»   » ನಿರ್ಮಾಪಕ ವರದಣ್ಣ ಇನ್ನಿಲ್ಲ : ಶೋಕದ ಕಡಲಲ್ಲಿ ರಾಜಣ್ಣ

ನಿರ್ಮಾಪಕ ವರದಣ್ಣ ಇನ್ನಿಲ್ಲ : ಶೋಕದ ಕಡಲಲ್ಲಿ ರಾಜಣ್ಣ

Subscribe to Filmibeat Kannada

ಬೆಂಗಳೂರು : ಹಿರಿಯ ನಟ ಡಾ.ರಾಜ್‌ಕುಮಾರ್‌ ಅವರ ಸಹೋದರ ಎಸ್‌.ಪಿ.ವರದರಾಜ್‌(70) ಅವರ ಅಂತ್ಯಕ್ರಿಯೆ ಗುರುವಾರ ಬೆಳಗ್ಗೆ ಪುನೀತ್‌ ಫಾರ್ಮ್‌ನಲ್ಲಿ ನೆರವೇರಿತು.

ವರದಪ್ಪ ಎಂದೇ ಕನ್ನಡ ಚಿತ್ರೋದ್ಯಮದಲ್ಲಿ ಪರಿಚಿತರಾದ ನಿರ್ಮಾಪಕ ವರದರಾಜ್‌, ಬುಧವಾರ ಹೃದಯಾಘಾತದಿಂದ ಮೃತಪಟ್ಟರು. ಪತ್ನಿ ಶಾರದಮ್ಮ ಮತ್ತು ನಾಲ್ವರು ಪುತ್ರಿಯರನ್ನು ವರದಣ್ಣ ಅಗಲಿದ್ದಾರೆ.

ನಟರಾಗಿಯೇ ವೃತ್ತಿ ಆರಂಭಿಸಿದ ವರದರಾಜ್‌, ತಮ್ಮ ಸಹೋದರ ರಾಜ್‌ರೊಂದಿಗೆ ಗುಬ್ಬಿ ಕಂಪನಿಯಲ್ಲಿ ಕೆಲಸ ಮಾಡಿದರು. ನಂತರದ ದಿನಗಳಲ್ಲಿ ಕೃಷ್ಣಲೀಲಾ, ಸತಿಶಕ್ತಿ, ಸರ್ವಜ್ಞ ಮೂರ್ತಿ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದರು.

ನಿರ್ಮಾಪಕ ಚಂದೂಲಾಲ್‌ ಸಹಯೋಗದೊಂದಿಗೆ ವರದರಾಜ್‌, ಚಿತ್ರ ನಿರ್ಮಾಣದಲ್ಲಿ ತೊಡಗಿದ್ದರು. ಭೂಮಿಗೆ ಬಂದ ಭಗವಂತ, ನಾರದ ವಿಜಯ, ಭೂಲೋಕದಲ್ಲಿ ಯಮರಾಜ, ಭೂತಯ್ಯನ ಮಗ ಅಯ್ಯ, ಅನುರಾಗ ಅರಳಿತು, ಎರಡು ನಕ್ಷತ್ರಗಳು, ಒಡ ಹುಟ್ಟಿದವರು ಸೇರಿದಂತೆ ಅನೇಕ ಚಿತ್ರಗಳನ್ನು ಅವರು ನಿರ್ಮಾಣ ಮಾಡಿದ್ದರು.

(ದಟ್ಸ್‌ ಕನ್ನಡ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada