»   » ತಮಿಳುನಾಡಿನಲ್ಲಿ ನಮಿತಾಗೆ ಕಾಮನ ಗುಡಿ!

ತಮಿಳುನಾಡಿನಲ್ಲಿ ನಮಿತಾಗೆ ಕಾಮನ ಗುಡಿ!

Posted By: Staff
Subscribe to Filmibeat Kannada
Actress Namitha
ತಮಿಳರ ಕುರುಡು ಅಭಿಮಾನಕ್ಕೆ ಇಲ್ಲಿದೆ ಮತ್ತೊಂದು ನಿದರ್ಶನ. ತಮಿಳರ ಆರಾಧ್ಯ ಸೆಕ್ಸ್ ದೇವತೆ ನಮಿತಾಗೆ ನೆಲ್ಲೈ ಜಿಲ್ಲೆಯಲ್ಲಿ ಗುಡಿ ಕಟ್ಟಿಸಲು ಅವರ ಅಭಿಮಾನಿಗಳು ಮುಂದಾಗಿದ್ದಾರೆ. ಒಂದು ಕಾಲದಲ್ಲಿ ತಮಿಳರ ಆರಾಧ್ಯ ದೇವತೆಯಾಗಿದ್ದ ಖುಷ್ಬೂಗೆ ಗುಡಿ ಕಟ್ಟಿಸಿ ತಮ್ಮ ಅಂಧಭಿಮಾನವನ್ನು ಜಗಜ್ಜಾಹೀರು ಮಾಡಿದ್ದರು. ಈಗ ನಮಿತಾಗೆ ಗುಡಿ ಕಟ್ಟಿಸಿಕೊಳ್ಳುವ ಭಾಗ್ಯ ಒಲಿದಿದೆ.

ಅಭಿಮಾನಿಗಳೇನೋ ನಮಿತಾರ ಮೇಲಿನ ಹುಚ್ಚು ಪ್ರೀತಿಯಿಂದ ಗುಡಿ ಕಟ್ಟಿಸುತ್ತಿದ್ದಾರೆ. ಆದರೆ ಅಭಿಮಾನಿಗಳಿಗೆ ತಿಳಿಹೇಳಲು ನಮಿತಾರಿಗೇನಾಗಿದೆ ? ಅಭಿಮಾನಿಗಳ ಹುಚ್ಚು ಪ್ರೀತಿಯಲ್ಲಿ ಆಕೆಯೂ ಕೊಚ್ಚಿ ಹೋಗಿದ್ದಾರೆ. ನನಗೆ ಗೌರವ ಸೂಚಿಸುವ ಸಲುವಾಗಿ ಗುಡಿ ಕಟ್ಟಿಸುತ್ತಿರುವ ಸುದ್ದಿ ತಿಳಿದು ಅಚ್ಚರಿಯಾಗಿದೆ ಎಂದು ನಮಿತಾ ಪ್ರತಿಕ್ರಿಯಿಸಿದ್ದಾರೆ.

ಸೂರತ್‌‍ನಲ್ಲಿರುವ ನಮ್ಮ ಮನೆಗೆ ಪ್ರತಿ ಸಲ ಹೋದಾಗಲು ನನ್ನ ಕುಟುಂಬದವರಿಗೆ ಒಂದಲ್ಲ ಒಂದು ದಿನ ಇವರು ನನಗೆ ಗುಡಿ ಕಟ್ಟಿಸುತ್ತಾರೆ ನೋಡ್ತಾ ಇರಿ ಎಂದು ತಮಾಷೆ ಮಾಡುತ್ತಿದೆ. ಈಗ ಅದು ನಿಜವಾಗಿದೆ. ನನ್ನ ಹೆಸರಿನಲ್ಲಿ ಗುಡಿ ಕಟ್ಟಿಸುತ್ತಿರುವ ಬಗ್ಗೆ ನಾನು ಯೋಚನಾ ಮಗ್ನಳಾಗಿದ್ದೇನೆ. ಈ ಕುರಿತು ಯೋಚಿಸುತ್ತಿದ್ದರೆ ಅಚ್ಚರಿಯಾಗುತ್ತದೆ ಎಂದು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

ನಮಿತಾ ಅಭಿಮಾನಿಗಳು ಸ್ವಂತ ಇಚ್ಛೆಯಿಂದ ಈ ಗುಡಿ ಕಟ್ಟಿಸುತ್ತಿದ್ದಾರೆ. ಆದರೆ ಈ ರೀತಿಯ ಚಟುವಟಿಕೆಗಳನ್ನು ನಮಿತಾ ಮೇಡಂ ಖಂಡಿತಾ ನೀರೆರೆದು ಪೋಷಿಸುತ್ತಿಲ್ಲ. ಇದೆಲ್ಲಾ ಬೇಡ ಅಂತ ಹೇಳಿದರೆ ಅಭಿಮಾನಿಗಳು ಕೇಳುವ ಮೂಡ್‌ನಲ್ಲಿಲ್ಲ. ತಮ್ಮ ಆರಾಧ್ಯ ದೈವತೆ ಬಗೆಗಿನ ಪ್ರೀತಿ ಪ್ರೇಮದ ಸಂಕೇತವಾಗಿ ಅಷ್ಟೇ ಗುಡಿ ಕಟ್ಟಿಸುತ್ತಿದ್ದಾರೆ ಎನ್ನುತ್ತಾರೆ ನಮಿತಾ ಅಭಿಮಾನಿಗಳ ಸಂಘದ ಅಧ್ಯಕ್ಷ.

ಈ ಹಿಂದೆ ಖುಷ್ಬು ಅಭಿಮಾನಿಗಳು ಆಕೆಗಾಗಿ ಗುಡಿ ಕಟ್ಟಿಸಿದ್ದರು. ನಂತರ ಆಕೆ ಚಪ್ಪಲಿ ಧರಿಸಿ ದೇವತಾ ವಿಗ್ರಹಗಳ ಮುಂದೆ ಕಾಲ ಮೇಲೆ ಕಾಲು ಹಾಕಿ ಕುಳಿತುಕೊಂಡಿದ್ದನ್ನು ಕಂಡು ಆಕೆಯ ಅಭಿಮಾನಿಗಳು ಕೆರಳಿ ಕೆಂಡಮಂಡಲವಾಗಿದ್ದರು. ಈಗ ನಮಿತಾಗೆ ಗುಡಿ ಕಟ್ಟಿಸಿಕೊಳ್ಳುವ ಅದೃಷ್ಟ ಒಲಿದಿದೆ. ನಂತರ ಆಕೆ ಯಾವುದಾದರೂ ವಿವಾದದಲ್ಲಿ ಸಿಲುಕಿದರೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ತಮಿಳರ ಈ ಹುಚ್ಚು ಅಭಿಮಾನಕ್ಕೆ ಏನನ್ನ ಬೇಕೋ ತಿಳಿಯುತ್ತಿಲ್ಲ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮೋಹಕ ನಟಿ ನಮಿತಾ ಗ್ಯಾಲರಿ
ಸೀರೆ ಉಟ್ಟುಕೊಂಡಿದ್ದ ನಮಿತಾ ಬಂಧನ

English summary
Actress Namitha also having a Temple
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada