For Quick Alerts
  ALLOW NOTIFICATIONS  
  For Daily Alerts

  ಸೂಪರ್ ಸ್ಟಾರ್ ಉಪ್ಪಿ ಆರಕ್ಷಕ ಚಿತ್ರಕ್ಕೆ ಚೌಚೌ ಪ್ರತಿಕ್ರಿಯೆ

  By Rajendra
  |

  ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ ಆರಕ್ಷಕ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿಂದಿನ 'ಸೂಪರ್' ಚಿತ್ರಕ್ಕೆ ಹೋಲಿಸಿದರೆ ಆರಕ್ಷಕ ಚಿತ್ರ ಆ ಮಟ್ಟದಲ್ಲಿ ಸದ್ದು ಮಾಡಿಲ್ಲ ಎಂಬ ಮಾತುಗಳು ಬಾಕ್ಸಾಫೀಸ್ ವಲಯದಿಂದ ಕೇಳಿಬರುತ್ತಿವೆ.

  ಇನ್ನೂ ಕೆಲವರು ಚಿತ್ರದ ಕಥಾಹಂದರ ತುಂಬಾ ಕ್ಲಿಷ್ಟಕರವಾಗಿದೆ. ಅರ್ಥ ಮಾಡಿಕೊಳ್ಳುವುದೇ ಕಷ್ಟ ಎಂದಿದ್ದಾರೆ. ಒಂದಷ್ಟು ಮಂದಿ ಚಿತ್ರದ ಕತೆ ಓಕೆ. ಇಂಟರೆಸ್ಟಿಂಗ್ ಆಗಿದೆ. ಆದರೆ ನಿರೂಪಣೆ ನಿರೀಕ್ಷಿಸಿದ ಮಟ್ಟದಲ್ಲಿಲ್ಲ ಎನ್ನುತ್ತಿದ್ದಾರೆ. ಉಪ್ಪಿ ನಟನೆಯ ಬಗ್ಗೆ ಕೆಮ್ಮದ, ಗೊಣಗದ ಕೆಲವರು ರಾಗಿಣಿ ದ್ವಿವೇದಿ ಪಾತ್ರವನ್ನು ಮಾತ್ರ ಮನಸಾರೆ ಮೆಚ್ಚಿದ್ದಾರೆ.

  ಥ್ರಿಲ್ಲರ್, ಸಸ್ಪೆನ್ಸ್ ಸಿನಿಮಾ ಆದ ಆರಕ್ಷಕದ ಕತೆ ಸಾಮಾನ್ಯ ಪ್ರೇಕ್ಷಕನಿಗೆ ಅರ್ಥವಾಗುವುದು ಕಷ್ಟ. ಚಿತ್ರ ನೋಡಿದ ಬಳಿಕ ಇನ್ನೊಮ್ಮೆ ನೋಡಬೇಕೆಂಬ ಅನಿವಾರ್ಯತೆ ಎದುರಾಗುತ್ತದೆ. ಮಚ್ಚು, ಲಾಂಗು ಕೊಚ್ಚು ಹೊಡಿ ಬಡಿ ಚಿತ್ರಗಳನ್ನು ನೋಡಿದ್ದ ಪ್ರೇಕ್ಷಕರಿಗಂತೂ ಉಪ್ಪಿ ವಿಭಿನ್ನ ಸಬ್ಜೆಕ್ಟ್ ಕೊಟ್ಟಿದ್ದಾರೆ ಎನ್ನುತ್ತಾರೆ ಉಪ್ಪಿ ಅಭಿಮಾನಿ ಕತ್ರಿಗುಪ್ಪೆಯ ನಾಗರಾಜ. (ಒನ್‌ಇಂಡಿಯಾ ಕನ್ನಡ)

  English summary
  Box office reports reveal that, Upendra lead film Aarakshaka has been getting mixed response. While some have found the storyline to be complicated, others have found it interesting but mentioned that the narrative was not up to the mark.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X