»   » ಸಿನಿಮಾ ಲೋಕದಲ್ಲಿ ಉಪ್ಪಿ ಪತ್ನಿ ಪ್ರಿಯಾಂಕಾಳ ಸೆಕೆಂಡ್‌ ಇನ್ನಿಂಗ್ಸ್‌?

ಸಿನಿಮಾ ಲೋಕದಲ್ಲಿ ಉಪ್ಪಿ ಪತ್ನಿ ಪ್ರಿಯಾಂಕಾಳ ಸೆಕೆಂಡ್‌ ಇನ್ನಿಂಗ್ಸ್‌?

Posted By:
Subscribe to Filmibeat Kannada

ಉಪೇಂದ್ರ ಅವರ ಪತ್ನಿ, ಎರಡು ಮಕ್ಕಳ ತಾಯಿ ಪ್ರಿಯಾಂಕ, ಮತ್ತೆ ಬಣ್ಣ ಹಚ್ಚಲಿದ್ದಾರೆಯೆ? ಹೌದು ಎನ್ನುತ್ತಿದೆ ಗಾಂಧಿನಗರ. ಗಾಂಧಿನಗರದ ತುಂಬ ಸದ್ಯಕ್ಕೆ ಅದೇ ಲೇಟೆಸ್ಟ್‌ ಮತ್ತು ಹಾಟ್‌ ವದಂತಿ. ಆದರೆ ಅವರು ನಟಿಸುತ್ತಿರುವುದು ಕನ್ನಡ ಚಿತ್ರದಲ್ಲಲ್ಲ, ಬಂಗಾಳಿ ಚಿತ್ರದಲ್ಲಿ. ಈ ಸಂಬಂಧ ಎಲ್ಲ ಸಿದ್ಧತೆಗಳು ನಡೆದಿವೆಯಂತೆ.

ನಟನೆಗೆ ಮರಳುತ್ತಿರುವ ಬಗ್ಗೆ ಪ್ರಿಯಾಂಕ ಅವರಾಗಲಿ, ಉಪೇಂದ್ರ ಅವರಾಗಲಿ ಬಾಯಿಬಿಟ್ಟಿಲ್ಲ. ಎಲ್ಲವನ್ನು ಗುಪ್ತವಾಗಿಯೇ ಮಾಡುವುದು ಈ ಜೋಡಿಯ ವಿಶೇಷತೆ. ಮದುವೆಯಾದ ನಂತರ ಚಿತ್ರಗಳಿಗೆ ಗುಡ್‌ ಬೈ ಹೇಳುವುದಾಗಿ ಪ್ರಿಯಾಂಕ ಎಲ್ಲೂ ಹೇಳಿಲ್ಲ. ಅದೂ ಅಲ್ಲದೇ ಆಯಮ್ಮನಿಗೆ ಬಣ್ಣದ ಗೀಳು ತುಸು ಜಾಸ್ತಿಯೇ. ಹೀಗಾಗಿ ಚಿತ್ರ ಸೆಟ್ಟೇರಿದರೆ ಆಶ್ಚರ್ಯವೇನಿಲ್ಲ ಎಂದು ಸಿನಿ ಮೂಲಗಳು ಪಿಸುಗುಟ್ಟುತ್ತಿವೆ.

‘ಎಚ್‌2ಓ’ ಚಿತ್ರದ ‘ಹೂವೇ ಹೂವೇ ್‌’ ಹಾಡಿನ ಮೂಲಕ ಪ್ರೇಕ್ಷಕರ ಮನದಲ್ಲಿ ಮುದ್ರೆ ಹೊತ್ತಿದ್ದ ಪ್ರಿಯಾಂಕಾ, ರವಿಚಂದ್ರನ್‌ರೊಂದಿಗೆ ನಟಿಸಿದ ‘ಮಲ್ಲ’ ಮೂಲಕ ಪ್ರೇಕ್ಷಕರು ಬೆಚ್ಚಿಬೀಳುವಂತೆ ಮಾಡಿದ್ದರು. ವಿಷ್ಣುವರ್ಧನ್‌ ಜೊತೆ ‘ಕೋಟಿಗೊಬ್ಬ’ ಮತ್ತು ತೆಲುಗಿನ ‘ರಾ’ ಚಿತ್ರದಲ್ಲಿ ಉಪೇಂದ್ರ ಜೊತೆ ನಾಯಕಿಯಾಗಿ ಪ್ರಿಯಾಂಕ ನಟಿಸಿದ್ದರು.

ಮದುವೆಯಾದ ಮೇಲೆಯೂ ಸಿನಿಮಾದಲ್ಲಿ ನಟಿಸಿದ ನಟಿಮಣಿಗಳ ಉದಾಹರಣೆ ನಮ್ಮಲ್ಲಿದೆ. ಅನು ಪ್ರಭಾಕರ್‌ ಮದುವೆಯಾದ ಮೇಲೆ ‘ಪ್ರೀತಿ ಪ್ರೇಮ ಪ್ರಣಯ’ ಚಿತ್ರದಲ್ಲಿ ತುಂಡುಡುಗೆ ಹಾಕಿಕೊಂಡು ಕುಣಿದದ್ದು ಎಲ್ಲರಿಗೂ ಗೊತ್ತಿದೆ. ಆದರೆ ಪ್ರೇಕ್ಷಕ ಮಾತ್ರ ಕ್ಯಾರೇ ಅನ್ನಲಿಲ್ಲ! ಪಶ್ಚಿಮ ಬಂಗಾಳ ಮೂಲದ ಈ ಹೊಳಪು ಕಂಗಳ ಚೆಲುವೆ ಪ್ರಿಯಾಂಕ ಚಿತ್ರರಂಗಕ್ಕೆ ಮರಳಿದರೆ, ಪ್ರೇಕ್ಷಕರು ಹೇಗೆ ಸ್ವೀಕರಿಸುವರೋ ಕಾದು ನೋಡೋಣ.

ಬಳ್ಳಿಯಂತೆ ಬಳುಕುವ ಮಿಂಚುಳ್ಳಿ ಪ್ರಿಯಾಂಕಾಳನ್ನು ನೋಡಬನ್ನಿ

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada