»   » ನನಗೆ ಅನ್ನಿಸಿದ ಮಟ್ಟಿಗೆ ಸೆನ್ಸಾರ್ ಅಷ್ಟೊಂದು ಬಿಗಿ ಇಲ್ಲ

ನನಗೆ ಅನ್ನಿಸಿದ ಮಟ್ಟಿಗೆ ಸೆನ್ಸಾರ್ ಅಷ್ಟೊಂದು ಬಿಗಿ ಇಲ್ಲ

Subscribe to Filmibeat Kannada


ಸೆನ್ಸಾರ್ ಮಂಡಳಿ ಅಧಿಕಾರಿ ಎ.ಚಂದ್ರಶೇಖರ್, ತಮ್ಮ ದಿಟ್ಟತನದಿಂದ ಗಾಂಧಿನಗರದ ಹೀರೋ ಆಗಿದ್ದಾರೆ. ಅವರ ಕಾರ್ಯ ವೈಖರಿ ಮತ್ತು ಸಿನಿಮಾ ಜನರ ಕಾರ್ಯ ವೈಖರಿ ಬಗ್ಗೆ ಕಟ್ಟೆ ಗುರುರಾಜ್ ಅವರನ್ನೇ ಮಾತನಾಡಿಸಿದ್ದಾರೆ. ಮಾತುಕತೆ ವಿವರ ನಿಮ್ಮ ಮುಂದಿವೆ..1. ಬೇರೆ ರಾಜ್ಯದ ಸೆನ್ಸಾರ್‌ಮಂಡಳಿಗಿಂತ ನೀವೇಕೆ ಸ್ಟ್ರಿಕ್ಟ್?

ಸೆನ್ಸಾರ್‌ಗೆ ಒಂದು ಸಲಹಾಮಂಡಳಿ ಇದೆ. ಅದರ ಸದಸ್ಯರು ಸಾಮಾನ್ಯ ಜನರಿಂದಲೇ ಆಯ್ಕೆಯಾಗಿರುವುದರಿಂದ ಪ್ರೇಕ್ಷಕರ ನಾಡಿ ಮಿಡಿತ ಏನು ಅಂತ ಗೊತ್ತಿರುತ್ತೆ. ಅದರ ನಿರ್ದೇಶನದ ಮೇಲೆ ನಮ್ಮ ಕೆಲಸ. ನನಗೆ ಅನ್ನಿಸಿದ ಮಟ್ಟಿಗೆ ಅಷ್ಟೊಂದು ಬಿಗಿ ಇಲ್ಲ.

2. ಹಿಂಸೆಗೆ ಡಿಸ್ಕೌಂಟ್ ಇದೆಯಂತೆ?

ನಮಗೆ ಕೊಟ್ಟಿರುವ ಮಾರ್ಗಸೂಚಿಗೆ ತಕ್ಕಂತೆ ಹಿಂಸೆ ದೃಶ್ಯಕ್ಕೆ ಕತ್ತರಿ ಹಾಕುತ್ತೇವೆ. ಹಿಂಸೆ ತೋರಿಸಬಹುದು. ಪ್ರಚೋದಿಸಬಾರದು. ಇಲ್ಲಿ ಕಲಾವಿದನ ಕ್ರಿಯಾ ಶೀಲತೆಗೆ ಧಕ್ಕೆಯಾಗದಂತೆ ನೋಡಿ ಕೊಳ್ಳಬೇಕು.

3. ನಿಮ್ಮ ಸರ್ಟಿಫಿಕೆಟ್ ಚಿತ್ರಮಂದಿರಗಳಲ್ಲಿ ತೋರಿಸ್ತಾ ಇಲ್ವಂತೆ?

ಪ್ರದರ್ಶನಕ್ಕೆ ಮೊದಲು, ಸರ್ಟಿ ಫಿಕೆಟ್ ಹಾಗೂ ಕತ್ತರಿ ಬಿದ್ದ ದೃಶ್ಯಗಳ ವಿವರ ತೋರಿಸಬೇಕು. ಜನರಲ್ಲಿ ಅರಿವು ಮೂಡಿಸಲು ನೋಟಿಸ್ ಬೋರ್ಡ್‌ಲ್ಲಿ ಇದರ ಮೂಲ ಪ್ರತಿ ಅಂಟಿಸಬೇಕು. ಕೆಲ ಕಡೆ ಆಗ್ತಿಲ್ಲ. ಅವ್ರ ಮೇಲೂ ಕ್ರಮ ತಗೊಳ್ತಾ ಇದ್ದೀವಿ.

4. ವಿಶೇಷ ಪಡೆ ಇದೆಯೇ?

ಇಲ್ಲ. ಸರ್ಟಿಫಿಕೆಟ್ ಕೊಡೋದು ದೆಹಲಿಯಲ್ಲಿ. ಚಿತ್ರ ಪ್ರದರ್ಶನಗೊಳ್ಳು ವುದು ಇಲ್ಲಿ. ಕಾನೂನು ಉಲ್ಲಂಘನೆಯಾದರೆ ಸ್ಥಳೀಯ ಪೊಲೀಸರ ಗಮನಕ್ಕೆ ತರ್‍ತೀವಿ. ದೂರು ಬರದೇ ಇದ್ದರೂ ಸಂಗತಿ ತಿಳಿದು ಪೊಲೀಸರು ಕ್ರಮ ತೆಗೆದುಕೊಳ್ಳ ಬಹುದು.

5. ಪ್ರಾಣಿಗಳ ಹೆಸರಲ್ಲಿ ಜೀವ ಹಿಂಡುತ್ತೀರಂತೆ?

ಚಿತ್ರದಲ್ಲಿ ಉದ್ದೇಶಪೂರ್ವಕವಾಗಿ ಪ್ರಾಣಿಗಳನ್ನು ಬಳಸಿಕೊಳ್ಳುವುದಾದರೆ ಚೆನ್ನೈನ ಭಾರತೀಯ ಪ್ರಾಣಿ ಸಂರಕ್ಷಕ ಮಂಡಳಿ ಅನುಮತಿಸಬೇಕು. ಆನಂತರ ನಾವು ಪ್ರಮಾಣಪತ್ರ ಕೊಡ್ತೀವಿ. ಸಹಜವಾಗಿ ಪ್ರಾಣಿಗಳನ್ನು ತೋರಿಸಿದರೆ ಚಕಾರ ಎತ್ತುವುದಿಲ್ಲ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada