ಫಿಲಂಸಿಟಿಯಲ್ಲಿ ಯಶ್ 'ಮೊದಲಸಲ'
ಕರ್ನಾಟಕ ಟಾಕೀಸ್ ರವರ ಚೊಚ್ಚಲ ಕಾಣಿಕೆಯಾದ 'ಮೊದಲಸಲ' ಚಿತ್ರದ ಹಾಡುಗಳ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಕೇರಳದ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆಸಿ ರಾಜ್ಯಕ್ಕೆ ಹಿಂತಿರುಗಿದ ಚಿತ್ರತಂಡ ಈಗ ಬಿಡದಿ ಬಳಿಯ ಇನ್ನೋವೆಟಿವ್ ಫಿಲಂಸಿಟಿಯಲ್ಲಿ ಹಾಡೊಂದರ ಚಿತ್ರೀಕರಣದಲ್ಲಿ ತೊಡಗಿಕೊಂಡಿದೆ.
ವಿ.ನಾಗೇಂದ್ರಪ್ರಸಾದ್ ರಚಿನೆಯ "ನಾನ್ಯಾಕೊ ನಾನಾಗಿಲ್ಲ ಮೊದಲಾಸಲ - ನನ್ನ ಹಾರ್ಟ್ ಸೇಲಾಗೋಯ್ತು ಮೊದಲಾಸಲ ಎಂಬ ಹಾಡಿಗೆ ಯಶ್ ಹಾಗೂ ಭಾಮ ಹೆಜ್ಜೆ ಹಾಕಿದ್ದು, ಹರ್ಷ ನೃತ್ಯ ಸಂಯೋಜಿಸಿದ್ದಾರೆ. 'ನವಗ್ರಹ, ಜೊತೆಜೊತೆಯಲಿ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿದ್ದ ಮಲ್ಲಿಕಾರ್ಜುನ್ ಗದಗ ಪ್ರಥಮ ಬಾರಿಗೆ ಸಾಫ್ಟ್ ವೇರ್ ಮಿತ್ರ ಯೋಗೀಶ್‌ನಾರಾಯಣ್ ಜೊತೆ ಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ವೆಂಕಟೇಶ್‌ನಾಯಕ್, ಜಗದೀಶ್ ಕಾಳಗಿ, ಮಯೂರ್ ಮತ್ತು ಮಹೇಶ್‌ಪಟೇಲ್ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ.
ಪುರುಷೋತ್ತಮ್ ಈ ಚಿತ್ರದ ನಿರ್ದೇಶಕರು. ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಎಚ್.ಸಿ.ವೇಣು ಛಾಯಾಗ್ರಹಣ, ವಿ.ಹರಿಕೃಷ್ಣ ಸಂಗೀತ, ದೀಪು.ಎಸ್.ಕುಮಾರ್ ಸಂಕಲನ, ರವಿವರ್ಮ ಸಾಹಸ, ವಿ.ನಾಗೇಂದ್ರ ಪ್ರಸಾದ್ ಗೀತರಚನೆ, ದಿನೇಶ್ ಮಂಗಳೂರು ಕಲೆ ಹಾಗೂ ಶಶಿಧರ್ ಅವರ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಯಶ್, ಭಾಮ, ರಂಗಾಯಣ ರಘು, ಅವಿನಾಶ್, ಶರಣ್, ತಾರಾ, ಯೋಗೀಶ್‌ನಾರಾಯಣ್, ರಾಕೇಶ್, ತಿಮ್ಮೇಗೌಡ ಮುಂತಾದವರಿದ್ದಾರೆ.


Click it and Unblock the Notifications











