»   » ನಾಗತಿಹಳ್ಳಿಯ ಹುಡುಗಿಗೆ ಆಗಸ್ಟ್15ರಂದು ಬಿಡುಗಡೆ!

ನಾಗತಿಹಳ್ಳಿಯ ಹುಡುಗಿಗೆ ಆಗಸ್ಟ್15ರಂದು ಬಿಡುಗಡೆ!

Subscribe to Filmibeat Kannada


ಬೆಂಗಳೂರು, ಆಗಸ್ಟ್ 09 : ಸ್ವಾತಂತ್ರ್ಯ ದಿನಾಚರಣೆ ದಿನಕ್ಕೂ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೂ ಒಂದು ವಿಶೇಷ ನಂಟು. ಆಗಸ್ಟ್ 15 ನಾಗತಿಹಳ್ಳಿ ಹುಟ್ಟಿದ ದಿನವೂ ಆಗಿದೆ.

ಅಭಿವ್ಯಕ್ತಿ ವೇದಿಕೆ ಮುಖಾಂತರ ತಮ್ಮ ಸಡಗರವನ್ನು ನಾಗತಿಹಳ್ಳಿ ಹಂಚಿಕೊಳ್ಳುತ್ತಾರೆ. ಈ ವರ್ಷ ನಾಗತಿಹಳ್ಳಿ ಅವರ ಪುಸ್ತಕ ನನ್ನ ಪ್ರೀತಿಯ ಹುಡುಗಿ(6ನೇ ಸಂಪುಟ) ಬಿಡುಗಡೆಗೊಳ್ಳಲಿದೆ.

ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಅಂಕಣವಾಗಿ ಮೂಡಿ ಬಂದ ಲೇಖನಗಳು, ಪುಸ್ತಕ ರೂಪ ಪಡೆದಿವೆ. ನಗರದ ಯವನಿಕಾ ಸಭಾಂಗಣದಲ್ಲಿ ಸಂಜೆ 4ಕ್ಕೆ ಸಮಾರಂಭ ಆರಂಭಗೊಳ್ಳಲಿದೆ.

ಪ್ರೊ.ಚೆನ್ನವೀರ ಕಣವಿ, ಪ್ರೊ.ಹಂಪನಾ ಮತ್ತು ಡಾ.ಜಯಮಾಲಾ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.

ಇದೇ ಆಗಸ್ಟ್ 24ರಂದು ನಾಗತಿಹಳ್ಳಿ ನಿರ್ದೇಶನದ ಮಾತಾಡ್ ಮಾತಾಡ್ ಮಲ್ಲಿಗೆ ಚಿತ್ರ ತೆರೆಗೆ ಬರಲಿದೆ. ವಿಷ್ಣುವರ್ಧನ್, ಸುಹಾಸಿನ ಪ್ರಮುಖ ಪಾತ್ರದಲ್ಲಿದ್ದಾರೆ.

(ಏಜನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada