»   » ಅವಾರ್ಡುಗಳನ್ನು ತಂದುಕೊಟ್ಟ ಮಲೆಯಾಳಿ ಸಿನಿಮಾಗಳನ್ನೇ ಒಂದು ಕಾಲದಲ್ಲಿ ದೂರಿದ್ದ ಊರ್ವಶಿ ಕನ್ನಡದ ನಟ- ನಟಿಯರ ಅಭಿನಯ ಶೂನ್ಯತೆಯ ಬಗ್ಗೆ ಉದ್ದುದ್ದಾ ಮಾತಾಡಿದ್ದಾರೆ.

ಅವಾರ್ಡುಗಳನ್ನು ತಂದುಕೊಟ್ಟ ಮಲೆಯಾಳಿ ಸಿನಿಮಾಗಳನ್ನೇ ಒಂದು ಕಾಲದಲ್ಲಿ ದೂರಿದ್ದ ಊರ್ವಶಿ ಕನ್ನಡದ ನಟ- ನಟಿಯರ ಅಭಿನಯ ಶೂನ್ಯತೆಯ ಬಗ್ಗೆ ಉದ್ದುದ್ದಾ ಮಾತಾಡಿದ್ದಾರೆ.

Subscribe to Filmibeat Kannada

*ಶರ್ಮಿಳಾ, ತಿರುವನಂತಪುರ

ನಿಮಗೆ ‘ನಾನು ನನ್ನ ಹೆಂಡ್ತಿ’ ಎಂಬ ರವಿಚಂದ್ರನ್‌ ಸಿನಿಮಾ ನೆನಪಿದೆಯಾ?
ಇದ್ದರೆ, ಅದರಲ್ಲಿ ರವಿಚಂದ್ರನ್‌ ಮೇಲೆ ಸಾಧಾರಣ ಹೊರಳಾಡಿದ ನಟಿ ಊರ್ವಶಿ ನೆನಪಿರುತ್ತಾಳೆ. ಆ ಊರ್ವಶಿಗೂ ಈಗಿನ ಊರ್ವಶಿಗೂ ಅಜಗಜಾಂತರ ವ್ಯತ್ಯಾಸವಿದೆ.

ಮಲೆಯಾಳಿ ಮೂಲದ ಈ ನಟಿ ತಾನು ಬಹು ಭಾಷಾ ತಾರೆ ಎಂಬ ಕಾರಣಕ್ಕೆ ಉಂಡ ಮಲೆಯಾಳಿ ತಟ್ಟೆಗೇ ಒಂದೊಮ್ಮೆ ಉಗಿದದ್ದುಂಟು. ಮುಮ್ಮುಟ್ಟಿ, ಮೋಹನ್‌ ಲಾಲ್‌ರಂಥಾ ನಟರ ಬಗ್ಗೆ ತಾಸುಗಟ್ಟಲೆ ವಿಮರ್ಶೆ ಮಾಡುತ್ತಾ ಸಂದರ್ಶಕರಿಗೆ ಪೇಜುಗಟ್ಟಲೆ ಮಾಹಿತಿ ಕೊಡುವ ಜಾಯಮಾನದ ಊರ್ವಶಿ ಕನ್ನಡದ ನಟ- ನಟಿಯರು ಅಭಿನಯ ಗಂಧವಿಲ್ಲದವರು ಅಂತ ಆರೋಪಿಸಿದ್ದಾರೆ.

ಇಂಗ್ಲಿಷ್‌ ನಿಯತಕಾಲಿಕವೊಂದಕ್ಕೆ ಸಂದರ್ಶನ ಕೊಟ್ಟ ಕಾರಣ ಹಾಗೂ ಅದು ಕೇರಳದಲ್ಲಿ ಸಾಕಷ್ಟು ಖರ್ಚಾಗುವ ಕಾರಣ ಮಲೆಯಾಳಿ ನಟರನ್ನು ವಾಚಾಮಗೋಚರ ಹೊಗಳಿರುವ ಊರ್ವಶಿ ಕನ್ನಡದ ನಟ- ನಟಿಯರಿಗೆ ಅಭಿನಯದ ಗಂಧವೇ ಇಲ್ಲ ಎಂಬಂತೆ ಮಾತಾಡಿದ್ದಾಳೆ. ಈಕೆಯ ಹೊಗಳಿಕೆಯ ಮಾತುಗಳನ್ನು ಮುಮ್ಮುಟ್ಟಿಯಂಥಾ ನಟರ ಮುಂದೆ ಮೆಲುಕು ಹಾಕಿದರೆ, ಕಟಕಿ ನಗೆ ನಗುತ್ತಾರೆ. ತಾನು ಪೀಚು ಹುಡುಗಿಯಾಗಿದ್ದ ಕಾಲದಲ್ಲಿ ಊರ್ವಶಿ, ‘ಮಲೆಯಾಳಿ ಸಿನಿಮಾದವರಿಗೆ ಪ್ಲಾನಿಂಗೇ ಇಲ್ಲ. 11 ಗಂಟೆಯ ಶೂಟಿಂಗಿಗೆ ಬೆಳಗ್ಗೆ 8 ಗಂಟೆಗೆ ಫೋನ್‌ ಮಾಡ್ತಾರೆ. ನಮ್ಮಂಥ ಬಹುಭಾಷಾ ತಾರೆಯರಿಗೆ ಟೈಂ ಹೊಂದಿಸೋದು ಎಷ್ಟು ತ್ರಾಸೂಂತ ಗೊತ್ತಾಗೋದೇ ಇಲ್ಲ’ ಅಂತ ದೂರಿದ್ದನ್ನು ನೆನಪಿಸುತ್ತಾರೆ.

ರಂಭಾ ಕುಣಿತವನ್ನು ಕ್ಯಾಬರೆಗೆ ಹೋಲಿಸುವ ಊರ್ವಶಿ ಕಾಲ್‌ಷೀಟಿಗೆ ಕಮಿಟ್ಟಾಗದೆ ಕೈಕೊಟ್ಟಿರುವ ನಿರ್ಮಾಪಕರ ಸಂಖ್ಯೆ ಮಲೆಯಾಳಂ ಸಿನಿಮಾದಲ್ಲೂ ಕಡಿಮೆಯಿಲ್ಲವಂತೆ. ಆದರೆ, ಅದೃಷ್ಟ ಒದ್ದುಕೊಂಡು ಬರುತ್ತದೆ ಅಂತಾರಲ್ಲ, ಹಾಗೆ ಈಕೆಗೆ ಪ್ರಶಸ್ತಿ ತಂದಿತ್ತ ಚಿತ್ರಗಳೂ ಮಲೆಯಾಳಿ ಭಾಷೆಯವೇ.

ದಢೂತಿ ದೇಹ, ದಕ್ಷಿಣ ಭಾರತದ ಸಾಂಪ್ರದಾಯಿಕ ಹೆಂಗಸಿನ ಮುಖಭಾವವನ್ನೇ ಸದ್ಯಕ್ಕೆ ಬಂಡವಾಳವಾಗಿಸಿಕೊಂಡಿರುವ ಊರ್ವಶಿ ‘ಕೋತಿಗಳು ಸಾರ್‌ ಕೋತಿಗಳು’ ಸಿನಿಮಾದಲ್ಲಿ ರಮೇಶ್‌ ಹೆಂಡತಿಯಾಗಿ ನಟಿಸಿದ್ದರು. ಆ ನಂತರ ಊರ್ವಶಿಗೆ ಮಾರುಕಟ್ಟೆಯಲ್ಲಿ ದಕ್ಕುತ್ತಿರುವ ಪಾತ್ರಗಳು ಅಂಥವೇ.

ಅಂದಹಾಗೆ, ಅಭಿನಯದ ಗಂಧ- ಗಾಳಿಯಿಲ್ಲ ಅಂತ ಈಕೆ ಆರೋಪಿಸಿರುವವರ ಪೈಕಿ ರಮೇಶ್‌, ಪ್ರೇಮಾ, ತಾರಾ, ಮೋಹನ್‌ ಹಾಗೂ ಎಸ್‌. ನಾರಾಯಣ್‌ ಇದ್ದಾರೆ.

ಇಷ್ಟೆಲ್ಲ ಆರೋಪಗಳನ್ನು ಹೊರಿಸಿದ ನಂತರವೂ ‘ಕತ್ತೆಗಳು ಸಾರ್‌ ಕತ್ತೆಗಳು’ ಕನ್ನಡ ಸಿನಿಮಾದಲ್ಲಿ ತಾವು ನಟಿಸುತ್ತಿರುವುದು ಯಾಕೆ ಅಂತ ಕಿಚಾಯಿಸಿದರೆ, ದುಡ್ಡಿಗಂತೂ ಅಲ್ಲ ಅಂತ ಊರ್ವಶಿ ಕೆಟ್ಟ ನಗೆ ನಗುತ್ತಾರೆ ! ಕನ್ನಡದ ನಟ- ನಟಿಯರನ್ನು ಈಕೆ ಆರೋಪಿಸಿರುವುದು ರಾಜೇಂದ್ರ ಸಿಂಗ್‌ ಬಾಬುಗೆ ಗೊತ್ತೇ ಇಲ್ವಂತೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada