ದರ್ಶನ್ ಅವರಿಗೆ ಈಗ ಅರ್ಧಾಂಗಿಯೇ ಸತಿ ಸಾವಿತ್ರಿ

ಈಗಾಗಲೆ ಕನ್ನಡ ಚಿತ್ರರಂಗದ ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಷ್, ನವರಸ ನಾಯಕ ಜಗ್ಗೇಶ್ ಅವರು ಸಂಧನಾಕ್ಕೆ ಮುಂದಾಗಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸಂಧಾನಕ್ಕೆಒಪ್ಪಿದ್ದಾರೆ. ಸಂಧಾನ ಯಶಸ್ವಿಯಾದರೆ ದರ್ಶನ್ ಮನೆಗೆ ಬರಲಿದ್ದಾರೆ. ಇಲ್ಲದಿದ್ದರೆ ಶ್ರೀಕೃಷ್ಣ ಪರಮಾತ್ಮನ ಜನ್ಮಸ್ಥಾನ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ವಿಜಯಲಕ್ಷ್ಮಿ ಅವರು ಕಂಪ್ಲೇಟ್ ಹಿಂಪಡೆದರೆ ದರ್ಶನ್ ಬಚಾವಾಗುತ್ತಾರೆ. ಇಲ್ಲದಿದ್ದರೆ ಕಾನೂನು ಸಮರ ತಪ್ಪಿದ್ದಲ್ಲ. ಇಷ್ಟು ದಿನ ಕಾಪಾಡಿಕೊಂಡು ಬಂದಿದ್ದ ದರ್ಶನ್ ಇಮೇಜ್ ಈಗ ಸಂಪೂರ್ಣ ಡ್ಯಾಮೇಜ್ ಆಗಿದೆ. ಅಂಬಿ ಪ್ರಕಾರ ವಿಜಯಲಕ್ಷ್ಮಿ ಸಂಧಾನಕ್ಕೆ ಒಪ್ಪಿದ್ದಾರೆ.
ಇದು ನಮ್ಮ ಕುಟುಂಬಕ್ಕೆ ಸಂಬಂಧಿಸಿದ ವಿಷಯ. ಮಾಧ್ಯಮಗಳು ಇದನ್ನು ದೊಡ್ಡದು ಮಾಡಬೇಡಿ ಎಂದು ಫೋನ್ ಮೂಲಕ ಮಾಧ್ಯಮಗಳನ್ನು ವಿಜಯಲಕ್ಷ್ಮಿ ಕೋರಿದ್ದಾರೆ. ತಮ್ಮ ಚಿತ್ರಗಳ ಮೂಲಕ ಹಲವಾರು ಅಭಿಮಾನಿಗಳನ್ನು ಗಳಿಸಿದ ದರ್ಶನ್ ಮುಂದಿನ ಕತೆ ಏನು ಎಂಬುದು ಕಾಲ ನಿರ್ಧರಿಸಬೇಕು. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Senior Kannada actors including Ambareesh, Jaggesh and others to reach-out a compromise formula so that, Darshan can be saved from going behind the bars. If Vijayalaxmi agrees to withdraw the complaint, Darshan can escape from legal formalities, but he has already tarnished his image due to this domestic violence.
ದರ್ಶನ್ ಚಾಲೆಂಜಿಂಗ್ ಸ್ಟಾರ್ ನಟ ಪೊಲೀಸ್ ಬಂಧನ ಬೆಂಗಳೂರು darshan challenging star actor police arrest bangalore


Click it and Unblock the Notifications











