»   » ಹನ್ನೊಂದು ಜನ ಹಾಸ್ಯನಟರಿಗೆ ‘ನರಸಿಂಹರಾಜು ಪ್ರಶಸ್ತಿ’

ಹನ್ನೊಂದು ಜನ ಹಾಸ್ಯನಟರಿಗೆ ‘ನರಸಿಂಹರಾಜು ಪ್ರಶಸ್ತಿ’

Subscribe to Filmibeat Kannada


ಬೆಂಗಳೂರು : ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ನೆನಪನ್ನು ಹಸಿರಾಗಿಡಲು, ಅವರ ಹೆಸರಲ್ಲಿ ಪ್ರಶಸ್ತಿ ನೀಡಲು ನರಸಿಂಹರಾಜು ಪ್ರತಿಷ್ಠಾನ ನಿರ್ಧರಿಸಿದೆ.

ನಿರ್ಮಾಪಕ ಭಾ.ಮ.ಹರೀಶ್‌ ನೇತೃತ್ವದಲ್ಲಿ ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿದ್ದು, ವಿವಿಧ ಗಣ್ಯರಿಗೆ ವಾರ್ಷಿಕ ಪ್ರಶಸ್ತಿ ನೀಡುವ ಕಾರ್ಯಕ್ರಮವನ್ನು ರೂಪಿಸಲಾಗಿದೆ.

ಜೂ.16ರಂದು ನಡೆಯಲಿರುವ ಸಮಾರಂಭದಲ್ಲಿ ಕನ್ನಡದ 11 ಜನ ಹಾಸ್ಯ ನಟರಿಗೆ ನರಸಿಂಹರಾಜು ಪ್ರಶಸ್ತಿ ನೀಡಲಾಗುವುದು. ಅಲ್ಲದೇ ನಿರ್ಮಾಪಕರು, ಸಿನಿಮಾ ಪತ್ರಕರ್ತರು, ವಿತರಕರು, ಸಮಾಜ ಸೇವಕರು, ಪೊಲೀಸ್‌ ಅಧಿಕಾರಿಗಳಿಗೆ ವಿಶೇಷ ವಾರ್ಷಿಕ ಪ್ರಶಸ್ತಿಗಳನ್ನು ನೀಡುವುದಾಗಿ ಭಾ.ಮ.ಹರೀಶ್‌ ಹೇಳಿದ್ದಾರೆ.

ಅಶಕ್ತ ಕಲಾವಿದರ ಕಲ್ಯಾಣಕ್ಕಾಗಿ, ನಿಧಿ ಸಂಗ್ರಹಿಸಲು ಮನರಂಜನಾ ಕಾರ್ಯಕ್ರಮಗಳನ್ನು ಪ್ರತಿಷ್ಠಾನ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada