twitter
    For Quick Alerts
    ALLOW NOTIFICATIONS  
    For Daily Alerts

    'ಕೆಜಿಎಫ್' ಬಂದು ಹೋದ 1 ವರ್ಷದಲ್ಲಿ ಇಂಡಸ್ಟ್ರಿಯಲ್ಲಾದ 5 ಬಹುಮುಖ್ಯ ಬದಲಾವಣೆ

    |

    Recommended Video

    ಕೆಜಿಎಫ್ ಚಿತ್ರದಿಂದ ದಾಖಲೆಗಳನ್ನು ಬರೆಯುತ್ತಿದೆ ಸ್ಯಾಂಡಲ್ ವುಡ್ | KGF | YASH | PRASHANTH NEEL

    ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಬಿಡುಗಡೆಯಾಗಿ ಒಂದು ವರ್ಷ ಕಳೆದಿದೆ. ವಿಶ್ವಮಟ್ಟದಲ್ಲಿ ಕನ್ನಡ ಚಿತ್ರರಂಗದ ತಾಕತ್ ಪ್ರದರ್ಶಿಸಿದ್ದ ಕೆಜಿಎಫ್, ಸ್ಯಾಂಡಲ್ವುಡ್ ನಲ್ಲಿ ಹಲವು ಬದಲಾವಣೆಗೆ ನಾಂದಿಯಾಗಿದೆ.

    ಕೆಜಿಎಫ್ ಬರುವುದಕ್ಕೆ ಮುಂಚೆ ಒಂದು ರೀತಿ ಇದ್ದ ಸ್ಯಾಂಡಲ್ವುಡ್, ಕೆಜಿಎಫ್ ಬಂದ್ಮೇಲೆ ಮತ್ತೊಂದು ಹಂತಕ್ಕೆ ಹೋಯ್ತು ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಬಾಕ್ಸ್ ಆಫೀಸ್, ಮಾರುಕಟ್ಟೆ, ಸ್ಟಾರ್ ಫೇಮು ಹೀಗೆ ಈ ಸಿನಿಮಾ ಬಂದ್ಮೇಲೆ ಕನ್ನಡ ಚಿತ್ರರಂಗದಲ್ಲಿ ಅನೇಕ ದಾಖಲೆಗಳನ್ನು ಕಂಡಿದ್ದೇವೆ.

    KGF Collection: 200 ಕೋಟಿ ಕ್ಲಬ್ ಸೇರಿದ ಪ್ರಪ್ರಥಮ ಕನ್ನಡ ಚಿತ್ರ.!KGF Collection: 200 ಕೋಟಿ ಕ್ಲಬ್ ಸೇರಿದ ಪ್ರಪ್ರಥಮ ಕನ್ನಡ ಚಿತ್ರ.!

    ಕೆಜಿಎಫ್ ಚಾಪ್ಟರ್ 1 ಬರುವವರೆಗೂ ಬೇರೆ ಯಾವ ಚಿತ್ರಗಳು ಇಂತಹ ಧೈರ್ಯ ಮಾಡಿರಲಿಲ್ಲ. ಮಾಡಿದ್ದರೂ ಅದಕ್ಕೆ ನಿರೀಕ್ಷೆಯ ಯಶಸ್ಸು ಸಿಕ್ಕಿರಲಿಲ್ಲ. ಹಾಗಾಗಿ ಈ ಶ್ರೇಯಸ್ಸು ಈ ಚಿತ್ರಕ್ಕೆ ಸಲ್ಲುತ್ತೆ. ಹಾಗಿದ್ರೆ, ಕೆಜಿಎಫ್ ಬಂದ್ಮೇಲೆ ಕನ್ನಡ ಇಂಡಸ್ಟ್ರಿಯಲ್ಲಾದ ಬಹುಮುಖ್ಯ 5 ಬದಲಾವಣೆಗಳು ಯಾವುದು? ಮುಂದೆ ಓದಿ...

    ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಹೆಚ್ಚಾಯ್ತು

    ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಹೆಚ್ಚಾಯ್ತು

    ಕನ್ನಡ ಸಿನಿಮಾಗಳು ಸಾಮಾನ್ಯವಾಗಿ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗುತ್ತಿತ್ತು. ಒಂದು ವೇಳೆ ಸಿನಿಮಾ ಹಿಟ್ ಆದರೂ, ರೀಮೇಕ್ ಹಕ್ಕು ಸೇಲ್ ಆಗುತ್ತಿತ್ತು ಹೊರತು, ಇದೇ ಚಿತ್ರ ಬೇರೆ ಭಾಷೆಯಲ್ಲಿ ಡಬ್ಬಿಂಗ್ ಆಗುತ್ತಿರಲಿಲ್ಲ. ಕೆಲವು ಚಿತ್ರಗಳು ಮಾತ್ರ ಹಿಂದಿಯಲ್ಲಿ ಲೇಟ್ ಆಗಿ ಡಬ್ ಆಗ್ತಿತ್ತು. ಆದರೆ, ಕೆಜಿಎಫ್ ಬಂದ್ಮೇಲೆ ಹಲವು ಕನ್ನಡ ಸಿನಿಮಾಗಳು ಪರಭಾಷೆಯಲ್ಲಿ ಏಕಕಾಲದಲ್ಲಿ ತೆರೆಕಂಡಿದೆ. ಕುರುಕ್ಷೇತ್ರ, ಪೈಲ್ವಾನ್, ಈಗ ಅವನೇ ಶ್ರೀಮನ್ನಾರಾಯಣ ನಾಲ್ಕೈದು ಭಾಷೆಯಲ್ಲಿ ಬಂದಿದೆ. ಗಾಳಿಪಟ 2, ಕಬ್ಜ, ಕೆಜಿಎಫ್ ಚಾಪ್ಟರ್ 2 ಸೇರಿದಂತೆ ಹೊಸಬರ ಸಿನಿಮಾಗಳು ಪ್ಯಾನ್ ಇಂಡಿಯಾ ಹೋಗಲು ನಿರ್ಧರಿಸಿದ್ದಾರೆ. ಕನ್ನಡ ಚಿತ್ರಕ್ಕೆ ಇಂತಹ ಧೈರ್ಯ ತುಂಬಿದ್ದು ಕೆಜಿಎಫ್ ಎನ್ನುವುದನ್ನು ಸ್ವತಃ ಇಂಡಸ್ಟ್ರಿಯವರೇ ಒಪ್ಪಿಕೊಂಡಿದ್ದಾರೆ.

    ಓದುಗರ ವಿಮರ್ಶೆ: ಕೆಜಿಎಫ್ ಅಷ್ಟು ಇಷ್ಟವಾಗದಿರುವುದಕ್ಕೆ ಕಾರಣ ಇಲ್ಲಿದೆಓದುಗರ ವಿಮರ್ಶೆ: ಕೆಜಿಎಫ್ ಅಷ್ಟು ಇಷ್ಟವಾಗದಿರುವುದಕ್ಕೆ ಕಾರಣ ಇಲ್ಲಿದೆ

    ಸ್ಯಾಂಡಲ್ ವುಡ್ ಮಾರುಕಟ್ಟೆ ವಿಸ್ತರಣೆ

    ಸ್ಯಾಂಡಲ್ ವುಡ್ ಮಾರುಕಟ್ಟೆ ವಿಸ್ತರಣೆ

    ಕನ್ನಡ ಚಿತ್ರಗಳಿಗೆ ಹೊರಗಡೆ ಮಾರುಕಟ್ಟೆ ಇಲ್ಲ. ಹೊರರಾಜ್ಯ ಹಾಗೂ ವಿದೇಶಗಳಲ್ಲೂ ಬೇಡಿಕೆ ಕಮ್ಮಿ ಎಂಬ ಮಾತಿತ್ತು. ಆದರೆ, ಕೆಜಿಎಫ್ ಬಂದ್ಮೇಲೆ ಈ ಮಾತು ಸುಳ್ಳಾಯಿತು. ಸ್ಯಾಂಡಲ್ವುಡ್ ಮಾರುಕಟ್ಟೆ ಓಪನ್ ಆಯ್ತು. ಕನ್ನಡ ಚಿತ್ರಗಳಿಗೆ ಬೇಡಿಕೆ ಹೆಚ್ಚಾಯ್ತು. ಆಡಿಯೋ, ಡಬ್ಬಿಂಗ್, ರೀಮೇಕ್, ವಿತರಣೆ ಹಕ್ಕು, ಡಿಜಿಟಲ್ ಹಕ್ಕುಗಳಿಗೆ ಬೇಡಿಕೆ ಹೆಚ್ಚಾಯ್ತು. ಇಂತಹ ಬೆಳವಣಿಗೆಗೂ ಕೆಜಿಎಫ್ ಒಂದು ಕಾರಣ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ.

    <br />ಡಿಜಿಟಲ್ ಮತ್ತು ಸ್ಯಾಟೆಲೈಟ್ ಹಕ್ಕು ಮಾರಾಟದಲ್ಲಿ 'ಕೆ.ಜಿ.ಎಫ್' ಹೊಸ ಮೈಲಿಗಲ್ಲು.!
    ಡಿಜಿಟಲ್ ಮತ್ತು ಸ್ಯಾಟೆಲೈಟ್ ಹಕ್ಕು ಮಾರಾಟದಲ್ಲಿ 'ಕೆ.ಜಿ.ಎಫ್' ಹೊಸ ಮೈಲಿಗಲ್ಲು.!

    100 ಕೋಟಿ ಕ್ಲಬ್ ಮೇಲೆ ಕಣ್ಣು

    100 ಕೋಟಿ ಕ್ಲಬ್ ಮೇಲೆ ಕಣ್ಣು

    ಕನ್ನಡ ಸಿನಿಮಾಗಳು ನೂರು ಕೋಟಿ ಕ್ಲಬ್ ಸೇರುವುದು ಬರಿ ಕನಸಾಗಿತ್ತು. ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರಗಳು ನೂರು ಕೋಟಿ ಗಳಿಕೆ ಕಂಡಿದ್ದವು. ಕೆಜಿಎಫ್ ಸಿನಿಮಾ ಪ್ರಪ್ರಥಮ ಬಾರಿಗೆ ನೂರು ಕೋಟಿ ಬಾಗಿಲು ತಟ್ಟಿ ಒಳಗೆ ಪ್ರವೇಶಿಸಿತ್ತು. ಅದಾದ ಬಳಿಕ ಮತ್ತಷ್ಟು ಕನ್ನಡ ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿದೆ. ಕುರುಕ್ಷೇತ್ರ, ಪೈಲ್ವಾನ್, ಯಜಮಾನ ಅಂತಹ ಸಿನಿಮಾಗಳು ದೊಡ್ಡ ಮೊತ್ತ ಗಳಿಕೆ ಕಾಣುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದಿದೆ.

    ಕಲೆಕ್ಷನ್ ನಲ್ಲಿ ಇತಿಹಾಸ ನಿರ್ಮಿಸಿದ ಕೆಜಿಎಫ್: ಮೊದಲ ದಿನ 24 ಕೋಟಿ.!ಕಲೆಕ್ಷನ್ ನಲ್ಲಿ ಇತಿಹಾಸ ನಿರ್ಮಿಸಿದ ಕೆಜಿಎಫ್: ಮೊದಲ ದಿನ 24 ಕೋಟಿ.!

    ಕನ್ನಡದ ಕಡೆ ಮುಖ ಮಾಡಿದ ಪರಭಾಷಿಗರು

    ಕನ್ನಡದ ಕಡೆ ಮುಖ ಮಾಡಿದ ಪರಭಾಷಿಗರು

    ಕನ್ನಡ ಸಿನಿಮಾಗಳು ಅಂದ್ರೆ ಅಷ್ಟಾಗಿ ತಲೆಕೆಡಿಸಿಕೊಳ್ಳದೆ ಇದ್ದ ಪರಭಾಷಿಗರು ಕನ್ನಡ ಚಿತ್ರಗಳ ಕಡೆ ಆಸಕ್ತಿ ತೋರಲು ಹೆಚ್ಚಿಸಿದರು. ಕನ್ನಡ ಚಿತ್ರಗಳನ್ನು ಪ್ರಚಾರ ಮಾಡಲು ಆರಂಭಿಸಿದರು. ಕನ್ನಡ ಸಿನಿಮಾಗಳನ್ನು ನೋಡಲು ಹೆಚ್ಚು ಮಾಡಿದರು. ಈ ಹಿಂದೆ ಸ್ಯಾಂಡಲ್ವುಡ್ ಬಗ್ಗೆ ಇದ್ದ ಕುತೂಹಲಕ್ಕಿಂತ ಹೆಚ್ಚು ಆಸಕ್ತಿ ಹೊಂದಿದ್ದರು. ಕನ್ನಡ ಸಿನಿಮಾಗಳಲ್ಲಿ ನಟಿಸಲು ಮುಂದಾದರು.

    ಡಬ್ಬಿಂಗ್ ಚಿತ್ರಗಳ ಟ್ರೆಂಡ್ ಆರಂಭ

    ಡಬ್ಬಿಂಗ್ ಚಿತ್ರಗಳ ಟ್ರೆಂಡ್ ಆರಂಭ

    ಕರ್ನಾಟಕದಲ್ಲಿ ಡಬ್ಬಿಂಗ್ ಚಿತ್ರಗಳಿಗೆ ಅವಕಾಶ ಇರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಡಬ್ಬಿಂಗ್ ಸಿನಿಮಾಗಳು ಹೆಚ್ಚು ಹೆಚ್ಚು ಬಿಡುಗಡೆಯಾಗುತ್ತಿದೆ. ಯಾಕಂದ್ರೆ, ಕನ್ನಡ ಸಿನಿಮಾಗಳು ಹೊರರಾಜ್ಯಗಳಲ್ಲಿ ಬಿಡುಗಡೆಯಾಗುತ್ತಿದೆ. ಹಾಗಾಗಿ, ಕರ್ನಾಟಕದಲ್ಲಿ ಬೇರೆ ಭಾಷೆಯ ಸಿನಿಮಾಗಳು ಡಬ್ ಆಗಿ ತೆರೆಕಾಣುತ್ತಿದೆ. ಈಗಷ್ಟೇ ದಬಾಂಗ್ 3 ಸಿನಿಮಾ ಕನ್ನಡದಲ್ಲಿ ರಿಲೀಸ್ ಆಗಿದೆ.

    English summary
    1 Year Celebration For KGF movie. The pride of Kannada cinema KGF, a film which has Took Kannada Film Industry To Another Level.
    Saturday, December 21, 2019, 11:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X