For Quick Alerts
  ALLOW NOTIFICATIONS  
  For Daily Alerts

  ಬಂಗಾರಿಯಾದ ಲೂಸ್ ಮಾದ ಅಲಿಯಾಸ್ ಯೋಗೇಶ್

  By Rajendra
  |

  ಸಿದ್ಲಿಂಗು ಚಿತ್ರದ ಬಳಿಕ ಲೂಸ್ ಮಾದ ಅಲಿಯಾಸ್ ಯೋಗೇಶ್ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಚಿತ್ರಕ್ಕೆ ಬಂಗಾರಿ ಎಂದು ಹೆಸರಿಡಲಾಗಿದೆ. ಚಿತ್ರದ ನಾಯಕಿ ರಾಗಿಣಿ ದ್ವಿವೇದಿ. ಮಾ.ಚಂದ್ರು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಇತ್ತೀಚೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆರಂಭ ಫಲಕ ತೋರುವ ಮೂಲಕ ಚಾಲನೆ ನೀಡಿದರು.

  ದಯಾಳ್ ಪದ್ಮನಾಭನ್ ಜೊತೆ ಕೆಲಸ ಮಾಡಿರುವ ಅನುಭವ ಮಾ.ಚಂದ್ರು ಅವರಿಗಿದೆ. ಕತೆ, ಚಿತ್ರಕತೆ ಕೂಡ ಅವರದೆ. ಮೂರು ವರ್ಷಗಳ ಹಿಂದೆಯೇ ಚಿತ್ರಕತೆ ಸಿದ್ಧ ಮಾಡಿಕೊಂಡಿದ್ದರಂತೆ. ಕಾಲಕಾಲಕ್ಕೆ ಅದನ್ನು ಬದಲಾಯಿಸಿದ್ದೇನೆ. ಒಟ್ಟು 65 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು ಬಹುತೇಕ ಶೂಟಿಂಗ್ ಕೋಲಾರದಲ್ಲಿ ನಡೆಯಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

  ತಮಿಳು ನಟ ದಂಡಪಾಣಿ ಚಿತ್ರದಲ್ಲಿ ವಿಶೇಷ ಪಾತ್ರವನ್ನು ಪೋಷಿಸುತ್ತಿದ್ದಾರೆ. ಚಿತ್ರದ ನಿರ್ಮಾಪಕರು ಎಲ್ಲಪ್ಪ. ನಿರಂಜನ್ ಬಾಬು ಅವರ ಛಾಯಾಗ್ರಹಣ ಹಾಗೂ ನೀಲ್ ಅವರ ಸಂಗೀತ ಚಿತ್ರಕ್ಕಿದೆ. ಬಂಗಾರಿ ಪಾತ್ರ ನನಗೆ ಹೊಸದು. ಹೀರೋ ಪ್ರಧಾನ ಪಾತ್ರ. ಒಬ್ಬ ಮುಗ್ಧ ಹಳ್ಳಿ ಹುಡುಗನಾಗಿ ಚಿತ್ರದಲ್ಲಿ ಕಾಣಿಸಲಿದ್ದೇನೆ ಎಂದಿದ್ದಾರೆ ಯೋಗೇಶ್. (ಏಜೆನ್ಸೀಸ್)

  English summary
  Loose Mada alias Yogish new movie Bangari launched. Ragini Dwivedi plays lady lead in the movie. Ma. Chandru is the director of the movie. Ellappa is the producer of this film Niranjan Babu is the cinemetographer of this film while Neel is the music director. Neel has composed all the songs of the film already.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X