10ನೇ ವಯಸ್ಸಲ್ಲೇ ರಾಷ್ಟ್ರ ಪ್ರಶಸ್ತಿ, ಅತಿಹೆಚ್ಚು ಸೈಮಾ ಅವಾರ್ಡ್ಸ್; ಅಪ್ಪು ಗೆದ್ದ ಪ್ರಶಸ್ತಿಗಳ ಸಂಪೂರ್ಣ ಪಟ್ಟಿ

1975ರ ಮಾರ್ಚ್ 17ರಂದು ಜನಿಸಿದ ಲೋಹಿತ್ ಜನಿಸಿದ ಆರೇ ತಿಂಗಳಿಗೆ ತಮ್ಮ ತಂದೆ ರಾಜ್‌ಕುಮಾರ್ ನಟನೆಯ ಪ್ರೇಮದ ಕಾಣಿಕೆ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಜನಿಸಿ ವರ್ಷ ತುಂಬುವುದರೊಳಗೆಯೇ ಸಿನಿಮಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದರು. ಬಳಿಕ 1976ರಲ್ಲಿ ಬಿಡುಗಡೆಯಾದ ಸನಾದಿ ಅಪ್ಪಣ್ಣ ಚಿತ್ರದಲ್ಲಿಯೂ ಸಹ ಅಪ್ಪು ಕಾಣಿಸಿಕೊಂಡಿದ್ದರು. ಹೀಗೆ ಮಾತು ಬರುವ ಮುನ್ನವೇ ಕ್ಯಾಮೆರಾ ಎದುರಿಸಿದ್ದ ಅಪ್ಪು ಬಳಿಕ ವಸಂತ ಗೀತ, ಭೂಮಿಗೆ ಬಂದ ಭಗವಂತ, ಎರಡು ನಕ್ಷತ್ರಗಳು, ಯಾರಿವನು ಹಾಗೂ ಬೆಟ್ಟದ ಹೂವು ಸೇರಿದಂತೆ ಒಟ್ಟು 14 ಚಿತ್ರಗಳಲ್ಲಿ ಬಾಲನಟನಾಗಿ ನಟಿಸಿದ್ದರು.

ಬಾಲ ನಟನಾಗಿ ತಮ್ಮ ಅದ್ಭುತ ನಟನೆಯಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಮಾಸ್ಟರ್ ಲೋಹಿತ್ 2002ರಲ್ಲಿ ತೆರೆಕಂಡ ಅಪ್ಪು ಚಿತ್ರದ ಮೂಲಕ ಪುನೀತ್ ರಾಜ್‌ಕುಮಾರ್ ಆಗಿ ನಾಯಕನಾಗಿ ರಿ ಎಂಟ್ರಿ ಕೊಟ್ಟರು. ಬಾಲ ನಟನಾಗಿ ಜನಮನ ಗೆದ್ದಿದ್ದ ಲೋಹಿತ್ ಪುನೀತ್ ರಾಜ್‌ಕುಮಾರ್ ಆದ ಬಳಿಕ ಇನ್ನೂ ದೊಡ್ಡ ಮಟ್ಟದ ಜಯ ಸಾಧಿಸಿದರು. ಪುನೀತ್ ರಾಜ್‌ಕುಮಾರ್ ಹಿಟ್ ಮೇಲೆ ಹಿಟ್ ನೀಡಿ ಪವರ್ ಸ್ಟಾರ್ ಆದರು, ತಮ್ಮ ಸರಳತೆ, ಸಮಾಜಕ್ಕೆ ಕೊಟ್ಟ ಸಂದೇಶಗಳಿಂದ ಕನ್ನಡದ ರಾಜರತ್ನನಾದರು ಹಾಗೂ ತಾವು ಮಾಡಿದ ಸಮಾಜಸೇವೆಯಿಂದಾಗಿ ಇದೀಗ ಪುನೀತ್ ರಾಜ್‌ಕುಮಾರ್ ಕರ್ನಾಟಕ ರತ್ನ ಎನಿಸಿಕೊಂಡಿದ್ದಾರೆ.

1 National award, 5 SIIMA awards: List of awards won by Dr Puneeth Rajkumar

ಹೀಗೆ ಕನ್ನಡ ಚಲನಚಿತ್ರರಂಗದ ವರನಟ ರಾಜ್‌ಕುಮಾರ್ ಪುತ್ರನಾಗಿ ಜನಿಸಿ ಚಿತ್ರರಂಗಕ್ಕೆ ಕಾಲಿಟ್ಟ ಮಾಸ್ಟರ್ ಲೋಹಿತ್ ಕರ್ನಾಟಕ ರತ್ನನಾಗಿ, ಹೀರೊ ಎಂದರೆ ಹೀಗಿರಬೇಕು ಎಂದು ಹೇಳುವ ಹಾಗೆ ಬೆಳೆದು ನಿಂತದ್ದು ತನ್ನದೇ ಶ್ರಮದಿಂದ, ಯಾವುದೇ ವಿವಾದ ಮಾಡಿಕೊಳ್ಳದೇ ಮಾದರಿ ಜೀವನ ನಡೆಸಿದ್ದರಿಂದ. ಕೋಟ್ಯಂತರ ಜನರ ಮನದಲ್ಲಿ ಗಟ್ಟಿಯಾಗಿ ನೆಲೆಯೂರಿರುವ ಪುನೀತ್ ರಾಜ್‌ಕುಮಾರ್ ಅವರಿಗೆ ದೇವರ ಸ್ಥಾನವನ್ನು ಅಭಿಮಾನಿಗಳು ನೀಡಿರುವುದು ದೊಡ್ಡ ಪ್ರಶಸ್ತಿಯಾಗಿದೆ. ಇದರ ಜತೆಗೆ ಪುನೀತ್ ರಾಜ್‌ಕುಮಾರ್ ಹಲವಾರು ಪ್ರಶಸ್ತಿಗಳನ್ನು ತಮ್ಮ ಅಭಿನಯಕ್ಕಾಗಿ ಹಾಗೂ ತಮ್ಮ ನಡೆಗಾಗಿ ಪಡೆದುಕೊಂಡಿದ್ದಾರೆ. ಅವುಗಳ ಸಂಪೂರ್ಣ ಪಟ್ಟಿ ಈ ಕೆಳಕಂಡಂತಿದೆ..

* ಪುನೀತ್ ರಾಜ್‌ಕುಮಾರ ಮಾಡಿದ ಸಮಾಜಸೇವೆ ಹಾಗೂ ಮನರಂಜನಾ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಳಿಂದಾಗಿ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರ 2022ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಿ ಗೌರವಿಸಿದೆ.

* 1985ರಲ್ಲಿ ಬಿಡುಗಡೆಯಾದ ಬೆಟ್ಟದ ಹೂವು ಚಿತ್ರದ ನಟನೆಗಾಗಿ ಪುನೀತ್ ರಾಜ್‌ಕಮಾರ್ ಅತ್ಯುತ್ತಮ ಬಾಲನಟ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದಿದ್ದರು.

1 National award, 5 SIIMA awards: List of awards won by Dr Puneeth Rajkumar

* ಕರ್ನಾಟಕ ರಾಜ್ಯ ಪ್ರಶಸ್ತಿ: ಚಲಿಸುವ ಮೋಡಗಳು ಹಾಗೂ ಎರಡು ನಕ್ಷತ್ರ ಚಿತ್ರಗಳಲ್ಲಿನ ನಟನೆಗಾಗಿ ಕರ್ನಾಟಕ ರಾಜ್ಯ ಅತ್ಯುತ್ತಮ ಬಾಲನಟ ಪ್ರಶಸ್ತಿಯನ್ನು ಮಾಸ್ಟರ್ ಲೋಹಿತ್ ಪಡೆದಿದ್ದರು ಮತ್ತು ಮಿಲನ ಹಾಗೂ ಜಾಕಿ ಚಿತ್ರಗಳಿಗೆ ಅತ್ಯುತ್ತಮ ನಾಯಕ ಪ್ರಶಸ್ತಿಯನ್ನು ಪಡೆದಿದ್ದರು. ಈ ಮೂಲಕ ಒಟ್ಟು ನಾಲ್ಕು ರಾಜ್ಯ ಪ್ರಶಸ್ತಿಯನ್ನು ಅಪ್ಪು ಪಡೆದುಕೊಂಡಿದ್ದಾರೆ.

* ಫಿಲ್ಮ್‌ಫೇರ್ ಪ್ರಶಸ್ತಿ: ಬೆಟ್ಟದ ಹೂವು ಚಿತ್ರಕ್ಕಾಗಿ ಅತ್ಯುತ್ತಮ ಬಾಲ ನಟ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಪಡೆದಿದ್ದ ಅಪ್ಪು ಅರಸು, ಹುಡುಗರು, ರಣವಿಕ್ರಮ ಹಾಗೂ ರಾಜಕುಮಾರ ಚಿತ್ರಗಳಿಗಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದಿದ್ದರು. ಕಳೆದ ವರ್ಷ ಬೆಂಗಳೂರಿನಲ್ಲಿಯೇ ನಡೆದ ಫಿಲ್ಮ್ ಫೇರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಪುನೀತ್ ರಾಜ್‌ಕುಮಾರ್‌ಗೆ ಫಿಲ್ಮ್ ಫೇರ್ ಲೈಫ್ ಟೈಮ್ ಅಚೀವ್‌ಮೆಂಟ್ ಅವಾರ್ಡ್ ಅನ್ನೂ ಸಹ ನೀಡಲಾಯಿತು. ಈ ಮೂಲಕ ಒಟ್ಟು ಆರು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಅಪ್ಪು ಪಡೆದಿದ್ದಾರೆ.

* ಸೈಮಾ ಪ್ರಶಸ್ತಿ: ಪುನೀತ್ ರಾಜ್‌ಕುಮಾರ್ ಒಟ್ಟು ಐದು ಸೈಮಾ ಪ್ರಶಸ್ತಿಗಳನ್ನು ಪಡೆದಿದ್ದು ಅತಿಹೆಚ್ಚು ಸೈಮಾ ಪ್ರಶಸ್ತಿ ಪಡೆದ ಕನ್ನಡದ ನಟ ಎನಿಸಿಕೊಂಡಿದ್ದಾರೆ. ಹುಡುಗರು, ರಣವಿಕ್ರಮ, ರಾಜಕುಮಾರ ಹಾಗೂ ಯುವರತ್ನ ಚಿತ್ರಗಳ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪುನೀತ್ ಪಡೆದಿದ್ದಾರೆ ಹಾಗೂ 2013ರಲ್ಲಿ ಸೈಮಾ ಯೂತ್ ಐಕಾನ್ ಪ್ರಶಸ್ತಿಯನ್ನೂ ಸಹ ಗೆದ್ದಿದ್ದಾರೆ.

* ಮಿಲನ ಹಾಗೂ ಹಾಕಿ ಚಿತ್ರಗಳಿಗೆ ಸುವರ್ಣ ಫಿಲ್ಮ್ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದ ಪುನೀತ್ ರಾಜ್‌ಕುಮಾರ್ ಅಣ್ಣಾಬಾಂಡ್ ಚಿತ್ರಕ್ಕಾಗಿ ಫೇವರಿಟ್ ನಟ ಪ್ರಶಸ್ತಿಯನ್ನು ಪಡೆದಿದ್ದರು. ವಂಶಿ ಹಾಗೂ ರಾಜ್ ದ ಶೋ ಮ್ಯಾನ್ ಚಿತ್ರಗಳ ನಟನೆಗಾಗಿ ಪುನೀತ್ ರಾಜ್‌ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದರು.

More from Filmibeat

English summary
1 National award, 5 SIIMA awards: List of awards won by Dr Puneeth Rajkumar. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X