ತಪ್ಪೊಪ್ಪಿಕೊಂಡ ದರ್ಶನ್; ಪತ್ನಿಗೆ ಐಸಿಯುನಲ್ಲಿ ಚಿಕಿತ್ಸೆ

By Srinath

darshan-wife-multiple-wounds-doctor
ಬೆಂಗಳೂರು, ಸೆ. 9: ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ತಲೆ, ಮುಖ, ಕಾಲಿಗೆ ತೀವ್ರ ಪೆಟ್ಟುಗಳಾಗಿದ್ದು, ಹೊಲಿಗೆಗಳನ್ನು ಹಾಕಲಾಗಿದೆ.

ಅವರನ್ನು ಒಂದೆರಡು ದಿನ ಐಸಿಯುನಲ್ಲಿ ಇಡಲಾಗುವುದು ಎಂದು ಗಾಯತ್ರಿ ನರ್ಸಿಂಗ್ ಹೋಂ ವೈದ್ಯ ಡಾ. ಜೈನ್ ತಿಳಿಸಿದ್ದಾರೆ. ಆದರೆ ವಿಜಯಲಕ್ಷ್ಮಿ (ದರ್ಶನ್) ಅವರ ಮೂರು ವರ್ಷದ ಪುತ್ರನಿಗೆ ಯಾವುದೇ ತರಹದ ಗಾಯಗಳಾಗಿಲ್ಲ. ಮಗು ಸುರಕ್ಷಿತವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಿಜಯಲಕ್ಷ್ಮಿಗೆ ಮಲ್ಟಿಪಲ್ ಗಾಯಗಳಾಗಿವೆ. ಮುಖ, ತಲೆಯ ಮೇಲೆ cut ಗಳಾಗಿವೆ. ಅಲ್ಲಲ್ಲಿ ಊತಗಳೂ ಕಂಡುಬಂದಿವೆ. ಕೆಲವೆಡೆ ಕಚ್ಚಿರುವ ಗಾಯಗಳೂ ಆಗಿವೆ. ಆದರೆ ಇದು ರಿವಾಲ್ವರ್ ನಂತಹ ಆಯುಧದಿಂದ ಆದ ಗಾಯಗಳಲ್ಲ ಎಂದು ಡಾ. ಜೈನ್ ಮತ್ತು ಡಾ. ಸುನಿಲ್ ತಿಳಿಸಿದ್ದಾರೆ.

ದರ್ಶನ್ ತಪ್ಪೊಪ್ಪಿಗೆ: 'ಪತ್ನಿಯ ಮೇಲೆ ನಾನು ಹಲ್ಲೆ ನಡೆಸಿರುವುದು ನಿಜ. ಆ ವೇಳೆ ಮದ್ಯವನ್ನೂ ಸೇವಿಸಿದ್ದೆ' ಎಂದು ಪೊಲೀಸರು ಮುಂದೆ ದರ್ಶನ್ ತಪ್ಪೊಪ್ಪಿಕೊಂಡಿದ್ದಾರೆ.

'ರಾತ್ರಿ ಶೂಟಿಂಗ್ ಮುಗಿಸಿ ಮನೆಗೆ ಬಂದೆ, ಸ್ನೇಹಿತೆ ಮನೆಯಲ್ಲಿದ್ದ ಅವಳಿಗೆ ಮೂರು ವರ್ಷದ ಮಗುವನ್ನು ಕರೆದುಕೊಂಡು ಮನೆಗೆ ಬರಲು ಹೇಳಿದೆ. ಆದರೆ ಬರೊಲ್ಲ ಎಂದಳು. ಮಗುವನ್ನಾದರೂ ಕಳಿಸಿಕೊಡು ಎಂದೆ ಅದಕ್ಕೂ ಅವಳು ಒಪ್ಪಲಿಲ್ಲ. ಸಿಟ್ಟಿನಲ್ಲಿ ಕೈಯಿಂದ ಹಲ್ಲೆ ಮಾಡಿದ್ದೇನೆ' ಎಂದು ಆರೋಪಿ ದರ್ಶನ್ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

More from Filmibeat

English summary
Kannada Actor Darshan admits before Police that he had consumed alcohol while attacking wife Vijaylakshmi. She is being treated in Gayatri Nursing home, Bangalore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X