»   » ಟಿಪ್ಪುಸುಲ್ತಾನ್ ಖ್ಯಾತಿಯ ಸಂಜಯ್ ಗೆ ಕೋರ್ಟ್ ನೋಟಿಸ್

ಟಿಪ್ಪುಸುಲ್ತಾನ್ ಖ್ಯಾತಿಯ ಸಂಜಯ್ ಗೆ ಕೋರ್ಟ್ ನೋಟಿಸ್

Posted By:
Subscribe to Filmibeat Kannada


ಬೆಂಗಳೂರು, ಜ.09: ಬೆಂಗಳೂರು ಹೊರವಲಯದಲ್ಲಿರುವ ಗೋಲ್ಡನ್ ಪಾಮ್ಸ್ ವರ್ಲ್ಡ್ ರೆಸಾರ್ಟ್ ನ ಮಾಲೀಕರಾದ ನಟ ಸಂಜಯ್ ಖಾನ್ ರವರು ತೆರಿಗೆ ಇಲಾಖೆಗೆ ಹಣ ಕಟ್ಟದೆ ಉಳಿಸಿಕೊಂಡಿರುವ ಮೊತ್ತ 20 ಕೋಟಿ ದಾಟಿದೆ. ಬಾಕಿ ಉಳಿಸಿಕೊಂಡಿರುವ ಮೊತ್ತದ ಮೊದಲ ಕಂತಿನ ರೂಪದಲ್ಲಿ 8 ಕೋಟಿ ರು ಗಳನ್ನು ಫೆ. 7ರೊಳಗೆ ಪಾವತಿಸುವಂತೆ ಸ್ಥಳೀಯ ವಿಭಾಗೀಯ ಪೀಠ ಆದೇಶ ಹೊರಡಿಸಿದೆ.

ಫೆ.7 ರ ನಂತರ ನಾಲ್ಕು ವಾರದೊಳಗೆ ಉಳಿದ ಮೊತ್ತವನ್ನು ಖಾನ್ ಪಾವತಿಸಬೇಕು. ತಪ್ಪಿದಲ್ಲಿ ಸಂಸ್ಥೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಮುಕ್ತವಾಗಿದೆ ಎಂದು ಮಧ್ಯಂತರ ಆದೇಶದಲ್ಲಿ ವಿಭಾಗೀಯ ಪೀಠ ಹೇಳಿದೆ.

ಅಧಿಕಾರಿಗಳ ಶಾಮೀಲು? : ತೆರಿಗೆ ಇಲಾಖೆ ನೀಡಿದ ನೋಟೀಸ್ ಪ್ರಶ್ನಿಸಿ ನಟ ಸಂಜಯ್ ಖಾನ್ ಸೇರಿದಂತೆ ಎಂಟು ಜನ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ ಏಕ ಸದಸ್ಯ ಪೀಠ ತಿರಸ್ಕರಿಸಿತ್ತು. ಈ ತೀರ್ಪು ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು. ರೆಸಾರ್ಟ್ ನವರೊಂದಿಗೆ ತೆರಿಗೆ ಇಲಾಖೆಯ ಅಧಿಕಾರಿಗಳು ಶಾಮೀಲಾಗಿರುವುದರಿಂದ 20 ಕೋಟಿ ರು ಗಳಿಗೂ ಅಧಿಕ ಮೊತ್ತದ ತೆರಿಗೆ ಬಾಕಿ ಉಳಿದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.ಈ ಬಗ್ಗೆ ಇಲಾಖಾ ಅಧಿಕಾರಿಗಳ ವಿರುದ್ಧ ನಡೆದ ತನಿಖಾ ವರದಿಯನ್ನು ಫೆ.7 ರೊಳಗೆ ಸಲ್ಲಿಸುವಂತೆಯೂ ಏಕ ಸದಸ್ಯ ಪೀಠ ಆದೇಶ ನೀಡಿದೆ.

(ದಟ್ಸ್ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada