»   » ಟಾಪ್‌-5 : ಕೇಳುಗರು ಮೆಚ್ಚಿದ ಸಿನಿಮಾ ಗೀತೆಗಳು

ಟಾಪ್‌-5 : ಕೇಳುಗರು ಮೆಚ್ಚಿದ ಸಿನಿಮಾ ಗೀತೆಗಳು

Posted By: Super
Subscribe to Filmibeat Kannada
rashmi
ಕಳೆದ ಹದಿನೈದು ದಿನಗಳ ಸಮೀಕ್ಷೆ ಪ್ರಕಾರ, ಸೋನು ನಿಗಂ ಕಂಠಸಿರಿಯ 'ಅನಿಸುತ್ತಿದೆ ಯಾಕೋ ಇಂದು" ಎಲ್ಲ ಹಾಡುಗಳಿಗಿಂತ ಮುಂದಿದೆ. ಉಳಿದ ಸ್ಥಾನಗಳಲ್ಲಿ...
  1. ಮುಂಗಾರು ಮಳೆ : ಸೋನು ನಿಗಂ ಕಂಠದಿಂದ ಹೊಮ್ಮಿದ ಹಾಡುಗಳು ಯುವಜನರಿಗೆ ಹುಚ್ಚು ಹಿಡಿಸಿವೆ. ಮನೋಮೂರ್ತಿಯವರ ಸುಮಧುರ ಸಂಗೀತದ ಮಳೆಯಲ್ಲಿ ನೆನೆಯುತ್ತಾ , ಜಯಂತ್‌ ಕಾಯ್ಕಿಣಿ ಅವರ ಸರಳ ಸಾಹಿತ್ಯದಲ್ಲಿ ಎಲ್ಲರು ತೇಲುತ್ತಿದ್ದಾರೆ. ಈಗ ಯಾರ ಮೊಬೈಲ್‌ ರಿಂಗ್‌ ಆದರೂ ಸಹ, ಅದೇ ಟ್ಯೂನ್‌ 'ಅನಿಸುತ್ತಿದೆ ಯಾಕೋ ಇಂದು.....". ಆಡಿಯೋ ಮಾರಾಟದಲ್ಲಿ ಹೊಸ ಇತಿಹಾಸ ಬರೆಯುವತ್ತ, 'ಮುಂಗಾರು ಮಳೆ" ಸಾಗುತ್ತಿದೆ.
  2. ದುನಿಯಾ : ಈ ಚಿತ್ರ ಬಿಡುಗಡೆಗೆ ಮುನ್ನವೇ ಎಲ್ಲರ ಬಾಯಲ್ಲೂ ನಲಿಯುತ್ತಿದ್ದ 'ಕರಿಯಾ ಐ ಲವ್‌ ಯೂ" ಹಾಡು, ಈಗ ಎಲ್ಲೆಡೆ ವ್ಯಾಪಿಸುತ್ತಿದೆ. ವಿ. ಮನೋಹರ್‌ಬಹುದಿನಗಳ ನಂತರ ತಮ್ಮ ಸಾಹಿತ್ಯದ ರುಚಿಯನ್ನು ಉಣಬಡಿಸಿದ್ದಾರೆ. ಸಾಧು ಕೋಕಿಲ ಸುಮಧುರವಾದ ಹಿನ್ನೆಲೆ ಸಂಗೀತ ನೀಡಿದ್ದಾರೆ.
  3. ಜೊತೆಜೊತೆಯಲಿ : ಈ ಚಿತ್ರ ನೂರು(+) ದಿನಗಳನ್ನು ಪೂರೈಸಿದ ನಂತರ ಎರಡನೇ ಸ್ಥಾನದಿಂದ ಕೆಳಗಿಳಿದಿದೆ. ಆದರೆ ಪಿ. ಹರಿಕೃಷ್ಣ ರ ಸಂಗೀತದ ಗುಂಗು ಇನ್ನೂ ಕಮ್ಮಿ ಆಗಿಲ್ಲ. 'ಓ ಗುಣವಂತ" ಹಾಗೂ 'ಜೊತೆಜೊತೆಯಲಿ" ಎಂಬ ಶೀರ್ಷಿಕೆ ಗೀತೆ ಇನ್ನೂ ಚಾಲ್ತಿಯಲ್ಲಿದೆ.
  4. ಏಕದಂತ : ಚಿತ್ರ ಬಿಡುಗಡೆಗೆ ಮುನ್ನವೇ ಆಡಿಯೋ ಮಾರಾಟದಲ್ಲಿ ಒಳ್ಳೆ ಒಪನಿಂಗ್‌ ಪಡೆದಿದೆ. 'ಜೋಗಿ" ಮೂಲಕ ಹೊಸ ಕ್ರೇಜ್‌ ಸೃಷ್ಟಿಸಿದ ಗುರುಕಿರಣ್‌, ಈ ಚಿತ್ರದ ಸಂಗೀತದ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಅವರೇ ಹಾಡಿರುವ 'ಬಂಡಲ್‌ ಬಡಾಯಿ ಮಾದೇವ" ಹಾಡು ಜನಪ್ರಿಯ ಮಾಸ್‌ ಸಾಂಗ್‌ ಆಗುವ ಎಲ್ಲ ಲಕ್ಷಣಗಳನ್ನು ತೋರುತ್ತಿದೆ.
  5. ಅರಸು : ಬಿಡುಗಡೆ ಮುನ್ನ ಹಾಗು ಬಿಡುಗಡೆ ಆದ ನಂತರವೂ ಈ ಚಿತ್ರದ ಸಂಗೀತ ಕನ್ನಡಿಗರ ಮನ ಗೆಲ್ಲುವಲ್ಲಿ ಅಷ್ಟಾಗಿ ಸಫಲತೆ ಕಾಣಲಿಲ್ಲ. ಆರಕ್ಕೇರಿಲ್ಲ, ಮೂರಕ್ಕಿಳಿಯಲಿಲ್ಲ ಎಂಬಂತೆ ಮೊದಲ ಐದರ ಸ್ಥಾನದ ಪಟ್ಟಿಯಲ್ಲಿ ಇರುವುದೇ ಈ ಚಿತ್ರದ ಸಾಧನೆ ಎನ್ನಬಹುದು. ತೆಲುಗಿನ ಜೊಶ್ವಾ ಶ್ರೀಧರ್‌ ಸಂಗೀತ ಯಾವ ಜೋಶ್‌ ಅನ್ನು ಉಂಟು ಮಾಡಿಲ್ಲ ಎನ್ನಬಹುದು.
English summary
Top-5 Kannada Audio Hits : Mungaru Male is way ahead of other Kannada film albums this fortnight.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada