ಸ್ಟಾರ್ ವಾರ್ ನಲ್ಲಿ ವಿಜಯ್ ವಿರುದ್ಧ ಗೆದ್ದ ಸೂರ್ಯ
ಆಸ್ಟ್ರೇಲಿಯಾ ಬಾಕ್ಸ್ ಆಫೀಸ್ ವರದಿಯಂತೆ ತಮಿಳು ಸ್ಟಾರ್ ಸೂರ್ಯ ನಟನೆಯ '7 ಅಮ್ ಅರಿವು' ಚಿತ್ರ, ವಿಜಯ್ ನಟನೆಯ 'ವೇಲಾಯುಧಮ್' ಚಿತ್ರದ ವಿರುದ್ಧ ಗೆದ್ದಿದೆ. ಎರಡೂ ಚಿತ್ರಗಳೂ ಜನಪ್ರಿಯತೆಯ ದೃಷ್ಟಿಯಲ್ಲಿ ಸಮಾನತೆ ಸಾಧಿಸಿದ್ದರೂ, ಗಳಿಕೆಯಲ್ಲಿ ಸೂರ್ಯ ಚಿತ್ರ ಗೆದ್ದಿದ್ದು ಸೂರ್ಯ ಅಭಿಮಾನಿಗಳಿಗೆ ಕೋಡು ಮೂಡಿಸಿದೆ.
ಆಸ್ಟ್ರೇಲಿಯನ್ ಬಾಕ್ಸ್ ಆಫೀಸ್ ವರದಿಯಂತೆ, ಪ್ರತಿ ಪ್ರದರ್ಶನದ ಸರಾಸರಿಯಲ್ಲಿ ಸೂರ್ಯ ಚಿತ್ರ $853 ಗಳಿಸಿದ್ದರೆ ವಿಜಯ್ ಚಿತ್ರ ಕೇವಲ $840 ಗಳಿಸಿದೆ. ಜಗತ್ತಿನ ಬಾಕ್ಸ್ ಆಫೀಸ್ ವರದಿಯನ್ನಾದರಿಸಿದರೆ ಮೊದಲ ಬಿಡುಗಡೆಯಾದ ಮೊದಲ ವಾರದಲ್ಲಿ ಎರಡೂ ಚಿತ್ರಗಳೂ ರು. 40 ಕೋಟಿ ದಾಟಿವೆ. ಇದೇ ದಿನ ಬಿಡುಗಡೆಯಾದ ಬಿಗ್ ಬಜೆಟ್ ನ ಹಾಲಿವುಡ್ ಮಾದರಿಯ ಬಾಲಿವುಡ್ ಚಿತ್ರ "ರಾ ಒನ್" ಗಳಿಕೆಯಲ್ಲಿ ಕುಸಿತ ಕಂಡಿದೆ.
ಈ ಸೌತ್ ಇಂಡಿಯಾದ ಚಿತ್ರಗಳು ಬಾಲಿವುಡ್ ಚಿತ್ರಕ್ಕೆ ಸಡ್ಡುಹೊಡೆದು ಗೆದ್ದಿವೆ. ಅದರಲ್ಲೂ ಸೂರ್ಯ ಹೆಚ್ಚು ಜನಪ್ರಿಯತೆಗೆ ಪಾತ್ರರಾಗಿದ್ದಾರೆ. ತೆಲುಗಿನಲ್ಲಿ ಕಾರ್ತಿ, ತಮಿಳಿನಲ್ಲಿ ಸೂರ್ಯ ಹೀಗೆ ಸಹೋದರರಿಬ್ಬರು ತಮ್ಮ ವಿಜಯಯಾತ್ರೆ ಮುಂದುವರಿಸಿದ್ದಾರೆ. ಬಹುಶಃ ಸೂರ್ಯನಿಗೆ ಇನ್ನಿಬ್ಬರು ಸಹೋದರರಿದ್ದರೆ ಕನ್ನಡ, ಮಲೆಯಾಳಂ ಸೇರಿಸಿ ಸೌತ್ ಇಂಡಿಯಾ ಗೆದ್ದುಬಿಡುತ್ತಿದ್ದರೋ ಏನೋ! (ಒನ್ ಇಂಡಿಯಾ ಕನ್ನಡ)


Click it and Unblock the Notifications











