ಸದ್ಯದಲ್ಲೇ ನಿಮ್ಮ ಕೈಗೆ ಹರಿಕೃಷ್ಣ 'ಅದ್ದೂರಿ' ಆಡಿಯೋ

ಆಡಿಯೋ ಹಾಗೂ ಚಿತ್ರ ಬಿಡುಗಡೆಯನ್ನು ಸಾಕಷ್ಟು ಅಳೆದು, ತೂಗಿ ಮಾಡುವ ಐಡಿಯಾ ಅರ್ಜುನ್ ರದು. ಅಂಬಾರಿ ಮೂಲಕ ಯಶಸ್ವೀ ನಟ ಎನಿಸಿಕೊಂಡ ಅವರು ಅದ್ದೂರಿ ಮೂಲಕ ಇನ್ನೂ ಮೇಲೇರಲು ಬಯಸುತ್ತಿದ್ದಾರೆ. ನಾಯಕ ಧ್ರುವ ಸರ್ಜಾ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಲಿದ್ದಾರೆ. ನಾಯಕಿ ರಾಧಿಕಾ ಪಂಡಿತ್, ವೃತ್ತಿಯಲ್ಲಿ ಸಾಕಷ್ಟು ಮೇಲೇರಿದ್ದರೂ ಹೊಸಬರ ಜೊತೆಯೂ ತಾನು ನಟಿಸಬಲ್ಲೆ ಎಂದು ಅದ್ದೂರಿ ಮೂಲಕ ಸಾಬೀತುಪಡಿಸಿದ್ದಾರೆ.
ಹಾಡುಗಳು ಎಲ್ಲಾ ವರ್ಗದ ಜನರಿಗೆ ಇಷ್ಟವಾಗಲಿವೆ ಎಂಬುದು ಚಿತ್ರತಂಡದ ಪ್ರತಿಯೊಬ್ಬರ ಅನಿಸಿಕೆ. ಆಡಿಯೋ ಬಿಡುಗಡೆ ದಿನಾಂಕ ಸದ್ಯದಲ್ಲೇ ಘೋಷಣೆಯಾಗಲಿದೆ. ಸಿನಿಪ್ರೇಕ್ಷಕರು ತುಂಬಾ ದಿನಗಳಿಂದ ಕಾಯುತ್ತಿದ್ದಾರೆ ಎಂಬುದು ಅರ್ಜುನ್ ಗೂ ಗೊತ್ತು. ಹಾಗಾಗಿ ಸದ್ಯದಲ್ಲೇ ಆಡಿಯೋ ಬಿಡುಗಡೆ ಘೋಷಿಸಲಿದ್ದಾರೆ ಎ. ಪಿ. ಅರ್ಜುನ್. (ಒನ್ ಇಂಡಿಯಾ ಕನ್ನಡ)
More from Filmibeat
English summary
Director A P Arjun Movie 'Adduri' Audio Release will be held on First or Second week of Feb, 2012. This is produced by Shankar Reddy. Dhruva Sarja and Radhika Pandit acted in lead role.


Click it and Unblock the Notifications











