For Quick Alerts
  ALLOW NOTIFICATIONS  
  For Daily Alerts

  ರಮ್ಯಾ ಮಾತನ್ನು ಕೇಳುವ ಅಗತ್ಯ ನನಗಿಲ್ಲ: ಯಶ್

  |

  ರಾಕಿಂಗ್ ಸ್ಟಾರ್ ಯಶ್, ಇತ್ತೀಚಿಗೆ ಹೆಚ್ಚುತ್ತಿರುವ ತಮ್ಮ ಮೇಲಿನ ಆಪಾದನೆಗಳಿಂದ ಬೇಸತ್ತಿದ್ದಾರೆ. ಸಿನಿಮಾ ಪ್ರಮೋಶನ್ ಗಳಿಗೆ ಯಾವುದೇ ವಾಹಿನಿಗಳಿಗೆ ಹೋದರೂ ಅದನ್ನೇ ಪ್ರಶ್ನೆ ಕೇಳುತ್ತಾರೆ, ಅದಕ್ಕೇ ಉತ್ತರ ನಿರೀಕ್ಷಿಸುತ್ತಾರೆ. "ಸಂಭಾವನೆ ಜಾಸ್ತಿ ಕೇಳುತ್ತೀರಂತೆ, ಚಿತ್ರದಲ್ಲಿ ನಿಮ್ಮನ್ನೇ ಹೈಲೈಟ್ ಮಾಡಲು ಹೇಳುತ್ತೀರಂತೆ, ರಮ್ಯಾ ಜತೆ ಜಗಳ ಆಡಿದ್ದೀರಂತೆ? ಯಾಕೆ? ಎಲ್ಲೆಲ್ಲೂ ಇವೇ ಪ್ರಶ್ನೆಗಳು. ನನಗೂ ಉತ್ತರ ಕೊಟ್ಟು ಕೊಟ್ಟು ಸಾಕಾಗಿದೆ" ಎನ್ನುತ್ತಿದ್ದಾರೆ ಯಶ್.

  ಯಶ್, ಯಶಸ್ವೀ ನಟನಾಗಿ ಮೇಲೇರುತ್ತಿದ್ದಂತೆ ಆರೋಪಗಳು ಕೂಡ ಯಶ್ ಸುತ್ತ ಸುತ್ತುತ್ತಿರುವುದು ಜಾಸ್ತಿಯಾಗಿದೆ. ಅವರು ಕೆಲವಕ್ಕೆ ಸಮಜಾಯಿಸಿ ನೀಡಿದ್ದಾರೆ ಕೂಡ. "ನನ್ನ ಯೋಗ್ಯತೆಗೆ ತಕ್ಕ ಸಂಭಾವನೆ ಕೊಡುತ್ತಾರೆ. ನಾನು ಕೋಟಿ ಸಂಭಾವನೆ ಕೇಳುತ್ತಿಲ್ಲ" ಎಂದು ಯಶ್ ಸ್ಪಷ್ಟಪಡಿಸಿದ್ದಾರೆ. ಆದರೆ ಈ ನಡುವೆ ಅವರಿಗೆ ಸುತ್ತಿಕೊಂಡಿರುವ ಆರೋಪ ರಮ್ಯಾ ಜೊತೆ ಯಶ್ ಜಗಳ ಆಡಿದ್ದಾರೆಂಬುದು.

  ಅದಕ್ಕೆ ಯಶ್ ಕೊಡುವ ಉತ್ತರ "ರಮ್ಯಾ ಜನಪ್ರಿಯ ತಾರೆ. ಆದರೆ ಅದರಿಂದ ನನಗೆ ಏನೂ ಆಗಬೇಕಾಗಿಲ್ಲ. ಅವರ ಮಾತನ್ನು ಕೇಳುವ ಅಗತ್ಯವಾಗಲೀ ಇಷ್ಟವಾಗಲೀ ನನಗಿಲ್ಲ. ನಾನು ನನ್ನ ಅಪ್ಪ-ಅಮ್ಮನ ಮಾತನ್ನು ಮಾತ್ರವೇ ಕೇಳುತ್ತೇನೆ. ಉಳಿದಂತೆ ನಾನು ಯಾರಿಷ್ಟದ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಇಷ್ಟಕ್ಕೆ, ಕಷ್ಟಕ್ಕೆ, ಸಾಧನೆಗೆ ಆಗಿರುವವರು ನನ್ನ ಅಪ್ಪ, ಅಮ್ಮ ಮತ್ತು ಕುಟುಂಬ ಮಾತ್ರ.

  ಚಿತ್ರರಂಗದಲ್ಲಿ ನನ್ನ ವೃತ್ತಿಗೆ ಸಂಬಂಧಿಸಿದಂತೆ ನನಗೆ ದುಡ್ಡು ಕೊಡುತ್ತಾರೆ, ನಾನು ಕೆಲಸ ಮಾಡುತ್ತೇನೆ. ಅದು ಬಿಟ್ಟರೆ ಯಾರ ಮಾತನ್ನೂ ಕೇಳುವ ಅಗತ್ಯ ನನಗಿಲ್ಲ. ರಮ್ಯಾ ಆಗಲೀ, ಯಾರೇ ಆಗಲಿ ಇಲ್ಲಿ ನನಗೆ ಕೆಲಸ ಮಾತ್ರ ಮುಖ್ಯ. ನಾನು ತೆಗೆದುಕೊಂಡ ಸಂಭಾವನೆಗೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂಬುದು ನನಗೆ ಗೊತ್ತಿದೆ, ಅದನ್ನು ಮಾಡುತ್ತೇನೆ ಅಷ್ಟೇ. ಉಳಿದ ಅಂತೆ-ಕಂತೆಗಳಿಗೆ ತಲೆಕೆಡಿಸಿಕೊಳ್ಳುವಷ್ಟು ಸಮಯ ನನಗಿಲ್ಲ" ಎಂದು ಯಶ್ ನೇರವಾಗಿ ಉತ್ತರಿಸಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Description: Rocking Star Yash told that Sandalwood Queen Ramya is good actress but he has to nothing for that. He answerd for their Controversy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X