»   » ತಾರಾ ಮೇಡಂ ಮತ್ತು ಕ್ರೆೃಂ ಸ್ಟೋರಿಗಳು!

ತಾರಾ ಮೇಡಂ ಮತ್ತು ಕ್ರೆೃಂ ಸ್ಟೋರಿಗಳು!

Posted By:
Subscribe to Filmibeat Kannada

ರಾಷ್ಟ್ರಪ್ರಶಸ್ತಿ ವಿಜೇತ ತಾರಾ ಮೇಡಂ ಇತ್ತೀಚೆಗೆ, ರಾಷ್ಟ್ರ ಮಟ್ಟದ ಮಾತುಗಳನ್ನೇ ಉಲಿಯುತ್ತಿದ್ದಾರೆ. ಅವರ ಅಮೋಘ ಚಿಂತನೆಗೆ ನಮ್ಮ ಸಲಾಂ!

ಕ್ರೆೃಂ ಆಧಾರಿತ ಸಿನಿಮಾಗಳು ಮತ್ತು ಧಾರಾವಾಹಿಗಳ ವಿರುದ್ಧ ರೇಡಿಯೋ ಸಿಟಿ ಕಾರ್ಯಕ್ರಮವೊಂದರಲ್ಲಿ ಅವರು ಕಿಡಿಕಾರಿದ್ದಾರೆ. ಎಳೆಯ ಮನಸಿನ ಮೇಲೆ ಕ್ರೆೃಂ ಮಾಡುವ ಆಘಾತ ನೆನೆದು ತತ್ತರಿಸಿದ್ದಾರೆ. ಹೀಗಾದ್ರೆ ಹೇಗಪ್ಪ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

‘ಸಿನಿಮಾ ಜನಪ್ರಿಯ ಮತ್ತು ಪರಿಣಾಮಕಾರಿ ಮಾಧ್ಯಮ. ಅಪರಾಧಗಳ ವೈಭವೀಕರಣದಿಂದ ಜನರು ದಾರಿ ತಪ್ಪುವ ಸಾಧ್ಯತೆಗಳಿವೆ. ಹೀಗಾಗಿ ಇಂಥ ಪ್ರಯತ್ನಗಳನ್ನು ವಿರೋಧಿಸೋಣ. ಪ್ರೇಕ್ಷಕರು ಇಂಥ ಚಿತ್ರಗಳನ್ನು ಬಹಿಷ್ಕರಿಸಬೇಕು. ಚಿತ್ರೋದ್ಯಮ ತನ್ನ ಜವಾಬ್ದಾರಿ ಅರ್ಥಮಾಡಿಕೊಳ್ಳಬೇಕು’ ಎಂದು ಹಿರಿಯಕ್ಕನಂತೆ ಸೂಚನೆ ರೂಪದ ಎಚ್ಚರಿಕೆಯನ್ನು ಕಾರ್ಯಕ್ರಮದ ಮೂಲಕ ಅವರು ರವಾನಿಸಿದ್ದಾರೆ.

‘ಸೈನೈಡ್‌’ ಚಿತ್ರ ಒಂದು ವಿಭಿನ್ನ ಚಿತ್ರ. ಇದರ ನಿರ್ದೇಶಕರು ತುಂಬ ಸೂಕ್ಷ್ಮವಾಗಿ ಚಿತ್ರೀಕರಿಸಿದ್ದಾರೆ ಎನ್ನುವ ಮೂಲಕ ಕ್ರೆೃಂನ ಇನ್ನೊಂದು ಮುಖವನ್ನು ತಾರಾ, ನಯವಾಗಿ ಬಚ್ಚಿಟ್ಟಿದ್ದಾರೆ. ಕಾರಣ ; ಈ ಚಿತ್ರದಲ್ಲಿ ತಾರಾ ಮೇಡಂ ನಟಿಸಿದ್ದಾರೆ!

ತಾರಾ ಅವರ ಹೇಳಿಕೆ ಒಪ್ಪಲು ನಮ್ಮದೇನು ತಕರಾರಿಲ್ಲ. ಆದರೆ, ‘ಆಚಾರ ಹೇಳೋಕೆ ಬದನೆಕಾಯಿ ತಿನ್ನೋಕೆ’ ಅನ್ನೋ ರೀತಿ ಆಗಬಾರದು. ಇದಷ್ಟೇ ನಮ್ಮ ಪಾಯಿಂಟು. ಕ್ರೆೃಂ ಸಿನಿಮಾಗಳ ಬಗ್ಗೆ ಮಾತಾಡೋ ತಾರಾ ಅವರೇ ಅಂಥ(ಡೆಡ್ಲಿ ಸೋಮ) ಚಿತ್ರಗಳಲ್ಲಿ ಪಾತ್ರ ಮಾಡ್ತಾರೆ. ಆದರೆ ವೇದಿಕೆಗಳಲ್ಲಿ ಮಾತ್ರ ಭಾಷಣ ಹೊಡೆಯುತ್ತಾರೆ! ಅದೆಲ್ಲ ಬಿಡಿ, ದೊಡ್ಡ ವಿಷಯವಲ್ಲ.

ತಾರಾ ಸದ್ಯದಲ್ಲಿಯೇ ತಮಾಷೆಯ ಸಿನಿಮಾ ನಿರ್ಮಾಣ ಮಾಡ್ತಾರಂತೆ. ಮಾಡಲಿ. ಅವರ ಪ್ರಯತ್ನಗಳು ಕೈಗೂಡಲಿ.

Post your views

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada