»   » ‘ಮೋಹಿನಿ 9448858888’

‘ಮೋಹಿನಿ 9448858888’

Subscribe to Filmibeat Kannada

‘ಮೊನಾಲಿಸಾ’ ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಿತರಾಗಿದ್ದ ಮೋಹಕ ನಗೆಯ ಚೆಲುವೆ ಸದಾ, ಈಗ ‘ಮೋಹಿನಿ 944885888’ ಚಿತ್ರದ ನಾಯಕಿ.

ಕಾಲೇಜ್‌ ಗರ್ಲ್‌ ಪಾತ್ರಗಳಿಂದ ನನಗೆ ಬೋರಾಗಿತ್ತು. ಈ ಚಿತ್ರದಲ್ಲಿ ನನಗೆ ಒಳ್ಳೆ ಪಾತ್ರ ಸಿಕ್ಕಿದೆ. ಚಿತ್ರದ ಕಥೆ ಕೇಳಿಯೇ ಪಾತ್ರ ಒಪ್ಪಿದೆ ಎನ್ನುತ್ತಾರೆ ಸದಾ.

ಈ ಪಾತ್ರಕ್ಕೆ ಈಕೆಯ ಹೊರತು ಬೇರೆಯವರು ಸರಿಹೊಂದುವುದಿಲ್ಲ ಎನ್ನುವ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು, ಈಕೆಯ ಕಣ್ಣುಗಳಲ್ಲಿ ಕವನವಿದೆ. ಸೌಂದರ್ಯವಿದೆ ಎಂದು ವರ್ಣಿಸುತ್ತಾರೆ.

ಇದು ಹಿಚ್‌ಕಾಕ್‌ ಮಾದರಿಯ ಚಿತ್ರ. ಇಂತಹ ಚಿತ್ರಗಳು ಕನ್ನಡದಲ್ಲಿ ಬಂದಿಲ್ಲ. ಸೌಂಡ್‌ ಮತ್ತು ಗ್ರಾಫಿಕ್‌ ತಂತ್ರಜ್ಞಾನವನ್ನು ಬಳಸಿಕೊಂಡು ಚಿತ್ರವನ್ನು ಶ್ರೀಮಂತಗೊಳಿಸುವುದಾಗಿ ಬಾಬು ಹೇಳುತ್ತಾರೆ.

ಆದಿತ್ಯ, ಸುಹಾಸಿನಿ, ಕೋಮಲ್‌, ಕಿರುತೆರೆಯ ರಾಜೇಶ್‌ ಚಿತ್ರದ ತಾರಾಗಣದಲ್ಲಿದ್ದಾರೆ. ಚಿತ್ರೀಕರಣ ಭರದಿಂದ ಸಾಗಿದೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada