»   » ನಾಯಕೀಯ ಬೆಳವಣಿಗೆಗಳಗೆ ವೇದಿಕೆಯಾದ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ

ನಾಯಕೀಯ ಬೆಳವಣಿಗೆಗಳಗೆ ವೇದಿಕೆಯಾದ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ

Posted By: Staff
Subscribe to Filmibeat Kannada

ತಾರೆ ಜಯಮಾಲಾ ಅವರಿಗೆ ಅನಿರೀಕ್ಷಿತ ಸೋಲುಣಿಸಿರುವ ಮಾಜಿ ಸಚಿವ ಎಸ್‌. ರಮೇಶ್‌ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ವಾಣಿಜ್ಯ ಮಂಡಳಿಯ ಸುವರ್ಣ ಮಹೋತ್ಸವ ವರ್ಷದ ಹಿನ್ನೆಲೆಯಲ್ಲಿ ಈ ಬಾರಿ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನದ ಚುನಾವಣೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿತ್ತು. ಅಧ್ಯಕ್ಷ ಸ್ಥಾನಕ್ಕೆ ಶನಿವಾರ (ಡಿ.7) ನಡೆದ ಚುನಾವಣೆಯಲ್ಲಿ ರಮೇಶ್‌ ಅವರು 517 ಮತಗಳನ್ನು ಪಡೆದರೆ, ಎದುರಾಳಿ ಜಯಮಾಲಾ ಅವರು 428 ಓಟು ಪಡೆದು, 89 ಮತಗಳ ಅಂತರದಿಂದ ಸೋಲುಂಡರು.

ಈ ನಡುವೆ ಚುನಾವಣೆಯಲ್ಲಿ ಮೋಸ ನಡೆದಿದೆ. ಅಕ್ರಮ ಮತದಾನ ನಡೆದಿದೆ ಎಂದು ಜಯಮಾಲಾ ಬೆಂಬಲಿಗರು ಆಕ್ಷೇಪಿಸಿದುದರಿಂದ ಫಲಿತಾಂಶ ಪ್ರಕಟಣೆ ವಿಳಂಬವಾಯಿತು. ಫಲಿತಾಂಶವನ್ನು ಪ್ರಶ್ನಿಸಿ ಜಯಮಾಲಾ ಅವರು ನ್ಯಾಯಾಲಯದ ಕಟ್ಟೆ ಹತ್ತುವ ಸಾಧ್ಯತೆಯ ಮಾತುಗಳೂ ಗಾಂಧಿನಗರದಲ್ಲಿ ಕೇಳಿಬರುತ್ತಿವೆ.

ಚುನಾವಣೆಯಲ್ಲಿ ಆಯ್ಕೆಯಾದ ವಾಣಿಜ್ಯ ಮಂಡಳಿ ಪದಾಧಿಕಾರಿಗಳ ಪಟ್ಟಿ ಇಂತಿದೆ :
ಅಧ್ಯಕ್ಷ : ಎಸ್‌.ರಮೇಶ್‌
ಉಪಾಧ್ಯಕ್ಷರು : ಎಸ್‌. ಎ. ಚಿನ್ನೇಗೌಡ, ಕೆ. ಜಾನಕೀರಾಮ್‌, ಬಿ.ಪಿ. ಅಶೋಕ್‌
ಗೌರವ ಕಾರ್ಯದರ್ಶಿ ಗಳು : ಬಿ.ಎನ್‌. ಗಂಗಾಧರ್‌, ಜಿ.ಕೆ. ಕುಟ್ಟಿ ಹಾಗೂ ಥಾಮಸ್‌ ಡಿಸೋಜಾ
ಖಜಾಂಚಿ : ಎಚ್‌.ಎನ್‌. ಮಾರುತಿ.

English summary
S. Ramesh is the new president of Film Chamber

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada