ಪಾನಮತ್ತ ದರ್ಶನ್ ನಿಂದ ಪತ್ನಿ ಮೇಲೆ ಹಲ್ಲೆ: ಡಿಸಿಪಿ ಸಿದ್ದರಾಮಪ್ಪ

ಪತ್ನಿ ವಿಜಯಲಕ್ಷ್ಮಿ ಅವರ ಸ್ನೇಹಿತೆ ವಿದ್ಯಾ ಮನೆಗೆ ನುಗ್ಗಿ ರಿವಾಲ್ವರ್ ನಿಂದ ಪ್ರಾಣ ಬೆದರಿಕೆಯೊಡ್ಡಿ, ದೈಹಿಕ ಹಲ್ಲೆ ನಡೆಸಿದ ದರ್ಶನ್ ಅವರನ್ನು ವಿಜಯನಗರ ಪೊಲೀಸರು ಶುಕ್ರವಾರ ಬೆಳಗ್ಗೆ 3 ಗಂಟೆಗೆ ಬಂಧಿಸಿದ್ದಾರೆ.
ಬಳಿಕ ಅವರನ್ನು ವೈದ್ಯಕೀಯ ತಪಾಸಣೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ದರ್ಶನ್ ಪಾನಮತ್ತರಾಗಿ ಅಮಲಿನಲ್ಲಿ ಪತ್ನಿಯ ಮೇಲೆ ಹಲ್ಲೆ ನಡೆಸಿರುವುದು ದೃಢಪಟ್ಟಿದೆ ಎಂದು ಸಿದ್ದರಾಮಪ್ಪ ಸ್ಪಷ್ಟಪಡಿಸಿದ್ದಾರೆ.
ಐಪಿಸಿ ಸೆಕ್ಷನ್ 301, 498 ಎ, ಶಸ್ತ್ರಾಸ್ತ್ರ ಕಾಯಿದೆ ಉಲ್ಲಂಘನೆಯಡಿ ನಟ ದರ್ಶನ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ತಕ್ಷಣ ಅವರನ್ನು ಕೋರ್ಟಿಗೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. [ಫುಲ್ ಕವರೇಜ್]
More from Filmibeat
English summary
Challenging Star, Kannada actor Darshan in an inebriated status attacked his wife Vijayalakshmi. Bangalore West DCP Siddaramappa inquiring in to the case. The jailed actor will be produced before 1st ACMM court on Monday 12th Sept.


Click it and Unblock the Notifications











