»   » ಸಿಂಹಾದ್ರಿಯ ಸಿಂಹದ ಆಧ್ಯಾತ್ಮದ ಮೊಗ..

ಸಿಂಹಾದ್ರಿಯ ಸಿಂಹದ ಆಧ್ಯಾತ್ಮದ ಮೊಗ..

Posted By: Staff
Subscribe to Filmibeat Kannada

ಹಾಗಂತ ಹೇಳಿದ್ದು - ಎಸ್‌.ನಾರಾಯಣ್‌ ಅವರೊಂದಿಗೆ ಮೀಸೆ ರಿಸರ್ಚ್‌ ಮಾಡುತ್ತಿರುವ ಮಾಜಿ 'ಸಾಹಸ ಸಿಂಹ" ಹಾಗೂ ಹಾಲಿ 'ಸಿಂಹಾದ್ರಿಯ ಸಿಂಹ" ವಿಷ್ಣುವರ್ಧನ್‌.

ಕನ್ನಡ ಚಿತ್ರರಂಗದ ಬೇರೆ ಯಾರು ಹೇಳಿದ್ದರೂ ತಮಾಷೆಯಾಗಿ ಕಾಣಬಹುದಿದ್ದ ಈ ಮಾತನ್ನು ಮೈಸೂರಿನ ಛಾಯಾದೇವಿ ಅನಾಥಾಶ್ರಮ ಟ್ರಸ್ಟ್‌ನ ಸಮಾರಂಭದಲ್ಲಿ ವಿಷ್ಣುವರ್ಧನ್‌ ಗಂಭೀರವಾಗಿ ಹೇಳಿದರು. ಮೈಸೂರಿನ ಕಲಾ ಮಂದಿರಲ್ಲಿ ಭಾನುವಾರ (ಜು.7) ನಡೆದ ಆ ಕಾರ್ಯಕ್ರಮ, ಟ್ರಸ್ಟ್‌ನ ದಶಮಾನೋತ್ಸವದ ಪ್ರಯುಕ್ತ ಏರ್ಪಾಡಾಗಿತ್ತು.

ಇದೇ ಸಂದರ್ಭದಲ್ಲಿ ಟ್ರಸ್ಟ್‌ನ ಛಾಯಾ ಮಾತಾ ಭಾವಚಿತ್ರವನ್ನು ವಿಷ್ಣು ಅನಾವರಣಗೊಳಿಸಿದರು. ಮಕ್ಕಳೊಂದಿಗೆ ತಾವೂ ಮಗುವಾದರು. ಅನಾಥ ಮಕ್ಕಳೊಂದಿಗೆ ಫೋಟೊ ತೆಗೆಸಿಕೊಂಡರು. ಯಥಾ ಪ್ರಕಾರ ವಿಷ್ಣು ಅಭಿಮಾನಿಗಳ ಸಾರ್ವಜನಿಕ ಅಭಿಮಾನ ಪ್ರದರ್ಶನವೂ ಅನಾಥಾಶ್ರಮದ ಕಾರ್ಯಕ್ರಮದಲ್ಲಿ ವೈಭವದಿಂದ ನಡೆಯಿತು.

ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ವಿಷ್ಣುವರ್ಧನ್‌ಗೆ ಭಾರೀ ಗಾತ್ರದ ಹಾರವನ್ನು ಅಭಿಮಾನದಿಂದಲೇ ತೊಡಿಸಿದರು. ಅಭಿಮಾನಿಗಳು ತೊಡಿಸಿದ ಮೈಸೂರು ಪೇಟದಲ್ಲಿ ವಿಷ್ಣು ಮಿಂಚಿದರು. ಸನ್ಮಾನ ಸ್ವೀಕರಿಸಿ ಧನ್ಯೋಸ್ಮಿ ಎಂದರು. ಅಭಿಮಾನಿಗಳು ಸಂಭ್ರಮಿಸಿದರು.

ವಿಧಾನ ಪರಿಷತ್‌ ಸದಸ್ಯ ಗೋ.ಮಧುಸೂದನ್‌, ನಗರ ಪಾಲಿಕೆ ಸದಸ್ಯ ಶಿವಣ್ಣ , ಬೋಸ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ದೇವರಾಜ್‌, ರಾಜೇಂದ್ರ ನಗರದ ಶನೇಶ್ವರ ಸ್ವಾಮಿ ದೇವಸ್ಥಾನದ ಬೀರಪ್ಪಸ್ವಾಮಿ, ಚಲನಚಿತ್ರ ನಿರ್ಮಾಪಕ ವಿಜಯಕುಮಾರ್‌ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಮಾತೇ ಮಾಣಿಕ್ಯ : ಅನಾಥ ಮಗುವಿನ ಎದುರು ತನ್ನ ಮಗುವನ್ನು ಮುದ್ದಿಸುವುದು ಅಮಾನವೀಯತೆ - ಎ.ಎನ್‌.ಮೂರ್ತಿರಾವ್‌

English summary
No one is orphan, but all of us are orphans : Vishnuvardhan

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada