»   » ಚಾರು ಈಗ ಸೆಕ್ಸ್‌ ಸಿನಿಮಾ ನಾಯಕಿ

ಚಾರು ಈಗ ಸೆಕ್ಸ್‌ ಸಿನಿಮಾ ನಾಯಕಿ

Posted By: Staff
Subscribe to Filmibeat Kannada

ಒಂದು ಕಾಲದಲ್ಲಿ ಕೇವಲ ಒಂದೂವರೆ ವರ್ಷದಲ್ಲಿ 15 ಕನ್ನಡ ಚಿತ್ರಗಳಲ್ಲಿ ಮಿಂಚಿ ಮಾಯವಾದ ಚಾರುಲತಾ ನಿಮಗೆ ನೆನಪಿದೆಯಾ? 'ಓ ಮಲ್ಲಿಗೆ" ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಪಂಜಾಬಿ ಮೂಲದ ಈ ಚೆಲುವೆಗೆ ಆಗ ಮಲೆಯಾಳಿ ಚಿತ್ರಗಳಲ್ಲೂ ಮಾರುಕಟ್ಟೆ ಇತ್ತು. ಆದರೆ ಈಗ ಈಕೆ ಎಲ್ಲಿ ಮಾಯವಾದಳು?

ಹೌದು, ಈಗ ಚಾರುಲತಾ ಮಟಾಮಾಯ. ಆದರೆ ತಮಿಳುನಾಡಿನ ಗೋಡೆಗಳ ಮೇಲಿನ ಪೋಸ್ಟರೊಂದರಲ್ಲಿ ಚಾರುಲತೆಯ ಚಿತ್ರ. ಬೇಸ್ತು ಬೀಳಲು ಕಾರಣವೂ ಇತ್ತು; ಯಾಕೆಂದರೆ, ತಮಿಳುನಾಡಿನ ಆ ಪೋಸ್ಟರು 'ಯೋಗ ಟೀಚರ್‌" ಎಂಬ ಹಸಿಬಿಸಿ ಚಿತ್ರದ್ದು. ಕನ್ನಡ, ತಮಿಳು ಹಾಗೂ ಮಲೆಯಾಳಂ ಚಿತ್ರಗಳಲ್ಲಿ ಸ್ಫುರದ್ರೂಪಿ ನಾಯಕಿಯಾಗಿ ನಟಿಸಿದ ಆ ಚಾರುಲತಾ ಎಲ್ಲಿ, ಈ ಯೋಗ ಟೀಚರ್‌ ಎಲ್ಲಿ ? !

ನೆನಪಿಸಿಕೊಂಡರೆ...
ಏಳು ವರ್ಷಗಳ ಹಿಂದೆ 'ಓ ಮಲ್ಲಿಗೆ" ಚಿತ್ರ ತೆರೆ ಕಂಡ ನಂತರ ಚಾರುಲತಾ ಮನೆಮಾತಾದಳು. ಆಫರುಗಳನ್ನು ಹಿಡಕೊಂಡು ಹೋದ ನಿರ್ಮಾಪಕರಾರಿಗೂ ಒಲ್ಲೆ ಎನ್ನಲಿಲ್ಲ. ಪಾತ್ರಕ್ಕೆ ತಕ್ಕ ಹಾಗೆ ಬಿಂದಾಸ್‌ ಆಗಿ ನಟಿಸಲೂ ತಕರಾರೆತ್ತಲಿಲ್ಲ. ಪರಿಣಾಮ ರಮೇಶ್‌, ವಿಷ್ಣುವರ್ಧನ್‌, ಶಿವರಾಜ್‌ ಕುಮಾರ್‌ ಚಿತ್ರಗಳಿಂದ ಹಿಡಿದು ಕುಮಾರ್‌ ಗೋವಿಂದ್‌, ಜಗ್ಗೇಶ್‌ರವರೆಗೆ ಆಗ ಮುಂಚೂಣಿಯಲ್ಲಿದ್ದ ಎಲ್ಲಾ ನಾಯಕರ ಜೊತೆ ಹಾಡಿ ಕುಣಿದಳು ಚಾರುಲತೆ. ಕನ್ನಡದಲ್ಲಿ ಈಕೆ ಗಳಿಸಿದ ವರ್ಚಸ್ಸು ಇತರ ಭಾಷೆಗಳಿಂದಲೂ ಆಫರ್‌ಗಳನ್ನು ಹರಿಸಿತು. ಒಂದೂವರೆ ವರ್ಷದಲ್ಲಿ ಒಟ್ಟು ನಲವತ್ತು ಚಿತ್ರಗಳು ಈಕೆಯ ಕೈಲಿದ್ದವು ಅಂದರೆ, ಚಾರುಲತಾ ಜನಪ್ರಿಯತೆ ಎಂಥದಿತ್ತು ಅನ್ನೋದು ಗೊತ್ತಾಗುತ್ತದೆ.

ಗಾಂಧಿನಗರದಲ್ಲಿ ಪಟಪಟನೆ ಮಾತಾಡುತ್ತಾ ಓಡಾಡಿಕೊಂಡಿದ್ದ ಚಾರುಲತಾ ಪರಭಾಷಾ ಚಿತ್ರಗಳ ಆಫರುಗಳ ಕಾರಣ ಗಾಂಧಿನಗರ ತೊರೆದ ಚಾರುಲತೆ ಮತ್ತೆ ಇತ್ತ ಚಿತ್ತೆೈಸಲೇ ಇಲ್ಲ. ಅತ್ತ ಪರಭಾಷೆಗೂ ಸಲ್ಲದೆ, ಸ್ಯಾಂಡಲ್‌ವುಡ್‌ಗೂ ಒಲ್ಲದೆ ತೆರೆಯಿಂದಲೇ ಈಕೆ ಮಾಯವಾಗಿ ಹೋದಳು. ಈಗ ಕಂಡಿದ್ದಾದರೂ ಈ 'ಯೋಗ ಟೀಚರ್‌" ಅವತಾರದಲ್ಲಿ. ಚಾರುಲತಾ ಈಗ ರಕ್ಷಾ ಅಂತ ಹೆಸರನ್ನೇನೋ ಬದಲಿಸಿಕೊಂಡಿದ್ದಾರೆ, ಆದರೆ ಚಹರೆ ಬದಲಾಗಲು ಸಾಧ್ಯವೇ? ಯಾಕಮ್ಮಾ ಹೀಗೆ ಅಂದರೆ, 'ಪರಿಸ್ಥಿತಿಯ ಕೈಗೊಂಬೆಯಾದಾಗ ಹೀಗಾಗುತ್ತೆ" ಅಂತ ಚಾರು ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಾಳೆ.

ಅಂದಹಾಗೆ, ಚಕ್ಕೋತಾ ಚೆಲುವೆ ರಕ್ಷಾಗೆ ತನ್ನ ಹೆಸರನ್ನೇ ಇಟ್ಟುಕೊಂಡು ಚಾರು ಮಾರುಕಟ್ಟೆಗೆ ಇಳಿದಿರುವುದಕ್ಕೆ ತಕರಾರಿಲ್ಲವಷ್ಟೆ?!

English summary
Charulatha becomes sex bomb !

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada