»   » ಬೆಳ್ಳಿತೆರೆಗೆ ದರ್ಶನ್‌ರ ‘ಶಾಸ್ತ್ರಿ’

ಬೆಳ್ಳಿತೆರೆಗೆ ದರ್ಶನ್‌ರ ‘ಶಾಸ್ತ್ರಿ’

Subscribe to Filmibeat Kannada

ದರ್ಶನ್‌ ಅಭಿನಯದ ಮತ್ತೊಂದು ರೌಡಿಸಂ ಚಿತ್ರ ‘ಶಾಸ್ತ್ರಿ ’ ಗುರುವಾರ(ಜೂ.09) ತೆರೆಕಂಡಿದೆ. ಮತ್ತೆ ದರ್ಶನ್‌ ಕೈಯಲ್ಲಿ ಲಾಂಗ್‌ ಫಳಫಳಿಸುತ್ತಿದೆ.

ಛಾಯಾಗ್ರಾಹಕ ಅಣಜಿ ನಾಗರಾಜ್‌ ನಿರ್ಮಾಣದ ಈ ಚಿತ್ರವನ್ನು ಪಿ.ಎನ್‌. ಸತ್ಯ ನಿರ್ದೇಶಿಸಿದ್ದಾರೆ. ರೌಡಿಸಂ ಚಿತ್ರ ನಿರ್ದೇಶಿಸುವುದರಲ್ಲಿ ಅವರು ಎತ್ತಿದ ಕೈ. ಬ್ರಾಹ್ಮಣ ಮನೆತನದ ಮುಗ್ಧ ಕಾಲೇಜು ಹುಡುಗ ಜನಿವಾರ ಕಳಚಿ, ಲಾಂಗ್‌ ಹಿಡಿಯುವ ಕಥೆಯನ್ನು ‘ಶಾಸ್ತ್ರಿ ’ ಹೊಂದಿದೆ. ಒಂದು ಕಡೆ‘ಓಂ’ ಚಿತ್ರವನ್ನು ‘ಶಾಸ್ತ್ರಿ ’ ಹೋಲುತ್ತಿದೆ ಎನ್ನಲಾಗಿದೆ.

‘ವರ್ಷ’ ಮತ್ತು ‘ಶಂಭು’ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟಿರುವ ತೆಲುಗು ಮೂಲದ ಮಾನ್ಯಈ ಚಿತ್ರದ ನಾಯಕಿ. ಈಗಾಗಲೇ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಮಿಂಚಿರುವ ಮಾನ್ಯ, ಸ್ಯಾಂಡಲ್‌ವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ನಿಂತಿದ್ದಾಳೆ.

ಈ ಚಿತ್ರದ ಛಾಯಾಗ್ರಹಣ ವೀನಸ್‌ ಮೂರ್ತಿ ಅವರದು. ಸಾಧು ಕೋಕಿಲಾ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದ ತುಂಬಾ ಕಾಣಿಸುವ ಹೊಡೆದಾಟ ಮತ್ತು ಜೂನಿಯರ್‌ ಸಿಲ್ಕ್‌ಳ ಬಳುಕಾಟ ದರ್ಶನ್‌ ಅಭಿಮಾನಿಗಳಿಗೆ ಇಷ್ಟವಾದರೇ, ಚಿತ್ರ ಗೆಲ್ಲುತ್ತದೆ!

‘ನಮ್ಮ ಪ್ರೀತಿಯ ರಾಮು’ ಎಂಬ ಸದಭಿರುಚಿಯ ಚಿತ್ರ, ಸ್ಯಾಂಡಲ್‌ವುಡ್‌ನಲ್ಲಿ ಮುಗ್ಗರಿಸಿದ ನಂತರ ಕೇವಲ ಮಚ್ಚು-ಲಾಂಗು ಪಾತ್ರಗಳತ್ತ ದರ್ಶನ್‌ವಾಲಿದ್ದಾರೆ. ‘ಅಯ್ಯ’ ಎನ್ನುವ ಚಿತ್ರದಲ್ಲಿ ಪೋಲಿಸ್‌ ಅಧಿಕಾರಿಯ ಪಾತ್ರದಲ್ಲಿ ಅವರು ಅಭಿನಯಿಸಿದ್ದರೂ, ಲಾಂಗ್‌ ಹಿಡಿದೇ ಅಭಿಮಾನಿಗಳನ್ನು ತೃಪ್ತಿ ಪಡಿಸಿದ್ದರು.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada