ಸೆನ್ಸಾರ್ ಮಂಡಳಿಮುಂದೆ ಸಾಯಿಪ್ರಕಾಶ್ ಶ್ರೀ ನಾಗಶಕ್ತಿ

By Rajendra

ಭಕ್ತಿ ಪ್ರಧಾನ ಚಿತ್ರಗಳಿಗೆ ಎತ್ತಿದ ಕೈ ಎನಿಸಿಕೊಂಡಿರುವ ಸಾಯಿಪ್ರಕಾಶ್ ಅತ್ಯಂತ ಕಾಳಜಿಯಿಂದ ನಿರ್ದೇಶಿಸಿರುವ ಚಿತ್ರ 'ಶ್ರೀ ನಾಗಶಕ್ತಿ'. ಈ ಚಿತ್ರಈಗ ಸೆನ್ಸಾರ್ ಅನುಮತಿಗಾಗಿ ಪ್ರಾದೇಶಿಕ ಸೆನ್ಸಾರ್ ಮಂಡಳಿ ಮುಂದೆ ಬಂದಿದೆ. ಆದರೆ ಸೆನ್ಸಾರ್ ಮಂಡಳಿ ಮುಖ್ಯಸ್ಥರು ಚೆನೈನಲ್ಲಿ ಪ್ರಾಣಿ ದಯಾ ಸಂಘದ ಸಭೆಯಲ್ಲಿ ಪಾಲ್ಗೊಂಡು ಬಂದ ನಂತರ 'ಶ್ರೀ ನಾಗಶಕ್ತಿ' ಚಿತ್ರವನ್ನು ವೀಕ್ಷಿಸಿ ಸೆನ್ಸಾರ್ ಅನುಮತಿ ಪತ್ರವನ್ನು ನೀಡುವುದಾಗಿ ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಈ ಚಿತ್ರದ ಮೊದಲ ಪ್ರತಿ ತಯಾರಾಗಿದೆ ಎಂದು ನಿರ್ದೇಶಕ ಸಾಯಿಪ್ರಕಾಶ್ ತಿಳಿಸಿದ್ದಾರೆ.ಕನ್ನಡ ಸಿನಿಮಾದ ನಾಯಕಿಯಾದ ಚಂದ್ರಿಕಾ ತಯಾರಿಸಿರುವ 'ಶ್ರೀ ನಾಗಶಕ್ತಿ' ಚಿತ್ರಕ್ಕೆ ನಗರದ ಹೊರ ವಲಯದಲ್ಲಿರುವ ಮುಕ್ತಿ ನಾಗ ದೇವಸ್ಥಾನದ ಪಕ್ಕದಲ್ಲಿ ಭರ್ಜರಿ ಸೆಟ್ಟೊಂದರಲ್ಲಿ ಬಹುತೇಕ ಹಾಡಿನ ಚಿತ್ರೀಕರಣ ನಿರ್ದೇಶಕ ಸಾಯಿಪ್ರಕಾಶ್ ಮಾಡಿದ್ದಾರೆ.

ಬೇಬಿ ಕೃತಿ ಪುಟ್ಟ ನಾಗಶಕ್ತಿಯ ಪಾತ್ರವನ್ನು ನಿರ್ವಹಿಸಿದರೆ ಹಿರಿಯ ಶ್ರೀ ನಾಗಶಕ್ತಿ ಪಾತ್ರವನ್ನು ನಾಯಕಿ ಹಾಗೂ ನಿರ್ಮಾಪಕಿ ಚಂದ್ರಿಕಾ ನಿರ್ವಹಿಸುತ್ತಿದ್ದಾರೆ. ಶ್ರುತಿ ಹಾಗೂ ರಾಮ್‌ಕುಮಾರ್ ದಂಪತಿಗಳಾಗಿ ನಾಗಶಕ್ತಿಯ ಆರಾಧನೆ ಮಾಡುವ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಹಿರಿಯ ಲೇಖಕ ಗೋಟೂರಿಯವರು ನಾಗಶಕ್ತಿಯ ಮಹಿಮೆಯನ್ನು ಪುರಾಣಗಳಲ್ಲಿ ಹೇಗೆ ಉಲ್ಲೇಖಿಸಲಾಗಿದೆ ಎಂಬುದನ್ನು ತಿಳಿಸುತ್ತಿದ್ದಾರೆ. ಸಂಗೀತ, ಟೆನ್ನಿಸ್ ಕೃಷ್ಣ ಹಾಗೂ ಇನ್ನಿತರರು ತಾರಾಗಣದಲ್ಲಿದ್ದಾರೆ. ವೆಂಕಟ್-ನಾರಾಯಣ್ ಖ್ಯಾತಿಯ ಜೋಡಿಯಿಂದ ನಾರಾಯಣ್ ಈ ಚಿತ್ರದ ಮುಖಾಂತರ ಗಣೇಶ್ ನಾರಾಯಣ ಎಂಬ ಹೆಸರಿನಲ್ಲಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ನಾರಾಯಣ್ ಈ ಚಿತ್ರದ ಛಾಯಾಗ್ರಾಹಕರು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X