»   » ರಕ್ಷಿತಾ-ಪ್ರೇಮ್‌ ವಿವಾಹಕ್ಕೆ ಅಭಿಮಾನಿಗಳ ಮಹಾಪೂರ!

ರಕ್ಷಿತಾ-ಪ್ರೇಮ್‌ ವಿವಾಹಕ್ಕೆ ಅಭಿಮಾನಿಗಳ ಮಹಾಪೂರ!

Posted By: Staff
Subscribe to Filmibeat Kannada
Kannada actress Rakshitha
ಬೆಂಗಳೂರು : ನಟಿ ರಕ್ಷಿತಾ ಮತ್ತು ನಿರ್ದೇಶಕ ಪ್ರೇಮ್‌ ಅವರ ವಿವಾಹ ನಗರದಲ್ಲಿ ಶುಕ್ರವಾರ ನೆರವೇರಿತು. ಮೈಸೂರು ರಸ್ತೆಯಲ್ಲಿರುವ ರಾಜರಾಜೇಶ್ವರಿ ನಗರದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ , ರಕ್ಷಿತಾ ಮತ್ತು ಪ್ರೇಮ್‌ ಸಪ್ತಪದಿ ತುಳಿದು ಸತಿ-ಪತಿಗಳಾದರು. ನಂತರ ಆದಿಚುಂಚನಗಿರಿಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಪಾದಪೂಜೆ ಮಾಡಿದ ನೂತನ ದಂಪತಿಗಳು, ಆಶೀರ್ವಾದ ಪಡೆದರು.

ಮದುವೆಗಾಗಿ ಸಹಸ್ರಾರು ಅಭಿಮಾನಿಗಳು ಆಗಮಿಸಿದ್ದರು. ಅಭಿಮಾನಿಗಳ ನೂಕುನುಗ್ಗಲು ಉಂಟಾಗುವ ಆತಂಕದಿಂದಾಗಿ, ಕಲ್ಯಾಣ ಮಂಟಪದ ಬಾಗಿಲುಗಳನ್ನು ಮುಚ್ಚಲಾಯಿತು. ಕೇವಲ ಗಣ್ಯರಿಗೆ ಮಾತ್ರ ಪ್ರವೇಶ ನೀಡಲಾಯಿತು.

ಹೊರಗಡೆ ನಿಂತಿದ್ದ ಅಭಿಮಾನಿಗಳು, ತಾರಾಜೋಡಿಯ ವಿವಾಹ ನೋಡಲಾಗದೇ ಪರಿತಪಿಸಿದರು. ಚಿತ್ರಲೋಕದ ವಿವಿಧ ಗಣ್ಯರು ಮದುವೆಯಲ್ಲಿ ಹಾಜರಿದ್ದರು.

ಆರತಕ್ಷತೆಯಲ್ಲಿ ಅವಾಂತರ : ಗುರುವಾರ ಸಂಜೆ ಇದೇ ಕಲ್ಯಾಣಮಂಟಪದಲ್ಲಿ ನಡೆದ ರಕ್ಷಿತಾ-ಪ್ರೇಮ್‌ರ ಆರತಕ್ಷತೆ ಸಮಾರಂಭದಲ್ಲಿ ಅಭಿಮಾನಿಗಳ ನೂಕುನುಗ್ಗಲು ಉಂಟಾಯಿತು. ಸಂಜೆ 6ರಿಂದ ರಾತ್ರಿ 11ರ ತನಕ ಅಭಿಮಾನಿಗಳು ತಾರಾಜೋಡಿಯನ್ನು ಅಭಿನಂದಿಸಲು ಬರುತ್ತಲೇ ಇದ್ದರು. ಕೆಲಹೊತ್ತು, ರಕ್ಷಿತಾ-ಪ್ರೇಮ್‌ರನ್ನು ಎಳೆದಾಡಿದ ಘಟನೆಯೂ ನಡೆಯಿತು.

ಆರತಕ್ಷತೆ ಮುಗಿಯುವ ಹೊತ್ತಿಗೆ ತಾರಾಜೋಡಿಗೆ ಸುಸ್ತೋ ಸುಸ್ತು. ಅಭಿಮಾನಿಗಳ ಮಹಾಪೂರದ ಪರಿಣಾಮ, ಗಣ್ಯರು ತಾರಾಜೋಡಿಯ ಅಭಿನಂದಿಸಲು ವೇದಿಕೆಗೆ ಬರಲು ಸಾಧ್ಯವಾಗಲಿಲ್ಲ.

ಮದುವೆ ಆರತಕ್ಷತೆ ಸಮಾರಂಭದಲ್ಲಿ ವಿಷ್ಣುವರ್ಧನ್‌, ಭಾರತಿ, ರಾಜೇಶ್‌, ಉಪೇಂದ್ರ, ಅಂಬರೀಷ್‌, ಸುಮಲತಾ, ಬಿ.ಸಿ.ಪಾಟೀಲ್‌, ಕುಮಾರ್‌ ಬಂಗಾರಪ್ಪ, ಉಪಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಚಿವ ಆರ್‌.ಅಶೋಕ್‌, ರಾಮಚಂದ್ರಗೌಡ, ಪ್ರತಿಪಕ್ಷದ ನಾಯಕ ಎನ್‌.ಧರ್ಮಸಿಂಗ್‌ ಮತ್ತಿತರರು ಪಾಲ್ಗೊಂಡಿದ್ದರು.

English summary
Kannada actress Rakshitha and Noted Director Prems Marriage held on today(Mar.9) at Padmavathi Kalyana Mantapa in Bangalore.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada