ನಟಿ ಮೋನಿಕಾ ಬೇಡಿ ಪಂಜಾಬಿ ಚಿತ್ರರಂಗಕ್ಕೆ ರಿಎಂಟ್ರಿ

ಭೂಗತ ಪಾತಕಿ ಅಬೂ ಸಲೀಂ ಪ್ರೇಯಸಿ ಎಂದು ಬಂಧಿಸಲ್ಪಟ್ಟು ಜೈಲಿನಲ್ಲಿದ್ದ ಮೋನಿಕಾ ಬೇಡಿ ಬಿಡುಗಡೆಯ ನಂತರ ಟಿವಿ ಷೋ ಬಿಗ್ ಬಾಸ್ ಹಾಗೂ ಜಲಕ್ ದಿಕ್ಲಾಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಳು. ಆನಂತರ ಬಾಂಗ್ಲಾ , ನೇಪಾಳಿ ಹಾಗೂ ತಮಿಳು ಚಿತ್ರರಂಗದಲ್ಲಿ ನಟಿಸಿದ್ದ ಈಕೆಗೆ ಈಗ ಪಂಜಾಬಿ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ.
ತುಮ್ ಬಿನ್ ಖ್ಯಾತಿಯ ಬಾಲಿವುಡ್ ಚಿತ್ರದ ನಾಯಕ ಪಿಯಾಂಶು ಚಟರ್ಜಿ ಈ ಚಿತ್ರದ ನಾಯಕನಾಗಿ ನಟಿಸಲಿದ್ದಾರೆ. ಈಗ ತೆಳ್ಳಗೆ ಬಳಕುತ್ತಿರುವ ಮೋನಿಕಾ ಮೂಲತಃ ಪಂಜಾಬಿ. ತಮ್ಮ ರಾಜ್ಯದ ಚಿತ್ರದಲ್ಲಿ ನಟಿಸಲು ಮರಳಿ ಅವಕಾಶ ಸಿಕ್ಕಿದ್ದಕ್ಕಾಗಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
More from Filmibeat
English summary
Actress Monica Bedi, who emerged from her controversial past few years ago, has now come back to her roots in Punjab as she has signed a Punjabi film, “Sirphire” opposite Bollywood actor Priyanshu Chatterjee


Click it and Unblock the Notifications











