»   »  ರವಿಚಂದ್ರನ್ ಸಂತೋಷ ಕೂಟದಲ್ಲಿ ತಾರೆಗಳು

ರವಿಚಂದ್ರನ್ ಸಂತೋಷ ಕೂಟದಲ್ಲಿ ತಾರೆಗಳು

Posted By:
Subscribe to Filmibeat Kannada
Thanks giving meet from Ravichandran
ಅಮೃತ ಮಹೋತ್ಸವದಲ್ಲಿ ಭಾಗವಹಿಸಿದ್ದ ನಟ, ನಟಿಯರು, ಕಲಾವಿದರು, ತಂತ್ರಜ್ಞರು, ನೃತ್ಯ ನಿರ್ದೇಶಕರಿಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಸಂತೋಷ್ ಕೂಟ ಏರ್ಪಡಿಸಿ, ಕೇಕ್ ಕತ್ತರಿಸಿ ಧನ್ಯವಾದಗಳನ್ನು ತಿಳಿಸಿದ್ದಾ ರೆ. ಅಂದುಕೊಂಡಂತೆ ಷೋ ಯಶಸ್ವಿಯಾಯಿತೊ ಇಲ್ಲವೊ ಗೊತ್ತಿಲ್ಲ. ಅಂದುಕೊಂಡಂತೆ ಆಗಿಲ್ಲ ಎಂಬುದು ನನಗೂ ಗೊತ್ತು. ಹಾಗೆಯೇ ಅಂದುಕೊಂಡಂತೆ ಮಾತಬೇಕೆಂಬ ಆಸೆ ಇದೆ ಎಂದು ಕನಸುಗಾರ ರವಿಚಂದ್ರನ್ ಹೇಳಿದರು.

ಬೆಂಗಳೂರಿನ ಅಭಿಮಾನಿ ಕನ್ ವೆನ್ ಷನ್ ಹಾಲ್ ಭಾನುವಾರ ಕಲಾವಿದರು, ನೃತ್ಯಗಾರರಿಂದ ಗಿಜಿಗುಡುತ್ತಿತ್ತು. ಹದಿನೈದು ದಿನಗಳ ಕಾಲ ರಿಹರ್ಸಲ್ ನಲ್ಲಿ ಭಾಗವಹಿಸಿದ್ದ ಕಲಾವಿದರು, ನೃತ್ಯ ಕಲಾವಿದರು ಮತ್ತೊಮ್ಮೆ ಸಭೆ ಸೇರಿದ್ದದ್ದು ವಿಶೇಷವಾಗಿತ್ತು. ಕಿರಿತೆರೆ, ಹಿರಿತೆರೆಯ ತಾರೆಗಳು ಸಭೆಯಲ್ಲಿ ಮಿನುಗುತ್ತಿದ್ದವು. ಅಭಿನಯ ಶಾರದೆ ಜಯಂತಿ ಮಾತನಾಡುತ್ತಾ, ನಾವೆಲ್ಲರೂ ಒಂದೇ ಎಂಬುದನ್ನು ತೋರಿಸಿಕೊಟ್ಟಿದ್ದು ಖುಷಿ ಕೊಟ್ಟಿದೆ ಎಂದರು.

ಶಿವರಾಜ್ ಕುಮಾರ್, ಯೋಗೀಶ್, ಯಶ್, ರವಿಶಂಕರ್, ಪುನೀತ್, ರಾಘವೇಂದ್ರ ರಾಜ್ ಕುಮಾರ್, ನಿರ್ದೇಶಕ ನಾಗಾಭರಣ, ನಟಿಯರಾದ ಜಯಂತಿ, ರಮ್ಯಾ, ಅಂದ್ರಿತಾ ರೇ, ತಾರಾ, ಅನು ಪ್ರಭಾಕರ್, ಸುಧಾರಾಣಿ, ವಿನಯಾ ಪ್ರಕಾಶ್, ಪ್ರಿಯಾಂಕ ಉಪೇಂದ್ರ, ನೀತು ಭಾವನಾ ರಾವ್, ಚಿತ್ರಸಾಹಿತಿ ನಾಗೇಂದ್ರ ಪ್ರಸಾದ್ ಇನ್ನೂ ಮುಂತಾದವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ರವಿಚಂದ್ರನ್ ಗರಡಿಯಲ್ಲಿ ಸುಂದರ ಸುಂದರಿಯರು!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada