»   » ಕುಕ್ಕಿಕಟ್ಟೆ ಅವರ ಕತೆ ಓದದವರು, ಕೊಂಕಣಿ ಚಿತ್ರ ನೋಡಿ!

ಕುಕ್ಕಿಕಟ್ಟೆ ಅವರ ಕತೆ ಓದದವರು, ಕೊಂಕಣಿ ಚಿತ್ರ ನೋಡಿ!

Posted By:
Subscribe to Filmibeat Kannada


ಮಂಗಳೂರು : ಇತ್ತೀಚೆಗೆ ನಿಧನರಾದ ಲೇಖಕ ಚಂದ್ರಶೇಖರ ಕುಕ್ಕಿಕಟ್ಟೆಯವರ ಕತೆ ಹಾಗೂ ಸಂಭಾಷಣೆಯುಳ್ಳ ಕೊಂಕಣಿ ಚಿತ್ರ ನಿರ್ಮಾಣದ ಹಂತದಲ್ಲಿದೆ.

ಕೇವಲ 24 ಗಂಟೆಗಳಲ್ಲಿ ‘ಸೆಪ್ಟೆಂಬರ್‌ 8’ ಎಂಬ ಚಿತ್ರವನ್ನು ನಿರ್ಮಿಸಿ ಸಾಧನೆ ಮೆರೆದಿದ್ದ ರಿಚರ್ಡ್‌ ಕ್ಯಾಸ್ಟಲಿನೋ, ಈ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರು. ವರದಕ್ಷಿಣೆ ಸಮಸ್ಯೆಯ ಚಿತ್ರಣವಿರುವ ಈ ಚಿತ್ರಕ್ಕೆ ‘ಬದಿ’ ಎಂದು ಹೆಸರಿಡಲಾಗಿದೆ. ಭಾಗ್ಯಲಕ್ಷ್ಮಿ ಫಿಲಂಸ್‌ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಚಿತ್ರಕಥೆಯನ್ನು ಕ್ಯಾಸ್ಟಲಿನೋ ಅವರು ಬರೆದಿದ್ದಾರೆ.

‘ಓ ಗುಲಾಬಿಯೇ’ ಚಿತ್ರದಲ್ಲಿ ನಟಿಸಿದ್ದ ನವೀನ್‌, ಈ ಚಿತ್ರದ ನಾಯಕ. ಉಷಾ ಭಂಡಾರಿ, ಜಯಲಕ್ಷ್ಮಿ ಮುಂತಾದವರು ತಾರಾಗಣದಲ್ಲಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada