ಇಂದು 'ಕೆಜಿಎಫ್' ತಂಡದ ಅದೃಷ್ಟ ಬದಲಿಸಿದ ದಿನ

ನವೆಂಬರ್ 9, 2018 'ಕೆಜಿಎಫ್' ಚಿತ್ರತಂಡ ಈ ದಿನವನ್ನು ಎಂದಿಗೂ ಮರೆಯುವುದಿಲ್ಲ. ಕಾರಣ ಇದೇ ದಿನ ಆ ತಂಡದ ಅದೃಷ್ಟ ಬದಲಾಗಿದ್ದು, ಅವರ ಶ್ರಮಕ್ಕೆ ಮೊದಲ ಚಪ್ಪಾಳೆ, ಪ್ರಶಂಸೆ ಸಿಕ್ಕಿದು.

ಒಂದು ಸಿನಿಮಾ ಟ್ರೇಲರ್ ಬರುವುದೆ ಸಿನಿಮಾದ ವಿಷಯವನ್ನು, ತಮ್ಮ ಕೆಲಸವನ್ನು ಪ್ರೇಕ್ಷಕರಿಗೆ ತೋರಸಲು. ಆ ರೀತಿ ಬಂದ 'ಕೆಜಿಎಫ್' ಟ್ರೇಲರ್ ಬಹು ದೊಡ್ಡ ಹಿಟ್ ಆಯ್ತು. ಈ ಟ್ರೇಲರ್ ಮೂಲಕ 'ಕೆಜಿಎಫ್' ಸಿನಿಮಾದ ಮೇಲೆ ಇದ್ದ ಕ್ರೇಜ್ ಮತ್ತೊಂದು ಹಂತಕ್ಕೆ ಹೋಯ್ತು.

'ಕೆಜಿಎಫ್' ಟ್ರೇಲರ್ ಬಿಡುಗಡೆ ಆಗಿದ್ದು, ಇದೇ ದಿನ. ಈ ದಿನವನ್ನು ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನೆನೆದಿದ್ದಾರೆ. ''ಇಂದು ವೃತ್ತಿ ಜೀವನದಲ್ಲಿ ನಮ್ಮನ್ನು ಬದಲಿಸಿದ ದಿನ. ಒಂದು ಅದ್ಭುತ ಯಶಸ್ವಿ ಕಾರ್ಯಕ್ರಮದ ಮಾಡಿದ್ದ ದಿನ. ಹೊಸ ಸಾಹಸ ಶುರು ಆದ ದಿನ'' ಎಂದು ಬರೆದುಕೊಂಡು ಟ್ರೇಲರ್ ಅನ್ನು ಹಂಚಿಕೊಂಡಿದ್ದಾರೆ.

1 year for KGF kannada movie trailer.

ಐದು ಭಾಷೆಗಳಲ್ಲಿ 'ಕೆಜಿಎಫ್' ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಗಿತ್ತು. ಎಲ್ಲ ಭಾಷೆಯ ಟ್ರೇಲರ್ ಗೆ ದೊಡ್ಡ ಬೆಂಬಲ ಸಿಕ್ಕಿತ್ತು. ಕನ್ನಡದ ಟ್ರೇಲರ್ ಸದ್ಯ ಯೂ ಟ್ಯೂಬ್ ನಲ್ಲಿ 20 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ.

ಟ್ರೇಲರ್ ಗೆ ಸಿಕ್ಕ ರೆಸ್ಪಾನ್ಸ್ ಚಿತ್ರತಂಡಕ್ಕೆ ಧೈರ್ಯ ನೀಡಿತ್ತು. ದೊಡ್ಡ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಮಾಡಿದರು. ಅದೇ ರೀತಿ ಜನರು ಸಿನಿಮಾವನ್ನು ಸ್ವೀಕರಿಸಿದರು. ನಂತರ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಇತಿಹಾಸ ಬರೆಯಿತು.

More from Filmibeat

English summary
1 year for 'KGF' kannada movie trailer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X