»   » ಲೂಸ್ ಮಾದ ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ಜಸ್ಟ್‌ಮಿಸ್

ಲೂಸ್ ಮಾದ ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ಜಸ್ಟ್‌ಮಿಸ್

Posted By:
Subscribe to Filmibeat Kannada

'ಸಿದ್ಲಿಂಗು' ಚಿತ್ರದಲ್ಲಿ ಪೊಲಿ ಡೈಲಾಗ್ಸ್ ಹಾಗೂ ಬಾತ್‌ರೂಂ ಸನ್ನಿವೇಶಗಳು ಅತಿಯಾದವು ಎಂಬ ಕಾರಣಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿತ್ತು. ಆಗಲೂ ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ಜಸ್ಟ್ ಮಿಸ್ ಆಗಿತ್ತು. ಈಗ 'ಅಲೆಮಾರಿ' ಚಿತ್ರಕ್ಕೂ 'ಎ' ಸರ್ಟಿಫಿಕೇಟ್ ಜಸ್ಟ್ ಮಿಸ್ ಆಗಿದೆ.

'ಅಲೆಮಾರಿ' ಚಿತ್ರವನ್ನು ವೀಕ್ಷಿಸಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯಾವುದೇ ಸಿಂಗಲ್ ಕಟಿಂಗ್ ಇಲ್ಲದೆ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದೆ. ಮಾರ್ಚ್ 9ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ. ಸಂತೋಷ್ ಕುಮಾರ್ ನಿರ್ದೆಶಿಸುತ್ತಿರುವ ಚೊಚ್ಚಲ ಚಿತ್ರವಿದು. ಈ ಚಿತ್ರಕ್ಕೆ ಕ್ಯಾಮೆರಾ ಹಿಡಿದಿರುವ ಮಂಜುನಾಥ್ ನಾಯಕ್ ಅವರದು ಮೊದಲ ಅನುಭವ.

ರಾಧಿಕಾ ಪಂಡಿತ್, ಯೋಗೇಶ್ ಮತ್ತು ಉಮಾಶ್ರೀ ಚಿತ್ರದ ಪ್ರಮುಖ ಪಾತ್ರಧಾರಿಗಳು. ಚಿತ್ರದಲ್ಲಿ ರಾಧಿಕಾ ಪಂಡಿತ್ ಬ್ರಾಹ್ಮಣರ ಹುಡುಗಿಯಾಗಿ, ಸಂಗೀತ ಶಿಕ್ಷಕರ ಮಗಳಾಗಿ ಕಾಣಿಸಲಿದ್ದಾರೆ. ಚಿತ್ರದ ಉಳಿದ ಪಾತ್ರವರ್ಗದಲ್ಲಿ ರಂಗಾಯಣ ರಘು, ಆದಿ ಲೋಕೇಶ್, ರಾಕೇಶ್, ರಮೇಶ್ ಭಟ್, ರಘುರಾಂ, ಮೈಕೋ ನಾಗರಾಜ್, ರಮೇಶ್ ಪಂಡಿತ್ ಮುಂತಾದವರಿದ್ದಾರೆ. (ಏಜೆನ್ಸೀಸ್)

English summary
Loose Mada Yogish and Radhika Pandit lead Kannada movie Alemari gets U/A certificate from regional censor board. The movie is all set to release on 9th March, 2012.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X