»   » ರೋಹಿಣಿ ನಕ್ಷತ್ರ ಉದಯಿಸಿದೆ, ರಕ್ಷಿತಾ ನಕ್ಷತ್ರ ಉರಿದುಬೀಳಲಿದೆ!

ರೋಹಿಣಿ ನಕ್ಷತ್ರ ಉದಯಿಸಿದೆ, ರಕ್ಷಿತಾ ನಕ್ಷತ್ರ ಉರಿದುಬೀಳಲಿದೆ!

Subscribe to Filmibeat Kannada


ಕನ್ನಡ ಚಿತ್ರರಂಗದ ಸದ್ಯದ ವರ್ತಮಾನ, ಬಿಸಿಬಿಸಿ ವಿವಾದ, ಯಾವ ನಟ/ನಟಿ ಏನ್‌ ಮಾಡ್ತಾಯಿದ್ದಾರೆ, ಇತ್ಯಾದಿ ಇತ್ಯಾದಿ.

ಪ್ರೇಮ್‌ರ ‘ಪ್ರೀತಿ ಏಕೆ ಭೂಮಿ ಮೇಲಿದೆ’ ಸಿನಿಮಾದ ನಾಯಕಿ ಹೆಸರು ರೋಹಿಣಿ. ಪೂರ್ತಿ ಹೆಸರು ರೋಹಿಣಿ ಸಾಹ್ನಿ. ಸುಮಾರು ಆರು ಅಡಿ ಎತ್ತರದ ಈ ನೀಳ ಬಾಲೆಯ ಹುಟ್ಟೂರು, ಮಧ್ಯಪ್ರದೇಶದ ಭೂಪಾಲ್‌. ಬೆಳೆದಿದ್ದು ನ್ಯೂಯಾರ್ಕ್‌ನಲ್ಲಿ. ಸದ್ಯಕ್ಕೆ ಮುಂಬೈನಲ್ಲಿ ವಾಸ್ತವ್ಯ. ಸಿನಿಮಾ ಬದುಕು ಆರಂಭಗೊಂಡಿದ್ದು ಸ್ಯಾಂಡಲ್‌ವುಡ್‌ನಲ್ಲಿ!

ಸೋತು ಆತ್ಮಹತ್ಯೆಯೇ ವಾಸಿಯೆಂಬ ನಿರ್ಮಾಪಕ-ನಿರ್ದೇಶಕರು ಏನು ಮಾಡಬೇಕು? ಈ ಪ್ರಶ್ನೆಗೆ ಉತ್ತರ : ‘ದೇವರ ಚಿತ್ರ’ವನ್ನು ಪ್ರೇಕ್ಷಕರಿಗೆ ನೀಡಬೇಕು! ಹೌದು ‘ರಂಭಾ’ ಚಿತ್ರ ಮಾಡಿದ ಬಿ.ರಾಮಮೂರ್ತಿ, ಪ್ರಸ್ತುತ ಸಾಯುವ ಯೋಚನೆಯನ್ನು ಬಿಟ್ಟು ಹಣ ಎಣಿಸುತ್ತಿದ್ದಾರೆ! ಚಿತ್ರ 50ದಿನಗಳನ್ನು ಪೂರೈಸಿ, ಮುನ್ನಡೆದಿದೆ. ರಾಮಮೂರ್ತಿ ಮುಂದಿನ ಚಿತ್ರ; ಮೇನಕಾ, ಊರ್ವಶಿ --ಹೀಗೆ ಯಾವುದು ಬೇಕಾದರೂ ಆಗಬಹುದಂತೆ!

ನಿರ್ಮಾಪಕರ ಪಾಲಿನ ‘ಅದೃಷ್ಟ ದೇವತೆ ’ ಎಂದೇ ಹೆಸರಾಗಿರುವ ರಮ್ಯಾ, ಮತ್ತೆ ತಮಿಳು ಚಿತ್ರರಂಗ ಪ್ರವೇಶಿಸಿದ್ದಾರೆ. ಈ ಸಲ ಮತ್ತೆ ತವರಿಗೆ ಮರಳುತ್ತಾರೋ ಇಲ್ಲವೋ ಗೊತ್ತಿಲ್ಲ. ಈ ಮಧ್ಯೆ ರಕ್ಷಿತಾ ಒಲ್ಲೆ ಎಂದಿದ್ದ ಅವಕಾಶವೊಂದು ರಮ್ಯಾ ಪಾಲಿಗೆ ಬಂದಿದೆ. ಅದು ಟಿ.ಎನ್‌.ಸೀತಾರಾಂರ ಹೊಸ ಸಿನಿಮಾ.

ಯಾಕೋ ರಕ್ಷಿತಾ ಕಿರಿಕ್‌ ಜಾಸ್ತಿಯಾಗುತ್ತಿದೆ. ‘ಕನ್ನಡ ಚಿತ್ರರಂಗದಲ್ಲಿ ಪ್ರೇಮ್‌ರಂಥ ನಿರ್ದೇಶಕರು ಇನ್ನೊಬ್ಬರಿಲ್ಲ’ ಎನ್ನುವ ಮೂಲಕ ವಿವಾದ ಒಂದಕ್ಕೆ ಬೆಂಕಿ ಹಚ್ಚಿದ್ದಾರೆ. ಕೂಡಲೇ ಕ್ಷಮೆಯಾಚಿಸದಿದ್ದರೆ, ಬಹಿಷ್ಕಾರ ಹಾಕುವುದಾಗಿ ಚಿತ್ರರಂಗದ ಕೆಲವರು ಎಚ್ಚರಿಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ ಪದವಿಯನ್ನು ನಟಿ ಬಿ.ಸರೋಜಾದೇವಿ, ತಮ್ಮ ಪತಿ ದಿವಂಗತ ಹರ್ಷ ಅವರಿಗೆ ಅರ್ಪಿಸಿದ್ದಾರೆ. ‘ವೃತ್ತಿಯಲ್ಲಿ ಇಂಜಿನಿಯರ್‌ ಆಗಿದ್ದ ಅವರು ನನ್ನ ಕಲಾಬದುಕಿಗೆ ಪ್ರೋತ್ಸಾಹ ನೀಡದಿದ್ದರೆ, ಈಯಮ್ಮ ಯಾರು ಎಂದು ಪ್ರೇಕ್ಷಕರು ಪ್ರಶ್ನಿಸುತ್ತಿದ್ದರು’ ಎಂದಿದ್ದಾರೆ ಸರೋಜಾದೇವಿ.

ಸಾಕ್ಷಿ ಶಿವಾನಂದ್‌ ಅಭಿನಯದ ‘ ಸೌಂದರ್ಯ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ರಮೇಶ್‌ ಚಿತ್ರದ ನಾಯಕರು. ಅವರ ‘ತೆನಾಲಿ ರಾಮ’ ಸದ್ಯಕ್ಕೆ ತೆರೆಯಲ್ಲಿದ್ದಾನೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada