇದು ನನ್ನ ತಮ್ಮ ಶಂಕರ ಓದಿದಾಗ ನೆನಪಾದದ್ದು.

ಅನಂತ್ ನಾಗ್ ಬರೆದಿರುವ 'ನನ್ನ ತಮ್ಮ ಶಂಕರ' ಪುಸ್ತಕ ಶಂಕರ್ ನಾಗ್ ಬಗ್ಗೆ ನಮಗೆ ತಿಳಿಯದ ಅನೇಕ ಸಂಗತಿಗಳನ್ನು ವೈಭವೀಕರಿಸದೇ ತಿಳಿಸುತ್ತದೆ.

ಶಂಕರನ ಬಾಲಲೀಲೆಗಳಿಂದ ಶುರುವಾಗುವ ಕಥಾನಕವು ಅನೇಕ ಕಾರಣಕ್ಕೆ ಇಷ್ಟವಾಯಿತು. ಶಂಕರನ ಜೀವನದ ಒಳ-ಹೊರಗನ್ನು ತೋರುವ ಕಥೆಯಲ್ಲಿ ಎಲ್ಲೂ ಅತಿಯಾದ ವೈಭವೀಕರಣ ಇಲ್ಲ. ನಿರೂಪಣಾ ಶೈಲಿ ಸರಳ.

ಕೆಲವೊಮ್ಮೆ ಆಪ್ತರ ಬಗ್ಗೆ ಬರೆಯುವಾಗ ದುಃಖ ಸ್ಫೋಟಗೊಂಡು, ವಿಷಯ ಹಾದಿ ತಪ್ಪುವ ಸಾಧ್ಯತೆಗಳೇ ಹೆಚ್ಚು. ಆದರೆ ಈ ಪುಸ್ತಕದಲ್ಲಿ ವಾಸ್ತವಿಕತೆಯ ಅರಿವಿನೊಂದಿಗೆ ಗತಜೀವನದ ಸಮೀಕರಣ ನಡೆದಿದೆ ಎನ್ನಬಹುದು.

ಪುಸ್ತಕದಲ್ಲಿ ಶಂಕರನ ಒಳ್ಳೆಯತನದ ಚಿತ್ರಣವನ್ನು ಸ್ಥೂಲವಾಗಿ ನೀಡಿದ್ದಾರೆ ಅನಂತ್. ಆಶ್ರಮದಂತಹ ಗಂಭೀರವಾದ ಪರಿಸರವೂ ಕೂಡ ಹೇಗೆ ಮಗುವಿನ ನಗುವಿನಿಂದ ತಿಳಿಯಾಯಿತು ಎಂಬುದನ್ನು ಅನಂತ್ ಬರೆದಿದ್ದಾರೆ.

ಚಿಕ್ಕಂದಿನಲ್ಲಿ ದೊರೆಯುವ ಒಳ್ಳೆಯ ಸಂಸ್ಕಾರ, ಮುಂದೆ ಹೇಗೆ ಉಪಯೋಗವಾಗುತ್ತದೆ ಎಂಬ ಅರಿವು ಮೂಡಿಸುವಲ್ಲಿ ಅನಂತ್ ಯಶಸ್ವಿಯಾಗಿದ್ದಾರೆ. ಬಾಲ್ಯದಿಂದಲೇ ಶಂಕರನಲ್ಲಿ ಮೂಡಿದ್ದ ಕಲಿಕೆಯ ಹಂಬಲ, ಅವನ ಧೈರ್ಯದ ಸ್ವಭಾವ, ಗುರು ಹಿರಿಯರಲ್ಲಿ ತೋರುತ್ತಿದ್ದ ಗೌರವ ಎಲ್ಲವನ್ನೂ ಅನಂತ್‌ನಾಗ್ ವಿವರಿಸಿದ್ದಾರೆ.

ಕರಾವಳಿಯ ವಿಶಾಲವಾದ ಪರಿಸರದಲ್ಲಿ ಶಂಕರ ಬೆಳೆದ ಮೇಲೆ, ಮುಂಬಯಿಯ ಸಂಕುಚಿತ ಗಲ್ಲಿಗಳಲ್ಲಿ ಇಕ್ಕಟ್ಟಿನ ಚಾಳಿಯಲ್ಲಿ ವಾಸ ಮಾಡಿದ ಅನುಭವಗಳು ನಿಜಕ್ಕೂ ಸುಂದರವಾಗಿ ನಿರೂಪಿತವಾಗಿದೆ. ಕೊಂಕಣಿ, ಮರಾಠಿ, ಹಿಂದಿ ಹೀಗೆ ಅನೇಕ ಭಾಷೆಗಳ, ಸಂಸ್ಕೃತಿಯ ಪರಿಚಯದ ಲಾಭ ಮುಂದೆ ಶಂಕರನ ಜೀವನದ ಹೆಜ್ಜೆಯಲ್ಲಿ ಪ್ರತಿಬಿಂಬಿತವಾಗಿದೆ.

ಅಣ್ಣ ತಮ್ಮನ ಪ್ರೀತಿಗೆ ಸಾಟಿಯುಂಟೆ?: ಶಂಕರ್ ಹಾಗೂ ಅನಂತ್‌ರ ಒಡನಾಟದ ಬಗ್ಗೆ ಸುವಿಸ್ತಾರವಾಗಿರುವ ಕಥನದಲ್ಲಿ ಕಾಣಬರುವ ಅಂಶವೆಂದರೆ, ಭಾವನಾಜೀವಿಯಾದ ಅನಂತ್ ತಾವು ಕಲಿತ ಸದ್ವಿದ್ಯೆಗಳನ್ನೆಲ್ಲಾ ತನ್ನ ಪ್ರೀತಿಯ ತಮ್ಮನಿಗೆ ಒಂದೊಂದಾಗಿ ಧಾರೆಯೆರೆದಿದ್ದು. ಅಣ್ಣ ತಮ್ಮನ ಪ್ರೀತಿಯ ಒಡನಾಟದ ಬಗ್ಗೆ ಪುಸ್ತಕದಲ್ಲಿ ಹಲವು ಘಟನೆಗಳಿವೆ.

ಶಂಕರ್ ನಾಗರಕಟ್ಟೆ ಕಂಡ ಕನಸುಗಳ ಹಲವು ಅದರಲ್ಲೂ ವ್ಯಕ್ತವಾಗಿದ್ದು ಮಾತ್ರ ಕೆಲವು. .. ಗಾಂಧಿ ತತ್ವಪಾಲಕ ನಮ್ಮ ಶಂಕರ

Next »

« Previous

English summary
Kannada films popular actor late Shankar Nag's birthday celebrated all over Karnataka on Nov.9. Nanna Tamma Shankara is biography of actor by his brother Ananth Nag reviewed
Wednesday, November 9, 2011, 14:02
IIFA

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X