»   » ಮಾರ್ಚ್ 5, ದರ್ಶನ್ ಮತ್ತು ಸುದೀಪ್ ಪಾಲಿಗೆ ಕರಾಳ ದಿನ

ಮಾರ್ಚ್ 5, ದರ್ಶನ್ ಮತ್ತು ಸುದೀಪ್ ಪಾಲಿಗೆ ಕರಾಳ ದಿನ

Posted By:
Subscribe to Filmibeat Kannada

ಮಾರ್ಚ್ 5....ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಪಾಲಿಗೆ ಇದು ಕರಾಳ ದಿನ. ಈ ದಿನವನ್ನ ಈ ಇಬ್ಬರ ನಟರ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ಯಾಕಂದ್ರೆ, ಈ ದಿನದಿಂದಲೇ ಸ್ಯಾಂಡಲ್ ವುಡ್ ಯುವ ದಿಗ್ಗಜರ ಸ್ನೇಹ ಮುರಿದುಬಿದ್ದಿತ್ತು.

ಮಾರ್ಚ್ 5 ರಂದು ದರ್ಶನ್ ಮಾಡಿದ ಒಂದೇ ಒಂದು ಟ್ವೀಟ್ ಇಡೀ ಕನ್ನಡ ಚಿತ್ರರಂಗವನ್ನೇ ಒಂದು ಕ್ಷಣ ದಿಗ್ಬ್ರಮೆಗೊಳಿಸಿತ್ತು. ಅಲ್ಲಿಯವರೆಗೂ ಎಲ್ಲವೂ ಚೆನ್ನಾಗಿತ್ತು. ಈ ಟ್ವೀಟ್ ಬಳಿಕ ಎಲ್ಲವೂ ಬದಲಾಯಿತು.

ಅಷ್ಟಕ್ಕೂ, ದಾಸ ದರ್ಶನ್ ಮಾಡಿದ್ದ ಟ್ವೀಟ್ ಏನು? ಈ ಟ್ವೀಟ್ ನಿಂದ ಏನೆಲ್ಲಾ ಬೆಳವಣಿಗೆ ಆಯ್ತು.? ಆ ಟ್ವೀಟ್ ನಲ್ಲಿ ಏನಿತ್ತು.? ಏನಿದು ಮಾರ್ಚ್ 5 ರ ಕರಾಳ ದಿನ ಎಂಬುದನ್ನ ತಿಳಿಯಲು ಮುಂದೆ ಓದಿ....

ದರ್ಶನ್-ಸುದೀಪ್ ಸ್ನೇಹ ಮುರಿದು ಬಿದ್ದ ದಿನ

ಕನ್ನಡ ಚಿತ್ರರಂಗದ ಕುಚಿಕೂ ಗೆಳಯರಂತಿದ್ದ ದರ್ಶನ್ ಮತ್ತು ಸುದೀಪ್ ಸ್ನೇಹ ಮಾರ್ಚ್ 5, 2017 ರಂದು ರಾತ್ರಿ ಅಂತ್ಯವಾಗಿತ್ತು. ಸ್ವತಃ ದರ್ಶನ್ ಅವರೇ ಟ್ವೀಟ್ ಮೂಲಕ ಸ್ನೇಹಕ್ಕೆ ಕೊನೆಯಾಡಿದ್ದರು.

ಸುದೀಪ್ ಮತ್ತು ನಾನು ಸ್ನೇಹಿತರಲ್ಲ

''ಇನ್ಮುಂದೆ ನಾನು ಮತ್ತು ಸುದೀಪ್ ಸ್ನೇಹಿತರಲ್ಲ. ನಾವಿಬ್ಬರೂ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಕಲಾವಿದರಷ್ಟೇ. ಇದು ಮುಗಿದು ಹೋದ ಕಥೆ'' ಎಂದು ರಾತ್ರಿ 8.15 ಕ್ಕೆ ದರ್ಶನ್ ಟ್ವೀಟ್ ಮಾಡಿದ್ದರು.

ನಾನು ಸುದೀಪ್ ಇನ್ಮುಂದೆ ಗೆಳೆಯರಲ್ಲ : ದರ್ಶನ್ ತೂಗುದೀಪ

ವಿವಾದಕ್ಕೆ ಕಾರಣವಾಗಿತ್ತು ದರ್ಶನ್ ಟ್ವೀಟ್

ನಂತರ ಸರಣಿ ಟ್ವೀಟ್ ಮಾಡಿದ್ದ ದರ್ಶನ್, ತಮ್ಮ ಚೊಚ್ಚಲ ಸಿನಿಮಾ 'ಮೆಜೆಸ್ಟಿಕ್' ಕುರಿತು ಸುದೀಪ್ ತಪ್ಪು ಹೇಳಿಕೆ ಕೊಟ್ಟಿದ್ದಾರೆ ಎಂದು ದರ್ಶನ್ ಬೇಸರ ಮಾಡಿಕೊಂಡಿದ್ದರು. ''ಮೆಜೆಸ್ಟಿಕ್ ಚಿತ್ರಕ್ಕೆ ದರ್ಶನ್ ಅವರನ್ನ ನಾನೇ ಸೂಚಿಸಿದ್ದು'' ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಅದನ್ನ ಖಂಡಿಸಿದ್ದ ದರ್ಶನ್ ಈ ಟ್ವೀಟ್ ಮಾಡಿ ಸುದ್ದಿಯಾಗಿದ್ದರು.

'ದರ್ಶನ್-ಸುದೀಪ್' ಸ್ನೇಹದ ಬಿರುಕಿಗೆ ಕಾರಣವಾಗಿದ್ದು 'ಸುದೀಪ್ ಕೊಟ್ಟ ಆ ಹೇಳಿಕೆ'!

'ಮೆಜೆಸ್ಟಿಕ್' ವಿವಾದ

ದರ್ಶನ್ ಮತ್ತು ಸುದೀಪ್ ಅವರ ನಡುವಿನ ಸ್ನೇಹ ಸಮರ ಕೊನೆಗೆ 'ಮೆಜೆಸ್ಟಿಕ್' ಚಿತ್ರದ ಸುತ್ತ ಅಂಟಿಕೊಂಡಿತ್ತು. ಆ ಚಿತ್ರದ ನಿರ್ದೇಶಕ ಎಂ.ಜಿ ರಾಮಮೂರ್ತಿ, ನಿರ್ದೇಶಕ ಪಿ.ಎನ್ ಸತ್ಯ, ಭಾಮಾ ಹರೀಶ್ ಎಲ್ಲರೂ ವಾದ-ವಾಗ್ವಾದ ನಡೆಸಿದ್ದರು.

ಬಿಗ್ ಬ್ರೇಕಿಂಗ್: 'ಮೆಜೆಸ್ಟಿಕ್'ಗೂ ಸುದೀಪ್ ಗೂ ಸಂಬಂಧವೇ ಇಲ್ಲ!

ಇಲ್ಲಿಯವರೆಗೂ ದಚ್ಚು-ಕಿಚ್ಚ ಒಟ್ಟಿಗೆ ಕಾಣಿಸಿಕೊಂಡಿಲ್ಲ

ಈ ಬೆಳವಣಿಗೆಗಳು ನಡೆದ ಬಳಿಕ ದರ್ಶನ್ ಮತ್ತು ಸುದೀಪ್ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಒಂದು ಮೂಲದ ಪ್ರಕಾರ, ಇಬ್ಬರ ಮುನಿಸು ಒಂದು ಹಂತಕ್ಕೆ ಬಗೆಹರಿದಿದೆ ಎನ್ನಲಾಗಿದೆ. ಆದ್ರೆ, ಮೊದಲಿನಂತೆ ಇಬ್ಬರ ಸ್ನೇಹ ಇಲ್ಲದಂತಾಗಿದೆ ಎಂಬುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಇಬ್ಬರು ಒಂದಾಗಬೇಕು ಎಂಬ ಒತ್ತಾಯ

ಸ್ಟಾರ್ ನಟರು ದೂರವಾಗಿದ್ದರೂ ಅವರ ಅಭಿಮಾನಿಗಳು ಮಾತ್ರ ಒಟ್ಟಾಗಿದ್ದಾರೆ. ದರ್ಶನ್ ಬರ್ತಡೇಗೆ ಸುದೀಪ್ ಅಭಿಮಾನಿಗಳು ಶುಭಕೋರಿ, ಇಬ್ಬರು ಒಂದಾಗಿ, ಒಟ್ಟಿಗೆ ಸಿನಿಮಾ ಮಾಡಿ ಎಂಬ ಆಸೆಯನ್ನ ವ್ಯಕ್ತಪಡಿಸಿದ್ದರು. ಇನ್ನು ದರ್ಶನ್ ಅಭಿಮಾನಿಗಳು ಕೂಡ ಅದೇ ಆಸೆಯನ್ನ ಹೊರಹಾಕಿರುವ ಉದಾಹರಣೆಗಳಿವೆ.

ಸುದೀಪ್-ದರ್ಶನ್ ಮಧ್ಯೆ ಮಾತ್ರ ಅಲ್ಲ, 'ಮೆಜೆಸ್ಟಿಕ್' ನಿರ್ಮಾಪಕರ ನಡುವೆಯೂ ಕಿತ್ತಾಟ.!

English summary
March 5, 2017 Challenging Star Darshan Thoogudeepa was tweeted that he and Sudeep are not friends anymore. so, officially 1 Year for Darshan and Sudeep friendship breakup.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada