»   » ಕನ್ನಡಚಿತ್ರಗಳಿಗೆ ಇಂಗ್ಲಿಷ್ ಹೆಸರು ಬೇಡ: ಸಿದ್ಧಲಿಂಗಯ್ಯ

ಕನ್ನಡಚಿತ್ರಗಳಿಗೆ ಇಂಗ್ಲಿಷ್ ಹೆಸರು ಬೇಡ: ಸಿದ್ಧಲಿಂಗಯ್ಯ

Posted By:
Subscribe to Filmibeat Kannada

ಬೆಂಗಳೂರು,ಏ.9: ಆಂಗ್ಲ ಪದ ಬಳಸಿ ಹೆಸರಿಡುವ ಕನ್ನಡ ಚಿತ್ರಗಳಿಗೆ ಸರಕಾರ ಅನುದಾನವನ್ನು ನೀಡಬಾರದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಿದ್ಧಲಿಂಗಯ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಕನ್ನಡ ಚಲನಚಿತ್ರಗಳ ಮೇಲೆ ಸವಾರಿ ಮಾಡುತ್ತಿರುವ ಅನ್ಯ ಭಾಷೆಗಳ ಪ್ರಭಾವ ಮತ್ತು ಇಂಗ್ಲಿಷ್ ವ್ಯಾಮೋಹವನ್ನು ಕಡಿಮೆ ಮಾಡಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಚಿಂತನೆ ನಡೆಸಿದ್ದು, ಆಂಗ್ಲ ಶೀರ್ಷಿಕೆ ಹೊಂದಿರುವ ಕನ್ನಡದ ಯಾವ ಚಿತ್ರಗಳಿಗೂ ಅನುದಾನವನ್ನು ನೀಡಬಾರದು ಎಂದು ಸಿದ್ಧಲಿಂಗಯ್ಯ ಹೇಳಿದರು.

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರಗಳ ಮೇಲೆ ಇಂಗ್ಲಿಷ್ ಪ್ರಭಾವ ಹೆಚ್ಚಾಗತೊಡಗಿದ್ದು, ಅದನ್ನು ತಡೆಯಲು ಅನಿವಾರ್ಯವಾಗಿ ಕ್ರಮ ಕೈಗೊಳ್ಳಬೇಕಾಗಿದೆ ಎಂದರು. ಈಚೆಗೆ ಬಂದಿರುವ ಅನೇಕ ಚಿತ್ರಗಳ ಹೆಸರುಗಳು ಆಂಗ್ಲಪದಗಳಲ್ಲಿ ಇವೆ ಎಂದು ವಿಷಾದ ವ್ಯಕ್ತಪಡಿಸಿದರು. ಕನ್ನಡಚಿತ್ರಗಳಿಗೆ ಹೆಸರನ್ನು ಕನ್ನಡಲ್ಲೇ ಇಡಬೇಕು ಎಂಬ ಕಾನೂನನ್ನು ಶೀಘ್ರದಲ್ಲೇ ರೂಪಿಸಲಾಗುವುದು. ತಮಿಳು ಚಿತ್ರರಂಗದಲ್ಲಿ ಈಗಾಗಲೇ ಈ ಕಾನೂನು ಜಾರಿಯಾಗಿದ್ದು, ಕನ್ನಡದಲ್ಲಿಯೂ ಈ ಕಾನೂನು ಜಾರಿಗೊಳಿಸಲು ಪ್ರಯತ್ನ ನಡೆದಿದೆ ಎಂದು ಸಿದ್ಧಲಿಂಗಯ್ಯ ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada