»   » ದರ್ಶನ್‌ ಕೊಬ್ಬೀಗ ಕರಗಿದೆ!

ದರ್ಶನ್‌ ಕೊಬ್ಬೀಗ ಕರಗಿದೆ!

Posted By:
Subscribe to Filmibeat Kannada

ದರ್ಶನ್‌ ಈಗ ಸ್ಲಿಂ ಮತ್ತು ಟ್ರಿಮ್‌ ಸಹ ಆಗಿದ್ದಾರೆ. ಒಂದಲ್ಲ ಎರಡಲ್ಲ ಹದಿನೆಂಟು ಕೆ.ಜಿ. ತೂಕವನ್ನು ಇಳಿಸಿಕೊಂಡಿದ್ದಾರೆ. ‘ಕಲಾಸಿಪಾಳ್ಯ’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ದರ್ಶನ್‌ ಮತ್ತು ರಕ್ಷಿತಾ ಇಬ್ಬರು ಮೈಕರಗಿಸುತ್ತಿರುವುದು ಒಂದು ವಿಶೇಷ. ‘ಅಯ್ಯ’ ಚಿತ್ರದಲ್ಲಿ ಸ್ಲಿಂ ಆಗಿರುವ ದರ್ಶನ್‌ರನ್ನು ಕಾಣಬಹುದಂತೆ.

ತೂಕ ಕಡಿಮೆ ಮಾಡಿಕೊಳ್ಳಲು ದರ್ಶನ್‌ ಸಾಕಷ್ಟು ತಿಣುಕಿದ್ದಾರೆ. ಈ ನಿಟ್ಟಿನಲ್ಲಿ ಮೊನ್ನೆಯಷ್ಟೆ ತಮ್ಮ ಬಲಭುಜದ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡಿದ್ದಾರೆ. ಸಿಂಗಾಪುರದಲ್ಲಿ ಇದಕ್ಕಾಗಿ 8.2ಲಕ್ಷ ಖರ್ಚು ಮಾಡಿದ್ದಾರೆ. ಎಂಟು ದಿನಗಳ ಕಾಲ ದರ್ಶನ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ಸ್ಲಿಂ ಆಗಲು ಕಳೆದ ನಾಲ್ಕು ತಿಂಗಳಿಂದ ದರ್ಶನ್‌ ಅನ್ನ ತಿನ್ನುತ್ತಿರಲಿಲ್ಲ. ಒಂದು ಇಡ್ಲಿಯನ್ನು ಬೆಳಗಿನ ತಿಂಡಿಯಾಗಿ, ಹಣ್ಣುಗಳನ್ನು ಮಧ್ಯಾಹ್ನದ ಊಟಕ್ಕೆ, ರಾತ್ರಿಯ ಭೋಜನವಾಗಿ ಎರಡು ಚಪಾತಿ ಜೊತೆಗೆ ಕೋಳಿ ಮಾಂಸವನ್ನು ಅವರು ತಿನ್ನುತ್ತಿದ್ದರಂತೆ. ಆ ಪರಿಣಾಮ 18ಕಿ.ಲೋ.ಮೈ ಇಳಿಸಿ ಹಗುರಾಗಿದ್ದೇನೆ ಎನ್ನುತ್ತಾರೆ ದರ್ಶನ್‌.

ಮತ್ತೊಂದು ಸಂಗತಿ ಅಂದ್ರೆ, ತಮ್ಮ ದೀರ್ಘಕಾಲದ ಮಿತ್ರ ಅಂಜಲಿ ನಾಗರಾಜ್‌ಗಾಗಿ ‘ಶಾಸ್ತ್ರಿ ಚಿತ್ರ’ದಲ್ಲಿ ಉಚಿತವಾಗಿ ನಟಿಸಲು ದರ್ಶನ್‌ ನಿರ್ಧರಿಸಿದ್ದಾರೆ. ಭೈರೇಗೌಡ್ರು ನಿರ್ಮಿಸಿರುವ ‘ಅಯ್ಯ’ ಫೆಬ್ರವರಿ 11ಕ್ಕೆ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರಕ್ಕೆ ಸಂಭಾವನೆಯ ರೂಪ ವಾಗಿ 130 ್ಡ110 ಅಳತೆಯ ನಿವೇಶನ ಪಡೆದಿರುವ ದರ್ಶನ್‌ಗೆ ಪ್ರಾಣಿಗಳೆಂದರೆ ಪ್ರಾಣ. ಸರಕಾರದ ಸಮ್ಮತಿಯಿರುವ ವಿವಿಧ ಪ್ರಾಣಿಗಳ ‘ಮಿನಿ ಜೂ’ ಮಾಡುವ ಹಂಬಲ ಅವರಲ್ಲಿದೆ.

ಪ್ರಸ್ತುತ ದರ್ಶನ್‌ ಬಳಿ ಐದು ಒಳ್ಳೆಯ ನಾಯಿಗಳಿವೆ. ಒಂದಷ್ಟು ಪಕ್ಷಿಗಳಿವೆ. ಅವುಗಳಿಗೆ ಸದಾ ಪ್ರೀತಿಯನ್ನು ಉಣ ಬಡಿಸುತ್ತಿದ್ದಾರೆ. ಪ್ರಾಣಿಗಳ ಮಾತಿರಲಿ, ಕುಟುಂಬ ವಿಸ್ತರಣೆಗೆ ಏನಾದರೂ ಯೋಜನೆ ? - ಈ ಪ್ರಶ್ನೆಗೆ ದರ್ಶನ್‌ ನಕ್ಕು ಸುಮ್ಮನಾದರು.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada