»   » ‘ನಾಯಿನೆರಳು ರೆಡಿ’, ಪ್ರೇಮಾಳ ಮದ್ವೆ ಪುರಾಣ...

‘ನಾಯಿನೆರಳು ರೆಡಿ’, ಪ್ರೇಮಾಳ ಮದ್ವೆ ಪುರಾಣ...

Subscribe to Filmibeat Kannada


ಸ್ಯಾಂಡಲ್‌ವುಡ್‌ನ ಇತ್ತೀಚಿನ ಸುದ್ದಿ ಸಮಾಚಾರಗಳ ತುಣುಕು-ಮಿಣುಕುಗಳು!

  • ಮದನ್‌ಮಲ್ಲು ಪುತ್ರ ಮಯೂರ್‌ ಅಭಿನಯದ ‘ಸ್ಟೂಡೆಂಟ್‌’ ಚಿತ್ರದ ನಾಯಕಿ ಬದಲಾಗಿದ್ದಾಳೆ. ಮುಹೂರ್ತದ ದಿನ ನಾಯಕಿಯೆಂದು ಘೋಷಿಸಲಾಗಿದ್ದ, ಶ್ರದ್ಧಾ ಆರ್ಯ ಜಾಗಕ್ಕೆ ಪೂಜಾ ಕನ್ವಾಲ್‌ ಬಂದಿದ್ದಾಳೆ. ಶ್ರದ್ಧಾ ಆರ್ಯ, ಮಯೂರ್‌ ಅಕ್ಕನಂತೆ ಕಾಣುತ್ತಾಳೆ ಎಂಬ ಕಾರಣ ನಿರ್ದೇಶಕ ಶ್ರೀಧರ್‌ ಅವರದು. ಪೂಜಾ ಕನ್ವಾಲ್‌ ‘ಸೆವೆನೋಕ್ಲಾಕ್‌’ ಚಿತ್ರದ ನಾಯಕಿ.
  • ಎಸ್‌.ಎಲ್‌.ಬೈರಪ್ಪ ಅವರ ಕಾದಂಬರಿಯಾಧಾರಿತ ಚಿತ್ರ ‘ನಾಯಿ ನೆರಳು’ ತೆರೆಗೆ ಬರಲು ಸಜ್ಜಾಗಿದೆ. ಗಿರೀಶ್‌ ಕಾಸರವಳ್ಳಿ ನಿರ್ದೇಶನದ ಈ ಚಿತ್ರದಲ್ಲಿ ಪವಿತ್ರಾ ಲೋಕೇಶ್‌, ಕಾಸರವಳ್ಳಿ ಪುತ್ರಿ ಅನನ್ಯಾ ಇದ್ದಾರೆ. ನಾಲ್ಕು ಸಲ ಸ್ವರ್ಣ ಕಮಲ ಪ್ರಶಸ್ತಿ ಗೆದ್ದಿರುವ ಕಾಸರವಳ್ಳಿ ಮತ್ತೊಮ್ಮೆ ಇತಿಹಾಸ ರಿಪೀಟ್‌ ಮಾಡ್ತಾರಾ?
  • ಸಾಯಿಕುಮಾರ್‌ ‘ರಕ್ಷಕ’ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಬಂದಿದ್ದು, ಆ ಚಿತ್ರದಲ್ಲೂ ಅವರು ಖಾಕಿ ಧರಿಸುವರೇ ಎಂಬುದು ಇನ್ನೂ ತಿಳಿದುಬಂದಿಲ್ಲ.
  • ನಟಿ ಪ್ರೇಮಾಳ ಕೈ ಹಿಡಿಯುತ್ತಿರುವ ಸಾಫ್ಟ್‌ವೇರ್‌ ಇಂಜಿನಿಯರ್‌ ಜೀವನ್‌ಗೆ ಪ್ರೇಮಾ ಜಾಹೀರಾತಿನ ಮೂಲಕ ಇಷ್ಟವಾದಳಂತೆ. ಆರೋಗ್ಯ ಹಾಲಿನ ಜಾಹೀರಾತು ನೋಡಿ ಜೀವನ್‌ ಮಾರು ಹೋದನಂತೆ!
  • ‘ಚಂದ್ರಮುಖಿ ಪ್ರಾಣಸಖಿ’ಯಂತಹ ಚೆಂದದ ಚಿತ್ರ ನೀಡಿ, ಅದರ ಬೆನ್ನಲ್ಲಿ ಮೂರು ತೋಪು ಚಿತ್ರ ನೀಡಿದ ಸೀತಾರಾಮ ಕಾರಂತ, ಪುನೀತ್‌ರ ಹೊಸ ಚಿತ್ರದ ನಿರ್ದೇಶಕ ಎಂಬ ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿದೆ.
  • ನಾಡಿನ ಹೆಮ್ಮೆಯ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಅಪೂರ್ಣಗೊಳಿಸಿದ್ದ ‘ಸಾವಿರ ಮೆಟ್ಟಿಲು’ ಚಿತ್ರವನ್ನು 38ವರ್ಷಗಳ ನಂತರ ಮತ್ತೆ ಪೂರ್ಣಗೊಳಿಸಲಾಗುತ್ತಿದೆ. ತಮ್ಮ ಗುರುಗಳ ಮೇಲಿನ ಅಭಿಮಾನದಿಂದ ನಟ ಅಂಬರೀಷ್‌, ನಟಿ ಜಯಂತಿ ಸಂಭಾವನೆ ರಹಿತವಾಗಿ ಪಾತ್ರ ಮಾಡುತ್ತಿದ್ದಾರೆ. ಅನುಪ್ರಭಾಕರ್‌ ಚಿತ್ರದ ತಾರಬಳಗದಲ್ಲಿದ್ದಾರೆ. ಚಿತ್ರದ ನಿರ್ಮಾಪಕರ ಹೆಸರು ಡಿ.ಬಿ.ಬಸವೇಗೌಡ.
Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada