'ಬಸಣ್ಣಿ' ತಾನ್ಯ ಹೋಪ್ ಗೆ ಇಂದು ಮರೆಯಲಾಗದ ದಿನ

''ಬಸಣ್ಣಿ ಬಾ.. ಬಸಣ್ಣಿ ಬಾ.. ಬಜಾರು ನಮ್ದೆ ಇವತ್ತು ಬಸಣ್ಣಿ ಬಾ..'' ಈ ಹಾಡು ಬಂದ್ರೆ ಸಾಕು ಎಷ್ಟೋ ಜನರ ಕೈ ಕಾಲು ಅವರ ಮಾತೇ ಕೇಳುವುದಿಲ್ಲ. ಎಲ್ಲರನ್ನು ಸಿಕ್ಕಾಪಟ್ಟೆ ಕುಣಿಯುವಂತೆ ಮಾಡಿದ್ದ ಈ ಹಾಡು ಬಿಡುಗಡೆಯಾಗಿ ಒಂದು ವರ್ಷ ಕಳೆದಿದೆ.

ಕಳೆದ ವರ್ಷ ಜನವರಿ 26 ರಂದು 'ಬಸಣ್ಣಿ ಬಾ..' ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿತ್ತು. 'ಯಜಮಾನ' ಸಿನಿಮಾದ ಈ ಹಾಡು ಸಿಕ್ಕಾಪಟ್ಟೆ ಫೇಮಸ್ ಆಯ್ತು. ಕಳೆದ ವರ್ಷ ಬಂದ ಸೂಪರ್ ಹಿಟ್ ಹಾಡುಗಳ ಪೈಕಿ ಈ ಹಾಡು ಪ್ರಮುಖವಾಗಿದೆ.

ಒಂದು ವರ್ಷದ ಸಂಭ್ರಮವನ್ನು ಡಿ ಬೀಟ್ಸ್ ಆಡಿಯೋ ಕಂಪನಿ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ. ಅಂದಹಾಗೆ, ಸದ್ಯ ಈ ಹಾಡು ಯೂ ಟ್ಯೂಬ್ ನಲ್ಲಿ 74 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ. ಲಿರಿಕಲ್ ವಿಡಿಯೋ 32 ಮಿಲಿಯನ್ ಹಾಗೂ ವಿಡಿಯೋ ಹಾಡು 41 ಮಿಲಿಯನ್ ಹಿಟ್ಸ್ ಸಿಕ್ಕಿದೆ.

1 Year For Basanni Baa Kannada Song

ಹಾಡಿನ ಈ ಮಟ್ಟಿಗಿನ ಜನಪ್ರಿಯತೆಗೆ ಮೊದಲ ಕಾರಣ ಯೋಗರಾಜ್ ಭಟ್ ಸಾಹಿತ್ಯ. ಭಟ್ಟರ ಪದಗಳು ಸಿಕ್ಕಾಪಟ್ಟೆ ಮಜಾ ನೀಡಿತ್ತು. ಅಷ್ಟೇ ಒಳ್ಳೆಯ ಸಂಗೀತವನ್ನು ಹರಿಕೃಷ್ಣ ನೀಡಿದ್ದರು. ವರ್ಷ ಸುರೇಶ್ ಧ್ವನಿ ತುಂಬ ಚೆನ್ನಾಗಿತ್ತು.

ಹಾಡಿನಲ್ಲಿ ಬಸಣ್ಣಿಯಾಗಿ ತಾನ್ಯ ಹೋಪ್ ಕಾಣಿಸಿಕೊಂಡಿದ್ದರು. ಹಾಡಿನ ಪ್ರಭಾವದಿಂದ ಅವರು ಬಸಣ್ಣಿ ಎಂದೇ ಫೇಮಸ್ ಆದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೂಪರ್ ಸ್ಟೆಪ್ ಹಾಕಿದ್ದರು.

More from Filmibeat

English summary
1 Year for Basanni baa kannada song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X