»   » ದೇವತೆಗಳಾದ ಕನ್ನಡ ನಾಯಕಿಯರು !

ದೇವತೆಗಳಾದ ಕನ್ನಡ ನಾಯಕಿಯರು !

Subscribe to Filmibeat Kannada
  • ದಟ್ಸ್‌ಕನ್ನಡ ಬ್ಯೂರೋ
ಕೊಲ್ಲೂರು ಮೂಕಾಂಬಿಕೆಯಾಗಿ- ಜಯಮಾಲ
ಶೃಂಗೇರಿ ಶಾರದೆಯಾಗಿ- ಸುಧಾರಾಣಿ
ಮೈಸೂರು ಚಾಮುಂಡೇಶ್ವರಿಯಾಗಿ- ಪ್ರೇಮ
ಹೊರನಾಡು ಅನ್ನಪೂರ್ಣೆಯಾಗಿ- ಅನು ಪ್ರಭಾಕರ್‌
ಕಟೀಲು ದುರ್ಗಾಪರಮೇಶ್ವರಿಯಾಗಿ- ರಾಧಿಕಾ
ಬಾದಾಮಿ ಬನಶಂಕರಿ ದೇವಿಯಾಗಿ- ವಿಜಯಲಕ್ಷ್ಮಿ
ಸವದತ್ತಿ ಎಲ್ಲಮ್ಮನಾಗಿ- ದಾಮಿನಿ
ಗೋಕರ್ಣದ ಭದ್ರಕಾಳಿ ಹಾಗೂ ಶಿರಸಿ ಮಾರಿಕಾಂಬಳಾಗಿ- ಋತಿಕಾ
ನಾಗದೇವತೆಯಾಗಿ- ಪೂಜಾ

‘ನವ ಶಕ್ತಿ ವೈಭವ’ ಎಂಬ ದೇಶದಲ್ಲೇ ಪ್ರಪ್ರಥಮ ಪ್ರಕಾರದ ಪೌರಾಣಿಕ ಚಿತ್ರದ ಪಾತ್ರಗಳಿವು. ಕನ್ನಡ ಚಿತ್ರದ ಚಾಲ್ತಿಯಲ್ಲಿರುವ ಸಮಸ್ತ ನಾಯಕಿಯರ ಕಾಲ್‌ಷೀಟು ಗಿಟ್ಟಿಸಿಕೊಂಡಿರುವುದು ಜಯಶ್ರೀ ದೇವಿ. ಗ್ರಾಫಿಕ್‌ ಮೆರುಗಿನ ಪೌರಾಣಿಕ ಚಿತ್ರಗಳ ಖ್ಯಾತಿಯ ಓಂ ಸಾಯಿಪ್ರಕಾಶ್‌ ಈ ಚಿತ್ರದ ನಿರ್ದೇಶಕ. ಶೃತಿ ಹಾಗೂ ರಾಮ್‌ಕುಮಾರ್‌ ಈ ಚಿತ್ರದ ಸಾಮಾಜಿಕ ಪಾತ್ರಗಳಲ್ಲಿ ನಟಿಸಲಿದ್ದಾರೆ.

ಚಿಂದೋಡಿ ಬಂಗಾರೇಶ್‌ಗೆ ಒಂದಿನ ಕನಸಲ್ಲಿ ಸಮಸ್ತ ದೇವತೆಗಳ ದರ್ಶನವಾಯಿತಂತೆ. ನಮ್ಮ ಬಗ್ಗೆ ಕಥೆ ಬರೀ.. ಮಗು ಅಂತ ಕನಸಲ್ಲಿ ಎಲ್ಲಾ ದೇವತೆಗಳೂ ಹೇಳಿದವಂತೆ. ಹೀಗಾಗಿ ದೇವ ಪ್ರೇರಣೆಯಿಂದ ಚಿಂದೋಡಿ ಬಂಗಾರೇಶ್‌ ಈ ಚಿತ್ರಕ್ಕೆ ಕಥೆ ಬರೆದರು. ಮಾತು ಕೊಟ್ಟು, ಆಮೇಲೆ ಅದಕ್ಕೆ ತಪ್ಪಿದರೆ ಏನಾಗುತ್ತದೆ ಎಂಬುದು ಚಿತ್ರಕಥೆಯ ಎಳೆ. ದೈವಭಕ್ತರಿಗಿದು ಸಕಲ ದೇವತಾ ದರ್ಶನ ಭಾಗ್ಯ ಕಲ್ಪಿಸಲಿದೆ. ಚಿತ್ರದ ತುಂಬ ನೀತಿ ಇರಲಿದ್ದು, ನಮ್ಮ ನಾಡಿನ ಜನರೆಲ್ಲ ನೋಡಲೇಬೇಕಾದ ಚಿತ್ರ ಇದು ಎನ್ನುತ್ತಾರೆ ಸಾಯಿಪ್ರಕಾಶ್‌. ದೇವತೆಗಳ ಗೆಟಪ್‌ನಲ್ಲಿ ಕನ್ನಡದ ನಾಯಕಿಯರು ಹೇಗೆ ಕಾಣಿಸುತ್ತಾರೋ? ನೋಡಿ, ಭಕ್ತಿ ಪರವಶರಾಗಿ !

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada