»   » ಸೆಕ್ಸಿ ಸಾಂಘವಿಗೆ ಸಿಕ್ಕಿದೆ ತಾಳಿ ಭಾಗ್ಯ

ಸೆಕ್ಸಿ ಸಾಂಘವಿಗೆ ಸಿಕ್ಕಿದೆ ತಾಳಿ ಭಾಗ್ಯ

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಜಗ್ಗೇಶ್‌ ನಾಯಕತ್ವದ ‘ರಾಯರ ಮಗ’ ಚಿತ್ರದ ಮೂಲಕ ಶಾಲೆಯಲ್ಲಿ ಓದುವ ಹುಡುಗಿಯಾಗಿದ್ದಾಗಲೇ ಚಿತ್ರರಂಗಕ್ಕೆ ಕಾಲಿಟ್ಟ ಬಿಂದಾಸ್‌ ನಟಿ ಸಾಂಘವಿಗೆ ಒಲಿದದ್ದು ತೆಲುಗು ಚಿತ್ರರಂಗ. ಆಗಿಂದಾಗ್ಗೆ, ಫಾರ್‌ ಎ ಚೇಂಜ್‌ ಕನ್ನಡದಲ್ಲೂ ನಟಿಸುವ ಈ ಸೆಕ್ಸಿ ಸುಂದರಿಗೆ ಕಂಕಣ ಭಾಗ್ಯ ಕೂಡಿ ಬಂದಿರುವ ಸುದ್ದಿ ಬಂದಿದೆ.

ಅಕ್ಚೋಬರ್‌ 15 ನೇ ತಾರೀಕು ಸಾಂಘವಿ ಮದುವೆ ಸದ್ದಿಲ್ಲದೇ ಫಿಕ್ಸ್‌ ಆಗಿದೆ. ತೆಲುಗಿನ ಯಶಸ್ವಿ ಚಿತ್ರ ನಿರ್ದೇಶಕ ಸುರೇಶ್‌ ವರ್ಮ ಮದುವೆ ಗಂಡು. ರಾಮ್‌ಗೋಪಾಲ್‌ವರ್ಮ ಗರಡಿಯಲ್ಲಿ ಪಳಗಿರುವ ಸುರೇಶ್‌ ವರ್ಮ ಮೃಗಂ, ಶಿವಯ್ಯ, ಸುಬ್ಬು ಮತ್ತು ಶಂಭು ಚಿತ್ರಗಳ ನಿರ್ದೇಶಕ. ಯಶಸ್ವಿ ನಿರ್ದೇಶಕರ ಯಾದಿಗೆ ಬೇಗ ಸೇರಿಕೊಂಡಿರುವ ಸುರೇಶ್‌ ಬುದ್ಧಿವಂತ ಅನ್ನಿಸಿಕೊಂಡಿದ್ದಾರೆ.

ಸದ್ಯಕ್ಕೆ ಯಾವುದೇ ನಾಯಕಿ ಪಾತ್ರದ ಆಫರುಗಳಿಲ್ಲದ ಸಾಂಘವಿ ಅತಿಥಿ ಪಾತ್ರಗಳಿಗೂ ಒಪ್ಪುವ ಪರಿಸ್ಥಿತಿ ಬಂದಿದೆ. ಹೀಗಾಗಿ ಅವರು ಬಿಡುವಾಗಿದ್ದಾರೆ. ಶಿವಯ್ಯ ಸಿನಿಮಾದಲ್ಲಿ ಸುರೇಶ್‌ ನಿರ್ದೇಶನವನ್ನು ಮೆಚ್ಚಿಕೊಂಡಿದ್ದ ಸಾಂಘವಿ ಅಂದಿನಿಂದಲೇ ಆತನ ಲವ್ವಲ್ಲಿ ಬಿದ್ದಿದ್ದಳು. ಬೇಗ ಮದುವೆಯಾಗೋಣ ಎಂಬ ಸುರೇಶ್‌ ಒತ್ತಾಸೆಗೆ ಸಿನಿಮಾ ಆಫರುಗಳು ಅಡ್ಡವಾಗಿದ್ದವು. ಈಗ ಸಾಂಘವಿ ಸಂಸಾರಸ್ಥೆಯಾಗಲು ಒಪ್ಪಿದ್ದಾರೆ. ‘ಏನಮ್ಮ ಇದ್ದಕ್ಕಿದ್ದ ಹಾಗೆ ಈ ತೀರ್ಮಾನ’ ಅಂತ ಕೇಳಿದರೆ, ‘ನಂಗೂ ವಯಸ್ಸಾಯ್ತಲ್ಲ, ಸಂಸಾರ ಅಂತ ಮಾಡಿಕೊಳ್ಳದಿದ್ದರೆ ಹೇಗೆ ಹೇಳಿ’ ಅಂತ ಸಾಂಘವಿ ನಾಚಿಕೊಳ್ತಾಳೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada