»   » ಈ ವಾರ ಜಗ್ಗೇಶ್‌ರ 100ನೇ ಚಿತ್ರ ‘ಮಠ’ ಬಿಡುಗಡೆ

ಈ ವಾರ ಜಗ್ಗೇಶ್‌ರ 100ನೇ ಚಿತ್ರ ‘ಮಠ’ ಬಿಡುಗಡೆ

Posted By:
Subscribe to Filmibeat Kannada


ಬಿಡುಗಡೆಗೆ ಮೊದಲೇ ಸಾಕಷ್ಟು ಸುದ್ದಿ ಎಬ್ಬಿಸಿದ ‘ಮಠ’ ಶುಕ್ರವಾರ ತೆರೆಗೆ ಬರುತ್ತಿದೆ. ಅಲ್ಲದೇ ಈ ಚಿತ್ರದ ಮೂಲಕ ಜಗ್ಗೇಶ್‌ ಶತಕೇಶ್‌ ಆಗಿದ್ದಾರೆ.

ಇದು ಅಪ್ಪಟ ಸ್ವಮೇಕ್‌ ಚಿತ್ರ. ಅಪ್ಪಟ ನಗೆಯ ರಸಮಯ ಚಿತ್ರ. ನಾವು ಯಾವ ಭಾಷೆಯಿಂದಲೂ ಏನನ್ನೂ ಕದ್ದಿಲ್ಲ. ಪ್ರೇಕ್ಷಕರ ಕಾಸಿಗೆ ಮೋಸವಾಗೋಲ್ಲ ಅನ್ನೋದು ನಮ್ಮ ಗ್ಯಾರಂಟಿ -ಹೀಗೆ ‘ಮಠ’ದ ಜಾಹೀರಾತುಗಳು ಎಲ್ಲೆಡೆ ಪ್ರೇಕ್ಷಕರ ಕಣ್ಣು ಕುಕ್ಕುತ್ತಿವೆ.

ಚಿತ್ರದ ಕಥೆ, ಉಪಕಥೆ, ಚಿತ್ರಕಥೆ, ಸಂಭಾಷಣೆ, ಪ್ರಚಾರಕಲೆ ಪರಿಕಲ್ಪನೆ, ನಿರ್ದೇಶನ ಸೇರಿದಂತೆ ನಾನಾ ಜವಾಬ್ದಾರಿಗಳನ್ನು ನಿಭಾಯಿಸಿದವರು ಗುರುಪ್ರಸಾದ್‌. ವಿ.ಮನೋಹರ್‌ ಮತ್ತು ಉದಯ ರವಿ ಜಂಟಿಯಾಗಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸಿ.ಅಶ್ವಥ್‌ ಹಾಡಿರುವ ‘ತಪ್ಪುಉ ಮಾಡದವರು ಯಾರವ್ರೆ? ತಪ್ಪೇ ಮಾಡದವರು ಎಲ್ಲವ್ರೆ...’ ಗೀತೆ ಈಗಾಗಲೇ ಎಲ್ಲರ ನಾಲಿಗೆಯ ಮೇಲೆ ನಲಿದಾಡುತ್ತಿದೆ.

ಗಿರೀಶ್‌ ಮಟ್ಟಣ್ಣನವರ್‌, ನಾಗತಿಹಳ್ಳಿ ಚಂದ್ರಶೇಖರ್‌,ತಾರಾ, ವನಿತಾವಾಸು, ಆರ್‌.ಎನ್‌.ಸುದರ್ಶನ್‌, ಮಂಡ್ಯ ರಮೇಶ್‌, ವಿ.ಮನೋಹರ್‌ ಸೇರಿದಂತೆ ದೊಡ್ಡ ತಾರಾಬಳಗ ‘ಮಠ’ದೊಳಗಿದೆ.

ಈ ವಾರ -7 ಓ’ಕ್ಲಾಕ್‌ : ಥರ ಥರ ಹೊಸಥರನೋ ಅನ್ನುವಂತಿರುವ ಎನ್‌.ಎಂ.ಸುರೇಶ್‌ ನಿರ್ಮಾಣದ ‘ 7 ಓ ಕ್ಲಾಕ್‌’ಚಿತ್ರ ಶುಕ್ರವಾರ(ಫೆ.10) ತೆರೆಗೆ ಬರಲಿದೆ. ಸಂತೋಷ್‌ ರೈ ಪಾತಾಚೆ ನಿರ್ದೇಶನದ ಈ ಚಿತ್ರ ಅವರೇ ಹೇಳುವಂತೆ ಪ್ರೀತ್ಸೋರಿಗಾಗಿ ಮಾತ್ರವಂತೆ! ಮಿಥುನ್‌ ತೇಜಸ್ವಿ, ಪೂಜಾ ಕನ್ವಾಲ್‌, ಸ್ನೇಹ ಪ್ರಮುಖ ಪಾತ್ರದಲ್ಲಿದ್ದಾರೆ. ನಿರ್ದೇಶಕರು ಸೇರಿದಂತೆ ಹೊಸಬರ ದಂಡು ಚಿತ್ರದಲ್ಲಿದೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada