»   » ಹಿಂದಿ ಬಾರದ್ದಕ್ಕೆ ಹಿಂದೆ ಬಿದ್ದ ದಿಗಂತ್

ಹಿಂದಿ ಬಾರದ್ದಕ್ಕೆ ಹಿಂದೆ ಬಿದ್ದ ದಿಗಂತ್

Subscribe to Filmibeat Kannada
Diganth
'ಕೈಗೆ ಬಂದ ತುತ್ತು ಬಾಯಿ ಬರಲಿಲ್ಲ' ಎಂಬ ಗಾದೆ ದಿಗಂತ್ ಜೀವನದಲ್ಲಿ ಅಕ್ಷರಶಃ ಸತ್ಯವಾಗಿದೆ. ಬಾಲಿವುಡ್ ಚಿತ್ರದಲ್ಲಿ ನಟಿಸುವ ಅವಕಾಶ ತಪ್ಪಿಹೋಗಿದೆ. ದಿಗಂತ್ ಪರಿಸ್ಥಿತಿ ಭೂಮಿ ಬಾಯ್ಬಿಟ್ಟಂತೆ ಆಕಾಶ ಕಳಚಿ ಬಿದ್ದಂತೆ ಆಗಿದೆ. ರಣದೀಪ್ ಹೊಂಡ, ನಂದಿತಾ ದಾಸ್ ಮುಖ್ಯ ಭೂಮಿಕೆಯಲ್ಲಿರುವ ಹಿಂದಿ ಮತ್ತು ಇಂಗ್ಲಿಷ್ ಚಿತ್ರವೊಂದರಲ್ಲಿ ನಟಿಸುತ್ತಿದ್ದೇನೆ ಎಂದು ಹೇಳಿಕೊಂಡು ತಿರುಗುತ್ತಿದ್ದ ಕನ್ನಡ ಹುಡುಗ ದಿಗಂತ್ ಮುಖದಲ್ಲಿ ನಿರಾಸೆಯ ಕಾರ್ಮೋಡ ಕವಿದಿದೆ.

ಉತ್ತರ ಭಾರತೀಯರು ಮತ್ತು ದಕ್ಷಿಣ ಭಾರತೀಯರ ಹಿಂದಿ ಮಾತನಾಡುವ ಶೈಲಿಯಲ್ಲಿ ತುಂಬ ವ್ಯತ್ಯಾಸವಿರುತ್ತದೆ. ದಿಗಂತ್ ರ ಹಿಂದಿ ಶೈಲಿ ಆ ಚಿತ್ರಕ್ಕೆ ಹೊಂದಿಕೆಯಾಗುತ್ತಿರಲಿಲ್ಲವಂತೆ. ಅವರಿಗೆ ಹಿಂದಿ ಮಾತನಾಡಲು ಸರಿಯಾಗಿ ಬರುವುದಿಲ್ಲ ಎಂಬ ಕಾರಣ ನೀಡಿ ದಿಗಂತ್ ರನ್ನು ಕೈಬಿಡಲಾಗಿದೆಯಂತೆ.ಈ ಬಗ್ಗೆ ದಿಗಂತ್ ಅವರನ್ನು ಕೇಳಿದರೆ ಇನ್ನೂ ಯಾವುದೇ ವಿಷಯ ಇತ್ಯರ್ಥವಾಗಿಲ್ಲ ಎಂದಷ್ಟೆ ಹೇಳಿ ಮೌನಕ್ಕೆ ಶರಣಾಗುತ್ತಾರೆ.

ಒಟ್ಟಿನಲ್ಲಿ 'ಮುಂಗಾರು ಮಳೆ' ಮತ್ತು 'ಗಾಳಿಪಟ' ಚಿತ್ರದಲ್ಲಿ ಎರಡನೇ ನಾಯಕನಾಗಿ ನಟಿಸಿದ್ದರೂ ಪ್ರೇಕ್ಷಕ ಮಹಾಪ್ರಭುಗಳು ದಿಗಂತ್ ರನ್ನು ಅಷ್ಟಾಗಿ ಸ್ವೀಕರಿಸಲಿಲ್ಲ.ದಿಗಂತ್ ನಟನೆಯ 'ಮಸ್ತ್ ಮಜಾ ಮಾಡಿ' ಚಿತ್ರ ಬಿಡುಗಡೆಯಾಗಬೇಕಿದೆ. ಬಾಲಿವುಡ್ ಬಗ್ಗೆ ಶಾನೆ ಆಸೆ ಇಟ್ಟುಕೊಂಡಿದ್ದ ದಿಗಂತ್ ಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಛೇ, ಹೀಗಾಗಬಾರದಿತ್ತು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಬಾಲಿವುಡ್ ಅಂಗಳಕ್ಕೆ ದಿಗಂತ್ ಜಿಗಿತ

Please Wait while comments are loading...