For Quick Alerts
  ALLOW NOTIFICATIONS  
  For Daily Alerts

  ಕಿಚ್ಚ ಸುದೀಪ್ ಕೈಗೆ ಮತ್ತೊಮ್ಮೆ ಪೊಲೀಸ್ ಲಾಠಿ

  By Rajendra
  |

  ಕಿಚ್ಚ ಸುದೀಪ್ ಈ ಹಿಂದೆ 'ವೀರ ಮದಕರಿ' ಚಿತ್ರದಲ್ಲಿ ಲಾಠಿ ಹಿಡಿದು ರಫ್ ಅಂಡ್ ಟಫ್ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದರು. ಈಗ ಮತ್ತೊಮ್ಮೆ ಖಾಕಿ ಖದರ್ ತೋರಿಸಲಿದ್ದಾರೆ. 'ವರದನಾಯಕ' ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಚಿರಂಜೀವಿ ಸರ್ಜಾಗೆ ಅಣ್ಣನಾಗಿ ಕಾಣಿಸಲಿದ್ದಾರೆ.

  ತೆಲುಗಿನ ಯಶಸ್ವಿ ಚಿತ್ರ 'ಲಕ್ಷ್ಯಂ' ರೀಮೇಕ್ 'ವರದನಾಯಕ'. ಲವ್, ಆಕ್ಷನ್ ಪ್ರಧಾನ ಚಿತ್ರವಾದ 'ಲಕ್ಷ್ಯಂ' ಚಿತ್ರದಲ್ಲಿ ಗೋಪಿಚಂದ್, ಜಗಪತಿ ಬಾಬು ಮತ್ತು ಅನುಷ್ಕಾ ಪ್ರಮುಖ ಪಾತ್ರ ಪೋಷಿಸಿದ್ದರು. ಸುದೀಪ್‌ಗೆ ಜೊತೆಯಾಗಲಿದ್ದಾರೆ 'ಸವಾರಿ' ಖ್ಯಾತಿಯ ಕಮಲಿನಿ ಮುಖರ್ಜಿ.

  ಮೂಲ ಚಿತ್ರಕ್ಕಿಂತ ಹೆಚ್ಚಿನ ಸ್ಕ್ರೀನ್ ಸ್ಪೇಸ್ 'ವರದನಾಯಕ' ಚಿತ್ರದಲ್ಲಿ ಸುದೀಪ್‌ಗೆ ನೀಡಲಾಗುತ್ತಿದೆ. ಚಿರಂಜೀವಿ ಸರ್ಜಾಗೆ ನಿಕಿಶಾ ಪಟೇಶ್ ಜೋಡಿಯಾಗಲಿದ್ದಾರೆ. ಶಂಕರೇಗೌಡ ನಿರ್ದೆಶಿಸುತ್ತಿರುವ ಈ ಚಿತ್ರಕ್ಕೆ ಅಯ್ಯಪ್ಪ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕಿದೆ. ಈಗಾಗಲೆ ಚಿತ್ರೀಕರಣ ಭರದಿಂದ ಸಾಗುತ್ತಿದೆ. (ಏಜೆನ್ಸೀಸ್)

  English summary
  Kannada actor Sudeep again plays the role of a Police officier in his upcoming movie Varadhanayaka. Earlier he played strict police officer role in Veeramadakari. Varadhanayaka is an action/love story and is a remake of the Telugu hit movie Lakshyam.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X