ಪ್ರಮೋಷನ್ ಗೆ 'ಮೊದಲಾ ಸಲ' ಬಂದ ಶೈಲೂ ಭಾಮಾ

'ಶೈಲೂ'ದಲ್ಲಿ ಮನೋಜ್ಞ ಅಭಿನಯದ ಮೂಲಕ ಗಮನ ಸೆಳೆಯುವ ಭಾಮಾ, ಪ್ರಮೋಶನ್ ಗೆ ಕೂಡ ಬಂದಿರುವುದು ನಿರ್ಮಾಪಕ ಕೆ. ಮಂಜು ಖುಷಿ ಪಡುವಂತಾಗಿದೆ. ತಮಿಳು 'ಮೈನಾ' ರೀಮೇಕ್ ಶೈಲೂ, ಅಪ್ಪಟ ಪ್ರೇಮ ದೃಶ್ಯಕಾವ್ಯ. ಅದನ್ನು ಹಾಗೇ ಕನ್ನಡದ ತೆರೆಗೆ ತಂದಿದ್ದಾರೆ ಕಲಾ ಸಾಮ್ರಾಟ್ ಎಸ್.ನಾರಾಯಣ್
ನಾಯಕಿಯರು ಪ್ರೊಮೋಶನ್ ಗೆ ಬರುವುದಿಲ್ಲ ಎನ್ನುವ ಕೆಲ ನಿರ್ಮಾಪಕರ ಕಣ್ಣೀರಿಗೆ ಉತ್ತರದಂತೆ ಸಿನಿಮಾ ಶುರುವಾಗುವ ಅರ್ಧ ಗಂಟೆ ಮುಂಚೆಯೇ ಸಾಗರ್ ಚಿತ್ರಮಂದಿರಕ್ಕೆ ಬಂದಿದ್ದರು ಭಾಮಾ. ಕೆಲವರು ಕೈ ಮೈ ಸವರಿದರು, ಹತ್ತಿರ ನಿಂತು ಫೋಟೋಗೆ ಫೋಸು ಕೊಡುವಂತೆ ಕೇಳಿಕೊಂಡರು. ಅಭಿಮಾನಿಗಳ ಜೊತೆ ನಿಂತು ಫೋಟೊ ತೆಗೆಸಿಕೊಂಡರು ಶೈಲೂ ಭಾಮಾ. ಅವೆಲ್ಲವನ್ನೂ ಸಹಿಸಿಕೊಂಡ ಭಾಮಾ ನಗುನಗುತ್ತಲೇ ಇದ್ದರು. ಶೈಲೂ ಸೂಪರ್ ಹಿಟ್ ಆಗುವ ಲಕ್ಷಣ ಭಾಮಾ ಮುಖದಲ್ಲಿತ್ತು.
ಇದಕ್ಕೆಲ್ಲಾ ಕಾರಣ ಆಕೆಗೆ ಎಸ್ ನಾರಾಯಣ್ ಇನ್ನೊಂದು ಚಿತ್ರದಲ್ಲಿ ಅವಕಾಶ ಕೊಟ್ಟಿರುವುದು ಆಗಿದ್ದರೂ ಈ ಚಿತ್ರದ ನಿರ್ಮಾಪಕರಿಗೆ ಹೆಲ್ಪ್ ಆಗಲಿರುವುದು ಖಂಡಿತ. 'ಮೊದಲಾ ಸಲ'ಕ್ಕೆ ಬಂದಿರದ ಬುದ್ಧಿ 'ಎರಡನೆ ಸಲ'ಕ್ಕಾದರೂ ಬಂದಿದೆಯಲ್ಲಾ! ಖುಷಿ ಪಡಲೇಬೇಕು. (ಒನ್ ಇಂಡಿಯಾ ಕನ್ನಡ)


Click it and Unblock the Notifications











