ಅಣ್ಣಾಬಾಂಡ್ ಯಶಸ್ಸಿಗೆ ಪುನೀತ್ ವಿಶೇಷ ಪೂಜೆ
ಎಷ್ಟೇ ದೊಡ್ಡ ನಟ, ನಿರ್ದೇಶಕ, ಬ್ಯಾನರ್ ಚಿತ್ರವಾದರೂ ಮೊದಲ ದಿನ ಆತಂಕ ತಪ್ಪಿದ್ದಲ್ಲ. ಯಾಕೆಂದರೆ ಚಿತ್ರದ ಸೋಲು ಗೆಲುವು ಅವರ ಕೈಯಲ್ಲಿ ಇರುವುದಿಲ್ಲವಲ್ಲ. ಮೊದಲ ದಿನದ ರೆಸ್ಪಾನ್ಸ್ ಚಿತ್ರದ ಹಣೆಬರಹವನ್ನು ಬಹುತೇಕ ನಿರ್ಧರಿಸಿಬಿಡುತ್ತದೆ. 'ಅಣ್ಣಾಬಾಂಡ್' ಚಿತ್ರಕ್ಕೆ ಮೊದಲ ದಿನವೇ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಆದರೂ ಚಿತ್ರದ ನಾಯಕ ನಟ ಪುನೀತ್ ರಾಜ್ ಕುಮಾರ್ ಅವರಿಗೂ 'ಅಣ್ಣಾಬಾಂಡ್' ಚಿತ್ರದ ಬಗ್ಗೆ ಕೊಂಚ ಆತಂಕ ಇದ್ದಂತಿದೆ. ಕನ್ನಡದಲ್ಲಿ ಬಹುನಿರೀಕ್ಷೆ ಹುಟ್ಟಿಸಿರುವ ಈ ಚಿತ್ರವನ್ನು ಪೂರ್ಣಿಮಾ ಎಂಟರ್‌ಪ್ರೈಸಸ್ ಲಾಂಛನದಲ್ಲಿ ಪಾರ್ವತಮ್ಮ ರಾಜ್ ಕುಮಾರ್ ನಿರ್ಮಿಸಿರುವ ಚಿತ್ರ. ಸಹಜವಾಗಿಯೇ ಚಿತ್ರದ ಬಗ್ಗೆ ನಿರೀಕ್ಷೆಗಳು ಬೆಟ್ಟದಷ್ಟಿವೆ.
ಪುನೀತ್ ಅವರು ಇಂದು ಹಲವಾರು ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಅವುಗಳಲ್ಲಿ ಮುಖ್ಯವಾಗಿ ಬೆಂಗಳೂರು ಮೆಜೆಸ್ಟಿಕ್ ಬಳಿಕ ಅಣ್ಣಮ್ಮ ಹಾಗೂ ಗಣೇಶ ದೇವಸ್ಥಾನಗಳಿಗೆ ಭೇಟಿ ಚಿತ್ರ ಯಶಸ್ವಿಯಾಗಲಿ ಎಂದು ದೇವರಿಗೆ ಮೊರೆಹೋದರು. ಅವರ ಮೇಲೆ ನಗರ ದೇವತೆ ಅಣ್ಣಮ್ಮ ದೇವಿಯ ಕೃಪೆ, ಪ್ರೇಕ್ಷಕರ ಆಶೀರ್ವಾದ ಇದ್ದೇ ಇದೆ. (ಒನ್‌ಇಂಡಿಯಾ ಕನ್ನಡ)


Click it and Unblock the Notifications











