ತರುಣ್ ಸುಧೀರ್ ಗೆ 'ಮೇ 18' ಅಪರೂಪದ ಖುಷಿ ತಂದ ದಿನ
ಚೌಕ ಅಂತಹ ಸೂಪರ್ ಹಿಟ್ ಸಿನಿಮಾ ನೀಡಿದ್ದ ತರುಣ್ ಸುಧೀರ್ ಗೆ ಮೇ 18 ವಿಶೇಷ ದಿನ. ಯಾಕಂದ್ರೆ ಆ ದಿನ ಶರಣ್ ಅಭಿನಯದ 'Rambo-2' ಸಿನಿಮಾ ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ ತಾಂತ್ರಿಕ ನಿರ್ಮಾಪಕರಾಗಿದ್ದ ತರುಣ್ ಸುಧೀರ್ ಇದು ಖುಷಿ ಕೊಟ್ಟ ಚಿತ್ರವಾದ್ದರಿಂದ ಈ ಸಂತಸವನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಅನಿಲ್ ಕುಮಾರ್ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಶರಣ್ ನಾಯಕನಾಗಿ ನಟಿಸಿದ್ದರು. ಆಶಿಕಾ ರಂಗನಾಥ್ ಹೀರೋಯಿನ್ ಆಗಿದ್ದರು. ಪ್ರಮುಖ ಪಾತ್ರದಲ್ಲಿ ಚಿಕ್ಕಣ್ಣ, ಕುರಿ ಪ್ರತಾಪ್, ತಬಲಾ ನಾಣಿ ಕಾಣಿಸಿಕೊಂಡಿದ್ದರು. ಈ ಎಲ್ಲರ ಕಾಂಬಿನೇಷನ್ ನಿಂದ ಒಳ್ಳೆಯ ಮನರಂಜನೆ ಸಿನಿಮಾ ಇದಾಗಿತ್ತು.
ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದರು. ವಿಶೇಷ ಅಂದ್ರೆ ಈ ಚಿತ್ರದಲ್ಲಿದ್ದ ಚುಟು ಚುಟು ಹಾಡು ಯೂಟ್ಯೂಬ್ ನಲ್ಲಿ ಹೊಸ ದಾಖಲೆ ಮಾಡಿದೆ. ಇದುವರೆಗೂ ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡಿದ್ದ ಹಾಡುಗಳನ್ನ ಹಿಂದಿಕ್ಕಿ ಮೊದಲ ಸ್ಥಾನ ಅಲಂಕರಿಸಿದೆ.

81 ಮಿಲಿಯನ್ ವೀಕ್ಷಣೆ ಕಂಡಿರುವ ಚುಟು ಚುಟು ಈಗ ಕನ್ನಡದಲ್ಲಿ ಅತಿ ಹೆಚ್ಚು ವೀಕ್ಷಣೆ ಆಗಿರುವ ಹಾಡು. ಅಂದ್ಹಾಗೆ, ಬಾಕ್ಸ್ ಆಫೀಸ್ ನಲ್ಲು ಭರ್ಜರಿ ಬಿಸಿನೆಸ್ ಮಾಡಿದ್ದ Rambo ನೂರು ದಿನ ಪೂರೈಸಿತ್ತು.


Click it and Unblock the Notifications