»   » ಚಂದ್ರಶೇಖರ್ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್

ಚಂದ್ರಶೇಖರ್ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್

Subscribe to Filmibeat Kannada
Ganesh
'ಬಿಂದಾಸ್' ಚಿತ್ರದ ನಿರ್ಮಾಪಕ ಎಂ.ಚಂದ್ರಶೇಖರ್ ಮತ್ತೊಂದು ಚಿತ್ರದ ಸಿದ್ಧತೆಯಲ್ಲಿದ್ದಾರೆ. ಬಿಂದಾಸ್ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ನಟಿಸಿದ್ದರು.ಆಗ ಸಿಕ್ಸರ್ ಮಿಸ್ಸಾಗಿತ್ತು. ಈ ಸಲ ಹೇಗಾದರೂ ಮಾಡಿ ಸಿಕ್ಸರ್ ಬಾರಿಸಲೇ ಬೇಕೆಂದು ಗೋಲ್ಡನ್ ಸ್ಟಾರ್ ಗಣೇಶ್ ರನ್ನು ಮೈದಾನಕ್ಕೆ ಇಳಿಸುತ್ತಿದ್ದಾರೆ.

'ಸಿಕ್ಸರ್', 'ಮೊಗ್ಗ್ಗಿನ ಮನಸು' ನಂತಹ ಯಶಸ್ವಿ ಚಿತ್ರಗಳನ್ನು ಕೊಟ್ಟ ಶಶಾಂಕ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಪ್ರಸ್ತುತ 'ಉಲ್ಲಾಸ ಉತ್ಸಾಹ' ಚಿತ್ರದಲ್ಲಿ ಗಣೇಶ್ ಬ್ಯುಸಿಯಾಗಿದ್ದು ಅದರ ಚಿತ್ರೀಕರಣ ಮುಗಿದ ನಂತರ ಹೊಸ ಪ್ರಾಜೆಕ್ಟ್ ಗೆ ಕೈಹಾಕಲಿದ್ದಾರೆ.ಚಿತ್ರದ ಕತೆ ಸಹ ಅಂತಿಮವಾಗಿಲ್ಲ. ಜನವರಿ 15ರ ನಂತರ ಎಲ್ಲವೂ ಒಂದು ಹಂತಕ್ಕೆ ಬರಲಿದೆ ಎನ್ನುತ್ತಾರೆ ಚಂದ್ರಶೇಖರ್.

ಗಣೇಶ್ ಚಿತ್ರವನ್ನು ಹೊರತುಪಡಿಸಿದರೆ ಚಂದ್ರಶೇಖರ್ ಮತ್ತೆರಡು ಚಿತ್ರಗಳನ್ನು ನಿರ್ಮಿಸಲಿದ್ದಾರೆ. ಒಂದು ರೀಮೇಕ್ ಚಿತ್ರ.ಮತ್ತೊಂದು ಸ್ವಮೇಕ್ ಚಿತ್ರ. ರೀಮೇಕ್ ಚಿತ್ರದಲ್ಲಿ ದರ್ಶನ್ ನಟಿಸಲಿದ್ದು ಸ್ವಮೇಕ್ ಚಿತ್ರದಲ್ಲಿ ಶಿವರಾಜ್ ಕುಮಾರ್ ನಟಿಸಲಿದ್ದಾರೆ. ಈಗಾಗಲೆ ಚಂದ್ರಶೇಖರ್ ಅವರು ರೀಮೇಕ್ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ಅದು ಯಾವ ಭಾಷೆಯ ಚಿತ್ರ ಎಂಬುದನ್ನು ಚಂದ್ರಶೇಖರ್ ಗುಟ್ಟಾಗಿಟ್ಟಿದ್ದಾರೆ. ಶೀಘ್ರದಲ್ಲೇ ಅದನ್ನು ಬಹಿರಂಗ ಪಡಿಸುವುದಾಗಿ ತಿಳಿಸಿದ್ದಾರೆ. ಈ ಎರಡು ಚಿತ್ರಗಳ ನಿರ್ದೇಶಕರು ಯಾರೆಂಬುದು ಇನ್ನೂ ನಿರ್ಧಾರವಾಗಿಲ್ಲ.ಏಪ್ರಿಲ್ ನಂತರ ಎಲ್ಲ ವಿವರಗಳನ್ನು ನೀಡುವುದಾಗಿ ಅವರು ತಿಳಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada