»   » ಪ್ರಥಮಪ್ರತಿಯಲ್ಲಿ ಮದನ್ ಪಟೇಲ್‌ರ 'ಹೀಗೂ ಉಂಟೆ'

ಪ್ರಥಮಪ್ರತಿಯಲ್ಲಿ ಮದನ್ ಪಟೇಲ್‌ರ 'ಹೀಗೂ ಉಂಟೆ'

Subscribe to Filmibeat Kannada

ಬಹುಮುಖಿ ಮದನ್‌ಪಟೇಲ್ ನಿರ್ಮಾಣದ 'ಹೀಗೂ ಉಂಟೆ' ಚಿತ್ರಕ್ಕೆ ಆಕಾಶ್ ಸ್ಟೂಡಿಯೋದಲ್ಲಿ ಚಿತ್ರೀಕರಣೇತರ ಚಟುವಟಿಕೆಗಳು ಪೂರ್ಣವಾಗಿದೆ. ಚಿತ್ರದ ಪ್ರಥಮ ಪ್ರತಿ ಸಿದ್ದವಾಗಿದ್ದು ಶೀಘ್ರದಲ್ಲೇ ಸೆನ್ಸಾರ್ ಮುಂದೆ ಬರಲಿದೆ. ಗಾರ್ಮೆಂಟ್ ದುನಿಯಾ ಸುತ್ತ ಹೆಣಿದಿರುವ ಈ ಕಥಾನಕ ಅಲ್ಲಿನ ಸಮಸ್ಯೆಗಳಿಗೆ ಕನ್ನಡಿ ಹಿಡಿದಂತಿದೆ.

ಮೀಡಿಯಾ ಇಂಟರ್ ನ್ಯಾಷನಲ್ ಸಂಸ್ಥೆ ಲಾಂಛನದಲ್ಲಿ ಮದನ್‌ಪಟೇಲ್ ಅವರು ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವುದಲ್ಲದೆ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಲವು ನೂತನ ಪ್ರತಿಭೆಗಳನ್ನು ಈ ಚಿತ್ರದ ಮೂಲಕ ಪರಿಚಯಿಸುತ್ತಿದ್ದಾರೆ. ಜೆ.ಜಿ.ಕೃಷ್ಣ ಛಾಯಾಗ್ರಹಣ, ಸಂಪತ್‌ರಾಜ್ ನೃತ್ಯ ನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಕಂಚನ್, ಅರವಿಂದ್, ನಿಶಿತಗೌಡ, ವನಿತಾ, ಜೈಆಕಾಶ್, ರಕ್ಷಾ, ರವಿತೇಜ, ಆರ್ಯ, ಪ್ರಕಾಶ್, ಮಧುಗೋಮತಿ, ಸಂತೋಷ್, ದೇವಿಕಾ, ಅಭಿಷೇಕ್ ಮುಂತಾದವರಿದ್ದಾರೆ.ಸುನಾಮಿಗೆ ವಿಶೇಷ ತಂತ್ರಜ್ಞಾನ
ಹಲವು ವರ್ಷದ ಹಿಂದೆ ಮುಂಬೈ, ಚೆನ್ನೈ ಮಹಾನಗರ ಸೇರಿದಂತೆ ಕೆಲವುಕಡೆ ಅಪಾರ ಸಾವುನೋವುಗಳನ್ನು ಉಂಟುಮಾಡಿದ ಭೀಕರ 'ಸುನಾಮಿ'ಯನ್ನು ಚಿತ್ರದ ಶೀರ್ಷಿಕೆಗೆ ಬಳಸಿಕೊಂಡಿದ್ದಾರೆ ನಿರ್ದೇಶಕ ಮಾಕಂ ಮನೋಹರ್.

ಮುಂಬೈ ಮುಂತಾದೆಡೆ ಚಿತ್ರೀಕರಣವನ್ನು ಪೂರೈಸಿರುವ ಚಿತ್ರಕ್ಕೆ ಮಾತುಗಳ ಜೋಡಣೆ ಪ್ರಕ್ರಿಯೆ ಮುಗಿದಿದ್ದು ಪ್ರಸ್ತುತ ಕರಿಸುಬ್ಬು ಅವರ ಬಾಲಾಜಿ ಡಿಜಿಟಲ್ ಸ್ಟೂಡಿಯೋದಲ್ಲಿ ಡಿ ಟಿ ಎಸ್ ತಂತ್ರಜ್ಞಾನ ದಿಂದ ಅಲಂಕೃತವಾಗುತ್ತಿದೆ. ಶ್ರೀ ಪದ್ಮಾವತಿ ಮೂವೀಸ್ ಲಾಂಛನದಲ್ಲಿ ರಾಜುಪಾಟೀಲ್ ನಿರ್ಮಿಸುತ್ತಿರುವ 'ಸುನಾಮಿ'ಗೆ ನಿರ್ದೇಶಕರೇ ಕಥೆ, ಚಿತ್ರಕಥೆ, ಬರೆದಿದ್ದಾರೆ. ಸದ್ಗುಣರಾಜರ ಸಂಗೀತವಿರುವ ಚಿತ್ರಕ್ಕೆ ವೆಂಕಟೇಶ್ ಅವರ ಛಾಯಾಗ್ರಹಣವಿದೆ. ಥ್ರಿಲ್ಲರ್‌ಮಂಜು, ಕೌರವವೆಂಕಟೇಶ್, ಟೈಗರ್‌ಮಧು ಸಾಹಸ, ಬಾಲನಾಯಕ್ ಸಂಕಲನ, ಪ್ರಸಾದ್, ಪರಮೇಶ್ ನೃತ್ಯ, ಶ್ರೀನಿವಾಸ್ ಕೌಶಿಕ್ ಸಂಭಾಷಣೆಯಿರುವ ಚಿತ್ರದ ತಾರಾಬಳಗದಲ್ಲಿ ರಾಜ, ಪೂನಂ, ರಂಗಾಯಣ ರಘು, ದೊಡ್ದಣ್ಣ, ಟೆನ್ನಿಸ್‌ಕೃಷ್ಣ, ಬುಲೆಟ್‌ಪ್ರಕಾಶ್, ಗಜರ್‌ಖಾನ್, ರೇಖಾದಾಸ್, ಕಿಲ್ಲರ್‌ವೆಂಕಟೇಶ್, ರಾಜಾರವೀಂದ್ರ, ಮೈಕಲ್‌ಮಧು, ಹ್ಯಾರಿ, ಮೈಕಲ್‌ಮಧು, ಭರತ್‌ಕಪೂರ್, ದೀಪಕ್ ಮುಂತಾದವರಿದ್ದಾರೆ.

(ದಟ್ಸ್‌ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada